KATERA_UPADHYAKSHA_DARSHAN_CHIKKANNA_FILM_JOURNALIST_ARUNKUMAR_G
ಅನುರಾಗ್ ನಾಯಿ ಬಾಲ ಯಾವತ್ತಿದ್ದರೂ ಡೊಂಕು ಎಂಬ ಗಾದೆ ಮಾತು ಸುಳ್ಳಲ್ಲ. ಪಾನ್ ಮಸಾಲ ಜಾಹಿರಾತೊಂದರಲ್ಲಿ ಭಾಗವಹಿಸಿ, ಟ್ರೋಲ್ ಗೆ ಒಳಗಾಗಿದ್ದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಇನ್ನು ಇಂತಹ ಉತ್ಪನ್ನಗಳ ಜಾಹಿರಾತಿನಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಆದರೆ ಇದೀಗ ತಾವು ಯಾವ ಉತ್ಪನ್ನಕ್ಕೆ ಜಾಹಿರಾತು ನೀಡಲ್ಲ ಎಂದು ಪ್ರಚಾರ ರಾಯಭಾರಿತ್ವದಿಂದ ಹಿಂದೆ ಸರಿದಿದ್ದರೋ, ಮತ್ತೊಮ್ಮೆ ಅದೇ ವಿಮಲ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ವಿಪರೀತ ಟ್ರೋಲ್ ಗೆ ಒಳಗಾಗಿದ್ದಾರೆ. ಕೇವಲ ಅಕ್ಷಯ್ ಮಾತ್ರವಲ್ಲದೇ ಈ ಜಾಹಿರಾತಿನಲ್ಲಿ ಬಾಲಿವುಡ್ […]
ಅನುರಾಗ್ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಿಪ್ ಲಾಕ್ ಮೂಲಕವೇ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಟಾಲಿವುಡ್ ಚಿತ್ರಗಳಾದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ, ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಿ ಫೇಮಸ್ ಆಗಿದ್ದಳು. ಈಗ ಇದೇ ರಶ್ಮಿಕಾ ಬಾಲಿವುಡ್ ನಟನ ತುಟಿಗೆ ತುಟಿಯಿಟ್ಟು ಲಲ್ಲೆಗರೆದಿದ್ದಾಳೆ. ತೆಲುಗಿನ ಸ್ಟಾರ್ ಡೈರೆಕ್ಟರ್ ಸಂದೀಪ್ ವಂಗಾ ನಿರ್ದೇಶನದ ಎರಡನೇ ಬಾಲಿವುಡ್ ಚಿತ್ರ, ‘ಅನಿಮಲ್’ ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಸದ್ಯ ಪ್ರಚಾರದ ಭಾಗವಾಗಿ ಅಕ್ಟೋಬರ್ 11 ರಂದು […]
ಯಾವ ಊರಿನವರಾದರೇನು? ಯಾವ ದೇಶದವರಾದರೇನು? ಹೆಣ್ಣುಮಕ್ಕಳು ಅಂದಮೇಲೆ ಗೌರವಿಸಲೇಬೇಕು. ತೀರಾ ಅವರನ್ನು ಶೋಕೇಸ್ ಗೊಂಬೆಗಳಂತೆ ಬಳಸಿಕೊಳ್ಳೋದು ಅಮಾನವೀಯ. ನೆನ್ನೆ ದಿನ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಟಿ ಕೂಡಾ ಅದಾಗಿತ್ತು. ಧ್ರುವ ಸರ್ಜಾ ಕೂಡಾ ಈಗ ಇಂಡಿಯಾದ ಟಾಪ್ ಹೀರೋಗಳ ಸಾಲಿಗೆ ಬಂದು ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಅದು ಬಹುತೇಕ ಯಶಸ್ವಿಯಾಗೋದು ನಿಜ. ಸ್ವಂತ ಸೋದರ ಮಾವ ಅರ್ಜುನ್ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್ʼಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗೆ ನೋಡಿದರೆ ಮೂರು ದಶಕಗಳ […]
ಈ ಗುಳ್ಟು ಹುಡುಗ ನವೀನ್ ಶಂಕರ್ ತಲೆಗೆ ಯಾರಾದರೂ ನಾಲ್ಕು ಮೊಟಕೋರು ಬೇಕಲ್ಲಾ? ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋಕೆ ಈತನಿಗೇನು ಧಾಡಿ? ಹಾಳಾದೋನು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ಮೂರು ವರ್ಷ ಸತಾಯಿಸುತ್ತಾನೆ…. -ʻಹೊಂದಿಸಿ ಬರೆಯಿರಿʼ ಎನ್ನುವ ಫ್ರೆಷ್ ಸಿನಿಮಾ ನೋಡಿದ ಮೇಲೆ ಯಾರಿಗಾದರೂ ಹೀಗನ್ನಿಸದೇ ಇರೋದಿಲ್ಲ. ಅದರಲ್ಲೂ ನವೀನ್ ಶಂಕರ್ ಬರೋದು ತೀರಾ ಕಡಿಮೆ ಅನ್ನಿಸುವಷ್ಟು ಕಡಿಮೆ ದೃಶ್ಯಗಳಲ್ಲಿ. ಆದರೆ ಇಡೀ ಸಿನಿಮಾವನ್ನು ನುಂಗಿಕೊಳ್ಳುತ್ತಾರೆ. ಬೆಳ್ಳಗೂ ಇಲ್ಲ, ಬಾಡಿ ಬಿಲ್ಡ್ ಮಾಡಿಲ್ಲ, ಬಿಲ್ಡಪ್ಪಂತೂ ಇಲ್ಲವೇ ಇಲ್ಲ ಅನ್ನೋದು […]
ಜೈದ್ ಖಾನ್ ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಅಪ್ಪ ಕರ್ನಾಟಕ ರಾಜ್ಯ ರಾಜಕಾರಣದ ವರ್ಣರಂಜಿತ ವ್ಯಕ್ತಿ. ಕೂತರೂ ನಿಂತರೂ ಸುದ್ದಿಯಾಗುವ ಉದ್ಯಮಿ. ಇಂಥರವ ಮಗ ಸಿನಿಮಾರಂಗಕ್ಕೆ ಬಂದಾಗ ಜನ ತಲೆಗೊಂದು ಮಾತಾಡಿದ್ದರು. ಯಾವಾಗ ಜೈದ್ ನಟನೆಯ ಮೊದಲ ಸಿನಿಮಾ ʻಬನಾರಸ್ʼ ಚಿತ್ರದ ʻಮಾಯ ಗಂಗೆʼ ಹಾಡು ಲೋಕಾರ್ಪಣೆಯಾಯಿತೋ? ಆಗ ಅಂದವರ ಅಂಡು ಸದ್ದು ನಿಲ್ಲಿಸಿತು. ʻಹುಡುಗ ಸಿನಿಮಾರಂಗದಲ್ಲಿ ಭದ್ರವಾಗಿ ನಿಲ್ಲೋದು ಗ್ಯಾರೆಂಟಿʼ ಅಂತಾ ಒಳಗೊಳಗೇ ಮಾತಾಡಿಕೊಂಡರು. ಅಪ್ಪನ ರಾಜಕಾರಣದ ವರ್ಚಸ್ಸು, ವ್ಯವಹಾರ, ಶ್ರೀಮಂತಿಕೆ – ಇವೆಲ್ಲದರ ಹೊರತಾಗಿ […]
ಭಾರತೀಯ ಚಿತ್ರರಂಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಬಿಟ್ಟರೆ ಬಹುಶಃ ಅತೀ ಹೆಚ್ಚು ಬ್ಯುಸೀ ಇರುವ ನಟ ಅಂದರೆ ಅದು ಡಾಲಿ ಧನಂಜಯ ಇರಬೇಕು! ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ ಸಿನಿಮಾಗೆ ʻಡಾಲಿʼ ಎನ್ನುವ ಪಾತ್ರವನ್ನು ಬರೆದರೋ? ಅದಕ್ಕೆ ಧನಂಜಯಾನೇ ಬೇಕು ಅಂತಾ ಚಾಯ್ಸ್ ಮಾಡಿದರೋ ಗೊತ್ತಿಲ್ಲ. ನುಗ್ಗಿಬಂದ ʻಟಗರುʼ ಜೊತೆ ಡಾಲಿಯ ನಸೀಬೇ ಬದಲಾಗಿಹೋಯ್ತು. ಕನ್ನಡ ಮಾತ್ರವಲ್ಲದೆ, ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಟಗರು ಬರುವ ಮುಂಚೆ ಇದೇ ಧನಂಜಯ […]