ಪ್ರೇಕ್ಷಕರು ಥಿಯೇಟರ್ ನತ್ತ ಬರುತ್ತಿಲ್ಲ ಎಂಬ ಅಪವಾದದ ನಡುವೆ ಕಳೆದ ವಾರ ತರೆ ಕಂಡ ರಾಮನ ಅವತಾರ ಚಿತ್ರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಫ್ಯಾಮಿಲಿ ಆಡಿಯನ್ಸ್ ಮನ ಗೆದ್ದಿದೆ.
ಹೊಸ ಕಂಟೆಂಟ್ ನೊಂದಿಗೆ ಪ್ರಯೋಗಾತ್ಮಕ ಅಂಶಗಳನ್ನು ಚಿತ್ರಕಥೆಯಲ್ಲಿ ಬೆರಸಿ ವಿಕಾಸ್ ಪಂಪಾಪತಿ ಆಕ್ಷನ್ ಕಟ್ ಹೇಳಿದ್ದರು. ಕಾಮಿಡಿ ಜೊತೆಗೆ ಸಮಾಜಕ್ಕೆ ಮಾರಕವಾಗಿರುವ ಹುಡುಗಿಯರ ಕಿಡ್ನಾಪ್ ದಂಧೆ, ಮತ್ತು ಮಾದಕ ವಸ್ತುಗಳ ಬಗ್ಗೆ ಬೆಳಕು ಚೆಲ್ಲುತ್ತಾ ಸಮಾಜಕ್ಕೆ ಉತ್ತಮ ಸಂದೇಶವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಹೀಗಾಗಿ ಫ್ಯಾಮಿಲಿ ಜೊತೆಗೆ ಹೆಣ್ಣು ಮಕ್ಕಳಿಗೂ ರಾಮನ ಅವತಾರ ಇಷ್ಟವಾಗಿದೆ.
ರಾಮನ ಅವತಾರ ಸಿನಿಮಾದಲ್ಲಿ ರಾಮ, ಸೀತೆ, ರಾಮರಾಜ್ಯ, ಸೀತಾಪಹರಣ, ವನವಾಸ, ಶಬರಿ, ರಾವಣ, ಪಟ್ಟಾಭಿಷೇಕ ಎಲ್ಲಾ ಅಂಶಗಳು ಇದ್ದರೂ ಇದು ಪೌರಾಣಿಕ ಸಿನಿಮಾ ಶೈಲಿಯಲ್ಲಿ ಮೂಡಿಬಂದಿರುವ ಸಿನಿಮಾ ಅಲ್ಲ. ಆದರೂ ಆ ಎಲ್ಲಾ ವಿಚಾರಗಳು ಆಧುನಿಕ ಸೀತಾ ರಾಮನ ಕಥೆಯಲ್ಲಿ ಬಂದು ಹೋಗುತ್ತವೆ.
ಆಧುನಿಕ ರಾಮನಾಗಿ ರಿಷಿ ಮತ್ತು ಸೀತೆಯಾಗಿ ನಾಯಕಿ ಪ್ರಣೀತಾ ಸುಭಾಷ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆಧುನಿಕ ರಾಮನ ಹಾಸ್ಯಭರಿತ ವನವಾಸ ಕಥೆಯ ರಾಮನ ಅವತಾರ ಸಿನಿಮಾ ಎಲ್ಲೆಡೆಯಲ್ಲಿಯೂ ಅದ್ಭುತ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲಂತೂ ಹೌಸ್ ಫುಲ್ ಬೋರ್ಡ್ ಬಿದಿದ್ದು, ಮುಂದಿನ ದಿನಗಳಲ್ಲಿ ಶೋಗಳು ಕೂಡ ಹೆಚ್ಚಾಗಲಿವೆ ಅಂತಾ ಚಿತ್ರತಂಡ ತಿಳಿಸಿದೆ.
ಕಥಾನಾಯಕ ರಾಮನಿಗೆ ತನ್ನ ಊರನ್ನು ಉದ್ಧಾರ ಮಾಡಬೇಕೆಂಬ ಬಹು ದೊಡ್ಡ ಆಸೆ ಇರುತ್ತದೆ. ಆದರೆ ಅವನ ಜೀವನದಲ್ಲಿ ಕಷ್ಟಗಳು ಎದುರಾಗುತ್ತದೆ. ಆ ಕಷ್ಟಗಳು ಏನು? ಆ ಕಷ್ಟಗಳು ಆತ ಹೇಗೆ ಮೆಟ್ಟಿ ನಿಲ್ತಾನೆ? ಅವನು ತನ್ನ ಊರು ಉದ್ಧಾರ ಮಾಡ್ತಾನಾ ಇಲ್ವಾ ಅನ್ನೋದು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.
ಅಮರೇಜ್ ಸೂರ್ಯವಂಶಿ ನಿರ್ಮಾಪಕರಾಗಿ ಒಂದೊಳ್ಳೆ ಸಿನಿಮಾ ಮಾಡಿದ ಖುಷಿಯಲ್ಲಿದ್ದಾರೆ. ಶುಭ್ರ ಅಯ್ಯಪ್ಪ, ಅರುಣ್ ಸಾಗರ್ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದು, ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೇ ಛಾಯಾಗ್ರಾಹಣ, ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ, ಅಮರನಾಥ್ ಸಂಕಲನ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ.
No Comment! Be the first one.