ತಾಳಿ ಕಟ್ಟಲು ಹಸೆಮಣೆ ಏರಿದವನ ಮನಸ್ಸಿನಲ್ಲಿ ಕಣ್ಮರೆಯಾದ ಹಳೇ ಹುಡುಗಿ ಕಾಟ ಕೊಡಲು ಶುರು ಮಾಡುತ್ತಾಳೆ… ಬಿಟ್ಟೂ ಬಿಡದಂತೆ ನೆನಪುಗಳಲ್ಲೇ ಕಾಡುತ್ತಾಳೆ. ʻʻಮದುವೆಮನೆಗೆ ಬರೋತನಕ ಯಾಕೆ ಕಾಯಬೇಕಿತ್ತು? ಮೊದಲೇ ಹೇಳಿಬಿಟ್ಟಿದ್ದರೆ ಆಗ್ತಿತ್ತು…ʼʼ ಅಂದುಕೊಂಡರೆ, ಆ ಪ್ರಯತ್ನ ಕೂಡಾ ನಡೆದಿರುತ್ತದೆ. ಹುಡುಗ ಹೇಳಿದ ಸತ್ಯವನ್ನು ಅರಗಿಸಿಕೊಳ್ಳದ ಹುಡುಗಿ ʻʻಹೇ ತಮಾಷೆ ಮಾಡ್ಬೇಡ ಸುಮ್ನಿರಪ್ಪ…ʼʼ ಅಂತಾ ಹೇಳಿ ಸುಮ್ಮನಾಗಿರುತ್ತಾಳೆ. ನಿಜಕ್ಕೂ ಇವನಿಗೆ ಮದುವೆಯಲ್ಲಿ ಇಷ್ಟವಿಲ್ಲ ಅನ್ನೋದು ಗೊತ್ತಾಗೋದೇ ಮದುವೆಯ ದಿನ. ಅವಳು ರಾಧೆ. ಯಾವ ಹುಡುಗರನ್ನೂ ಒಪ್ಪದವಳು, ನೋಡೋಕೆ ಮುಂಚೇನೆ […]
ಅದು ಅರಣ್ಯವೊಂದಕ್ಕೆ ಅಂಟಿಕೊಂಡಂತಾ ಊರು. ಹೆಸರು ಬದನಾಳು. ಆ ಊರಿನಲ್ಲೇ ಇರುವ ನಾಲ್ಕಾರು ಪ್ರಮುಖರಲ್ಲಿ ಒಬ್ಬೊಬ್ಬರದ್ದು ಒಂದೊಂದು ಪಂಗಡ, ಜಾತಿ… ಮೇಲು ಕೀಳುಗಳ ತಾರತಮ್ಯ, ವ್ಯಾಜ್ಯಗಳು ಅಲ್ಲಿ ತಲೆಮಾರುಗಳಿಂದಲೂ ಚಾಲ್ತಿಯಲ್ಲಿರುತ್ತವೆ. ಅದರ ಕಟ್ಟಕಡೆಯ ಕೊಂಡಿಯಂತೆ ನಿಂತವನು ಪೆಪೆ. ತಾತ ರಾಯಪ್ಪ, ತಂದೆ ತಿಮ್ಮಪ್ಪ, ಮಾವ ಗುಣ.. ಹೀಗೆ ತನ್ನ ವಂಶದ ಒಬ್ಬೊಬ್ಬರನ್ನೇ ಬಲಿ ತೆಗೆದುಕೊಳ್ಳಲು ನಿಂತ ಮಲಬಾರಿ ಫ್ಯಾಮಿಲಿ. ರಾಯಪ್ಪ ಮತ್ತು ಮಲಬಾರಿ ಫ್ಯಾಮಿಲಿಯ ನಡುವೆ ಕಡ್ಡಿ ಗೀರುವ ಬ್ರಾಹ್ಮಣ್ಯ ಇತ್ಯಾದಿಗಳ್ನು ಸೇರಿಸಿ ಇಡೀ ಸಿನಿಮಾವನ್ನು ಅನೇಕ […]
ಬೆಂಗಳೂರು ಇಷ್ಟೊಂದು ಕೆಟ್ಟೋಗಿದ್ಯಾ? ಗಾಂಜಾ ಅನ್ನೋ ಮಾದಕ ವಸ್ತು ಮಕ್ಕಳ ಬದುಕನ್ನು ಈ ಮಟ್ಟಿಗೆ ಆಪೋಶನ ತೆಗೆದುಕೊಳ್ಳುತ್ತಿದೆಯಾ? ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವಾಗಲೂ ಈ ಮಾಫಿಯಾವನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ವಾ? ಅಸಲಿಗೆ ಗಾಂಜಾ ಕೃಷಿ ಮಾಡುತ್ತಿರುವವರು ಯಾರು? ಇದು ಹೇಗೆ ಹದಿಹರೆಯದವರ ಕೈಗೆ ಸಿಗುತ್ತಿದೆ? ಇದರ ಹಿಂದೆ ಯಾರೆಲ್ಲಾ ಇರಬಹುದು? ರಾಜಕಾರಣಿಗಳ ಕೈವಾಡವಿರಬಹುದಾ? ಪೊಲೀಸ್ ವ್ಯವಸ್ಥೆಯಲ್ಲೇ ಲೋಪವಿದೆಯಾ…? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆಗೆ ಉತ್ತರವನ್ನೂ ಹುಡುಕಿಕೊಟ್ಟಿದ್ದಾನೆ ʻಭೀಮʼ! ಬೆಂಗಳೂರಿನ ಏರಿಯಾವೊಂದರಲ್ಲಿ ಬೈಕ್ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ […]
ಆತ ಮಹಾನ್ ದುಷ್ಟ. ಲೇವಾದೇವಿ ವ್ಯವಹಾರ ಮಾಡಿಕೊಂಡು ಓಡಾಡುವವನು. ಅವನು ಒಂಟಿಕೊಪ್ಪಲ್ ದೇವರಾಜ! ಬಡ್ಡಿ ವ್ಯಾಪಾರಿ ಅಂದಮೇಲೆ ರೌಡಿ ಕೂಡಾ ಆಗಿರಲೇಬೇಕು ಅನ್ನೋದು ಜಗತ್ತಿನ ಅಘೋಷಿತ ನಿಯಮ. ಇಲ್ಲಿ ಸಾಲ ಕೊಟ್ಟವರು ಅಥವಾ ಈಸಿಕೊಂಡವರು ಇಬ್ಬರಲ್ಲಿ ಯಾರು ಔಟ್ ಆಗ್ತಾರೆ? ಮತ್ಯಾರು ನಾಟ್ ಔಟ್ ಅನ್ನೋದು ಸಿನಿಮಾದ ಕೊನೆಯ ಕುತೂಹಲ! ಮಾಂಸ ಕತ್ತರಿಸೋನು ಕುರಿಯನ್ನು ಕಂಡು ಮರುಕಪಡಲು ಸಾಧ್ಯವೇ? ಹಾಗೆಯೇ ಸಾಲ ಕೊಡೋದನ್ನೇ ಕಸುಬಾಗಿಸಿಕೊಂಡವನಿಗೆ ಕರುಣೆ ಎಲ್ಲಿಂದ ಬರಬೇಕು? ಸಮಯಕ್ಕೆ ಸರಿಯಾಗಿ ಬಡ್ಡಿ, ಅಸಲು ಕೊಡದೇ ತಪ್ಪಿಸಿಕೊಂಡವರನ್ನು […]
2.5/5 ಅದು ಉತ್ತರ ಕರ್ನಾಟಕದ ದೊಡ್ಡ ಕುಟುಂಬ. ಯಾವುದೋ ಕಾರಣಕ್ಕೆ ಮಗ-ಸೊಸೆ ಮನೆಯಿಂದ ದೂರವಾಗಿರುತ್ತಾರೆ. ದೇಸಾಯಿ ಮನೆತನದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಮನೆತನದ ಮರ್ಯಾದೆ ತೆಗೆಯಲು ನಿಂತವನೊಬ್ಬ. ಎಲ್ಲರನ್ನೂ ಒಟ್ಟುಮಾಡಲು ಬಂದವನೊಬ್ಬ. ಈ ನಡುವೆ ಚೆಲ್ಲಾಪಿಲ್ಲಿಯಾದ ಕುಟುಂಬ ಮತ್ತೆ ಜೊತೆಯಾಗಲು ಸಾಧ್ಯವಾಗುತ್ತದಾ? ಹಾಗೊಮ್ಮೆ ಎಲ್ಲರೂ ಸೇರುವುದಾದರೆ ಏನೆಲ್ಲಾ ವಿಚಾರಗಳು ಬಂದು ಹೋಗುತ್ತವೆ? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡಿರುವ ಕೌಟುಂಬಿಕ ಕಥಾಹಂದರದ ಚಿತ್ರ ದೇಸಾಯಿ. ಒಂದು ಕಾಲದಲ್ಲಿ ಅಪ್ಪ ಅಮ್ಮನನ್ನು ತೊರೆದು ಬಂದ ಮಗ ತನ್ನ ಬದುಕಲ್ಲಿ ಮಗ […]
4 n 6 ಈ ಹೆಸರು ಕೇಳುತ್ತಿದ್ದಂತೇ ಇದೊಂದು ಥ್ರಿಲ್ಲರ್ ಜಾನರಿನ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಹೌದು ಇದೊಂದು ಸಸ್ಪೆನ್ಸ್ ಹಾಗೂ ಪೊಲೀಸ್ ಇನ್ವೆಸ್ಟಿಗೇಷನ್ ಸುತ್ತ ಬೆಸೆದುಕೊಂಡಿರುವ ಕಥಾಹಂದರ ಹೊಂದಿರುವ ಸಿನಿಮಾ. ಎರಡು ಕೊಲೆಗಳ ಸುತ್ತ ಸುತ್ತುವ ಕೌತುಕಮಯ ವಿಚಾರಗಳು ಇಲ್ಲಿವೆ. ಸಿನಿಮಾದ ಮೊದಲಾರ್ಧ ಹೇಗಿದೆ..? ನಾಯಕಿ ತುಂಬಾ ಬುದ್ದಿವಂತೆ, ಚುರುಕು ಸ್ವಭಾವದವಳು, ಯಾವುದೇ ವಿಚಾರವನ್ನು ಬಹುಬೇಗ ಅರ್ಥಮಾಡಿಕೊಳ್ಳಬಲ್ಲ ಇಂಟಲಿಜೆಂಟ್ ಅನ್ನೋದನ್ನು ಆಕೆಯ ಬಾಲ್ಯವನ್ನು ಪರಿಚಯಿಸುತ್ತಲೇ ಹೇಳಿಬಿಡಿತ್ತಾರೆ. ಇದು ಸಿನಿಮಾದ ಮುಂದಿನ ದೃಶ್ಯಗಳಿಗೆ ಪೂರಕವಾಗಿವೆ. ರಚನಾ ಇಂದರ್ […]
Tharini_Movie_reviw_cinibuzz_arunkuamar_g
ಸಂತೋಷ್ ಆನಂದ್ ರಾಮ್ ಅವರ ಐದನೇ ಕಲಾಕೃತಿ ತೆರೆ ಮೇಲೆ ಅರಳಿಕೊಂಡಿದೆ. ಈ ಹಿಂದೆ ಸಂತೋಷ್ ನಿರ್ದೇಶನ ಮಾಡಿದ್ದೆಲ್ಲಾ ಸ್ಟಾರ್ ನಟರಿಗೆ. ಈ ಬಾರಿ ಹೊಸಾ ನಾಯಕನಟನನ್ನು ಲಾಂಚ್ ಮಾಡುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದರು. ಅದನ್ನು ನೇರ್ಪಾಗಿ ಮಾಡಿದ್ದಾರಾ? ಡಾ.ರಾಜ್ ಕುಟುಂಬದ ಮತ್ತೊಂದು ಕುಡಿಯ ಸಿನಿಮಾವನ್ನು ಯಾವ ಮಟ್ಟದಲ್ಲಿ ಕಟ್ಟಿ ನಿಲ್ಲಿಸಿದ್ದಾರೆ? ಕಳೆದ ಎರಡು ಸಿನಿಮಾಗಳ ಭಯಾನಕ ಸೋಲಿನಿಂದ ಸ್ವತಃ ಸಂತೋಷ್ ಆನಂದರಾಮ್ ಹೊರಬಂದಿದ್ದಾರಾ? ಹೊಂಬಾಳೆ ಜೊತೆಗಿನ ನಾಲ್ಕನೇ ಸಲದ ನಡಿಗೆ ಗೆಲುವಾಗಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರದಂತೆ […]
ಅರುಣ್ ಕುಮಾರ್ ಜಿ. ಮೂವರು ಹುಡುಗರು, ಮೂವರು ಹುಡುಗಿಯರು, ಮೂರು ಲವ್ ಸ್ಟೋರಿ… ಮೂರೂ ಕತೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಪ್ರ್ಯೇಕವಾಗಿ ಸಾಗುತ್ತಿರುತ್ತದೆ. ಕಟ್ಟಕಡೆಯದಾಗಿ ಈ ಮೂರು ಕತೆಗಳು ಹೇಗೆ ಒಂದು ಕಡೆ ಕೂಡುತ್ತವೆ ಅನ್ನೋದು ಬಹುಮುಖ್ಯ ಅಂಶ. ʻಚೌಚೌ ಬಾತ್ʼ ಹೈಪರ್ ಲಿಂಕ್ ಸಿನಿಮಾ. ಕೆಂಜ ಚೇತನ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವಿದು. ಪ್ರೇಮಗೀಮ ಜಾನೆದೋ ಮತ್ತು ದೇವರು ಬೇಕಾಗಿದ್ದಾರೆ ಎಂಬೆರಡು ಚಿತ್ರಗಳನ್ನು ನೀಡಿದ್ದ ಚೇತನ್ ಕುಮಾರ್ ಬಲು ಶ್ರದ್ಧೆ ವಹಿಸಿ ರೂಪಿಸಿರುವ ಚಿತ್ರ ಚೌಚೌ ಬಾತ್. […]
ಅವನು ಭಯಂಕರ ಒರಟ. ಗಂಡಸು, ಹೆಂಗಸು ಅನ್ನೋದನ್ನೂ ನೋಡದೆ ಯಾರೆಂದರೆ ಅವರ ಮೇಲೆ ಮುರಕೊಂಡು ಬೀಳುವ ಕೋಪಿಷ್ಟ. ಎರಡು ಎಕರೆ ಗದ್ದೆ, ತೋಟ ಖರೀದಿ ಮಾಡೋದೇ ಇವನಿಗೆ ಬದುಕಿನ ಪರಮ ಗುರಿ. ಹೆಸರು ಕೆರೆಮನೆ ನಾಗ! ರಾಜಾರೋಷವಾಗಿ ನಾಟಾ ಕಳ್ಳಸಾಗಾಣೆ ಮಾಡಿಕೊಂಡಿದ್ದ ನಾಗ ಜೈಲಿಂದ ಹೊರಬಂದಿರುತ್ತಾನೆ. ಮಲೆನಾಡ ಗೊಂಬೆಯೊಂದನ್ನು ನೋಡಿ ಈ ಮನೆಹಾಳನ ಮನಸೋಲುತ್ತದೆ. ಜಾತಿ ಕಾರಣಕ್ಕೆ ಒಲ್ಲೆ ಅನ್ನುವ ಅವರಪ್ಪನ ವಿರೋಧವನ್ನೂ ಲೆಕ್ಕಿಸದೆ ಹುಡುಗಿಯನ್ನು ಎತ್ತಾಕಿಕೊಂಡು ಬರುತ್ತಾನೆ. ಮುಂದೆ ಯಾರೂ ನಿರೀಕ್ಷಿಸಲೂ ಸಾಧ್ಯವಾಗದ ತಿರುವುಗಳು ಘಟಿಸುತ್ತವೆ. […]