ಇಡೀ ಭಾರತದಲ್ಲೇ ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರು ಪಡೆದಿದೆ. ಇದು ಟೆಕ್ನಾಲಜಿ ಹಬ್ ಎನ್ನುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸ್ಟಾರ್ಟಪ್ ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳ ಪ್ರಧಾನ ಕಛೇರಿಗಳು ಇಲ್ಲಿ ತಲೆಯೆತ್ತಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಸದ್ಯ ಈ ಬೇಸಿಗೆಯಲ್ಲಿ ತಮ್ಮ ಶಾಪಿಂಗ್ ಮಾಡಲು ರಿಯಾಯಿತಿ ಮತ್ತು ಕಡಿಮೆ ಮೌಲ್ಯದ ವಸ್ತುಗಳನ್ನು ಹುಡುಕುತ್ತಿರುವವರಿಗೆ TV9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಅತ್ಯುತ್ತಮ ವೇದಿಕೆಯಾಗಿದೆ. […]
ಗಾಲಿ ಜನಾರ್ಧನರೆಡ್ಡಿ ಮಗ ಕಿರೀಟಿ ನಟಿಸುತ್ತಿರುವ ಜೂನಿಯರ್ ಚಿತ್ರದ ಚಿತ್ರೀಕರಣ ಪ್ಲಾನಿನಂತೇ ಸಾಗುತ್ತಿದೆ. ಈ ಚಿತ್ರಕ್ಕಾಗಿ ಕನ್ನಂಬಾಡಿ ಬಳಿಯ ಚಿಕ್ಕರಾಯಹಳ್ಳಿಯನ್ನು ವಿಜಯನಗರವನ್ನಾಗಿ ಮಾರ್ಪಡಿಸುತ್ತಿದ್ದಾರೆ. ಇಡೀ ಹಳ್ಳಿಯಲ್ಲಿ ಒಮ್ಮೆ ತಿರುಗಿದರೆ, ಯಾವುದು ನಿಜವಾದ ಮನೆ, ಯಾವುದು ಸೆಟ್ ಅಂತಲೇ ಗೊತ್ತಾಗುವುದಿಲ್ಲ. ಆಮಟ್ಟಿಗೆ ಖರ್ಚು ಮಾಡಿ ಹಳೆಯ ಗ್ರಾಮವನ್ನಾಗಿ ಪರಿವರ್ತಿಸಿದ್ದಾರೆ. ಬಾಹುಬಲಿ ಚಿತ್ರಕ್ಕೆ ಕಲಾನಿರ್ದೇಶನ ಮಾಡಿರುವ ಮನು ಜಗಧ್ ಈ ಸಿನಿಮಾಗೂ ಆರ್ಟ್ ಡೈರೆಕ್ಷನ್ ಮಾಡುತ್ತಿದ್ದಾರೆ. ಬರಿಯ ತೊಟ್ಟಿಮನೆ ನಿರ್ಮಾಣಕ್ಕೆ ಏನಿಲ್ಲವೆಂದರೂ ಕೋಟಿ ರುಪಾಯಿ ವ್ಯಯಿಸಿದ್ದಾರೆ. ಈ ಹಳ್ಳಿಯಲ್ಲಿ ಕನ್ನಡ […]
ಕುರಿ ಪ್ರತಾಪ ಅನ್ನೋ ಹೆಸರಿನ ಕಾಮಿಡಿ ನಟ ಒಬ್ಬ ಇದ್ದಾನಲ್ಲಾ? ಒಂದು ಕಾಲದಲ್ಲಿ ʻಕುರಿಗಳು ಸಾರ್ ಕುರಿಗಳುʼ ಎನ್ನುವ ಪ್ರಾಂಕ್ ಶೋದಿಂದ ಸಿಕ್ಕಾಪಟ್ಟೆ ಫೇಮಸ್ಸಾಗಿದ್ದವನು ಈತ. ಆ ಕಾರ್ಯಕ್ರಮದ ಮೂಲಕವೇ ಒಂದಿಷ್ಟು ಮಂದಿ ಸಿನಿಮಾದವರನ್ನು ಪರಿಚಯ ಮಾಡಿಕೊಂಡು, ಛಾನ್ಸು ಗಿಟ್ಟಿಸಿಕೊಂಡ. ಅದೇ ಹೊತ್ತಿಗೆ ಸಾಧು ಕೋಕಿಲನ ಹಾವಳಿ ಮಿತಿ ಮೀರಿ ಹೋಗಿತ್ತು. ಸಿನಿಮಾವೊಂದರಲ್ಲಿ ನಟಿಸಲು ಈತ ಲಕ್ಷಾಂತರ ರುಪಾಯಿ ಪ್ಯಾಕೇಜ್ ಡೀಲ್ ಮಾಡುತ್ತಿದ್ದರು. ಕಾಸು ಕೊಟ್ಟರೂ ಕೈಗೆ ಸಿಗದೆ ಆಟವಾಡಿಸುತ್ತಿದ್ದರು. ಪೇಮೆಂಟು ಈಸಿಕೊಂಡು ಸೀದಾ ಗೋವಾ, ಮಲೇಶಿಯಾ […]
Swipe right
ಸ್ವೈಪ್ ರೈಟ್
ಸಿನಿಮಾದ ಅಫಿಷಿಯಲ್ ಟೀಸರ್ ಈಗ ಬಿಡುಗಡೆಯಾಗಿದೆ. ನಮ್ಮೂರಿನಲ್ಲಿ ನಡೆದ ಘಟನೆಯೊಂದರ ಸುತ್ತ ನಡೆದ ವಿಚಾರವನ್ನೇ ಕಾಡುವಂತೆ ಕಟ್ಟಿದ್ದಾರೆ ಅನ್ನೋದರ ಸೂಚನೆ ಸಿಕ್ಕಿದೆ. ಅತಿರಂಜಕ ವಿಚಾರಗಳನ್ನು ತುರುಕದೇ ಹೇಳಬೇಕಾದ್ದನ್ನು ನೇರಾನೇರ ನಿರೂಪಿಸಿದ್ದಾರೆ ಅನ್ನೋದು ಟೀಸರಿನಲ್ಲೇ ಗೊತ್ತಾಗುತ್ತಿದೆ. ನೋ ಡೌಟ್! ಕನ್ನಡ ಚಿತ್ರರಂಗ ಪಥ ಬದಲಿಸುತ್ತಿದೆ. ಒಂದಕ್ಕಿಂತಾ ಒಂದು ಭಿನ್ನ ಚಿತ್ರಗಳಿಲ್ಲಿ ಜೀವಪಡೆಯುತ್ತಿವೆ. ಸಿನಿಮಾ ಅಂದರೆ ಹೀಗೇ ಇರಬೇಕು ಅಂತಾ ಅಘೋಷಿತ ಸೂತ್ರ, ಸಿದ್ದ ಚೌಕಟ್ಟಲ್ಲಿ ಒದ್ದಾಡುತ್ತಿದ್ದ ಕಾಲವೊಂದಿತ್ತು. ಅಲ್ಲಲ್ಲಿ ಕೆಲವರು ಹೊಸ ತನವನ್ನು ಪರಿಚಯಿಸುತ್ತಿದ್ದರು. ಆದರೆ ಈಗ ಕನ್ನಡ […]
ಲವ್ ಸಬ್ಜೆಕ್ಟಿನ ಸಿನಿಮಾ ಮಾಡುವವರು ತೀರಾ ಫ್ರೆಶ್ ಎನಿಸುವ ಸಂಭಾಷಣೆ ಬೇಕೆನಿಸಿದರೆ, ಹೇಗಾದರೂ ಅಜ್ಜೀಪುರದ ಈ ರವಿಯನ್ನು ಒಪ್ಪಿಸಿ ಬರೆಸಿಕೊಳ್ಳಿ. ಇವರು ರವಿ ಅಜ್ಜೀಪುರ. ಮಾಧ್ಯಮ ವಲಯದಲ್ಲಿವರು ಸದಾ ಪ್ರವಹಿಸುವ ಅಚ್ಚರಿ. ಪ್ರಿಂಟ್ ಮೀಡಿಯಾದಲ್ಲಿ ಹೆಸರು ಮಾಡುತ್ತಿದ್ದಾಗಲೇ ಸಡನ್ನಾಗಿ ಟೀವಿ ಮಾಧ್ಯಮದತ್ತ ಮುಖ ಮಾಡಿದವರು. ಅಲ್ಲಿಂದ ಮತ್ತೆ ಪತ್ರಿಕೆಯ ಕಡೆ ‘ಮನಸು’ ಕೊಟ್ಟವರು. ಪತ್ರಕರ್ತರಾಗಿದ್ದುಕೊಂಡೇ ವಿನ್ಯಾಸ ಕಲಾವಿದರಾಗಿ, ನೂರಾರು ಪುಸ್ತಕಗಳ ಮುಖಪುಟಗಳಿಗೆ ಬಣ್ಣ ತುಂಬಿದವರು. ಒಂದು ಪತ್ರಿಕೆಯ ಕಂಟೆಂಟ್ ಹೇಗಿರಬೇಕು ಅನ್ನೋದರ ಜೊತೆಗೆ ಅದರ ಪ್ರೆಸೆಂಟೇಷನ್ ಕೂಡಾ […]
ಸಚಿನ್ ಧನಪಾಲ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಚಿತ್ರ ‘ಚಾಂಪಿಯನ್’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕ್ರೀಡಾ ಚಿತ್ರವಾಗಿದ್ದು, ಅಥ್ಲೀಟ್ ಒಬ್ಬನ ಜೀವನದ ಕುರಿತಾಗಿ ಈ ಚಿತ್ರ ಸಾಗುತ್ತದಂತೆ. ಈ ಚಿತ್ರದಲ್ಲಿ ಅಥ್ಲೀಟ್ ಆಗಿ ಸಚಿನ್ ನಟಿಸಿದ್ದಾರೆ. ಚಿತ್ರದಲ್ಲಿ ಹೀರೋ ಆಗಿ ನಟಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಸಚಿನ್ಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇದ್ದರೂ, ಅದಕ್ಕಿಂತ ಹೆಚ್ಚಾಗಿ ಆರ್ಮಿಗೆ ಸೇರಿ ದೇಶಸೇವೆ ಮಾಡಬೇಕು ಎಂದು ಮನಸ್ಸಿತ್ತಂತೆ. ಅದು ಸಾಧ್ಯವಾಗದಿದ್ದರಿಂದ, ಅವರು ಈ ಕಡೆ […]
“ನನಗೇನಾದರೂ ಹೆಚ್ಚು ದುಡ್ಡು ಸಿಕ್ಕರೆ, ನಿನ್ನನ್ನು ಹೀರೋ ಮಾಡಿ ಒಂದು ಚಿತ್ರ ಮಾಡುತ್ತೇನೆ … ಎಂದು ಹೇಳಿದ್ದರಂತೆ ಶಿವಾನಂದ್ ಎಸ್. ನೀಲಣ್ಣನವರ್. ಅದರಂತೆ ಅವರು ನಡೆದುಕೊಂಡಿದ್ದು, ತಮ್ಮ ಸ್ನೇಹಿತನನ್ನು ಹೀರೋ ಆಗಿ ಮಾಡಿ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಈಗ ಆ ಚಿತ್ರ ಅಕ್ಟೋಬರ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಾಂಪಿಯನ್ ಕೋವಿಡ್ಗೂ ಮೊದಲೇ ಪ್ರಾರಂಭವಾದ ಚಿತ್ರ. ದಿವಂಗತ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಮೆಚ್ಚಿನ ಅಸೋಸಿಯೇಟ್ ಆಗಿದ್ದ ಶಾಹುರಾಜ್ ಶಿಂಧೆ ನಿರ್ದೇಶನದ ಚಿತ್ರ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವಾಗ […]
ಜೈದ್ ಖಾನ್ ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಅಪ್ಪ ಕರ್ನಾಟಕ ರಾಜ್ಯ ರಾಜಕಾರಣದ ವರ್ಣರಂಜಿತ ವ್ಯಕ್ತಿ. ಕೂತರೂ ನಿಂತರೂ ಸುದ್ದಿಯಾಗುವ ಉದ್ಯಮಿ. ಇಂಥರವ ಮಗ ಸಿನಿಮಾರಂಗಕ್ಕೆ ಬಂದಾಗ ಜನ ತಲೆಗೊಂದು ಮಾತಾಡಿದ್ದರು. ಯಾವಾಗ ಜೈದ್ ನಟನೆಯ ಮೊದಲ ಸಿನಿಮಾ ʻಬನಾರಸ್ʼ ಚಿತ್ರದ ʻಮಾಯ ಗಂಗೆʼ ಹಾಡು ಲೋಕಾರ್ಪಣೆಯಾಯಿತೋ? ಆಗ ಅಂದವರ ಅಂಡು ಸದ್ದು ನಿಲ್ಲಿಸಿತು. ʻಹುಡುಗ ಸಿನಿಮಾರಂಗದಲ್ಲಿ ಭದ್ರವಾಗಿ ನಿಲ್ಲೋದು ಗ್ಯಾರೆಂಟಿʼ ಅಂತಾ ಒಳಗೊಳಗೇ ಮಾತಾಡಿಕೊಂಡರು. ಅಪ್ಪನ ರಾಜಕಾರಣದ ವರ್ಚಸ್ಸು, ವ್ಯವಹಾರ, ಶ್ರೀಮಂತಿಕೆ – ಇವೆಲ್ಲದರ ಹೊರತಾಗಿ […]
ಭಾರತೀಯ ಚಿತ್ರರಂಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಬಿಟ್ಟರೆ ಬಹುಶಃ ಅತೀ ಹೆಚ್ಚು ಬ್ಯುಸೀ ಇರುವ ನಟ ಅಂದರೆ ಅದು ಡಾಲಿ ಧನಂಜಯ ಇರಬೇಕು! ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ ಸಿನಿಮಾಗೆ ʻಡಾಲಿʼ ಎನ್ನುವ ಪಾತ್ರವನ್ನು ಬರೆದರೋ? ಅದಕ್ಕೆ ಧನಂಜಯಾನೇ ಬೇಕು ಅಂತಾ ಚಾಯ್ಸ್ ಮಾಡಿದರೋ ಗೊತ್ತಿಲ್ಲ. ನುಗ್ಗಿಬಂದ ʻಟಗರುʼ ಜೊತೆ ಡಾಲಿಯ ನಸೀಬೇ ಬದಲಾಗಿಹೋಯ್ತು. ಕನ್ನಡ ಮಾತ್ರವಲ್ಲದೆ, ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಟಗರು ಬರುವ ಮುಂಚೆ ಇದೇ ಧನಂಜಯ […]