ಕಾಲೇಜು ದಿನಮಾನದ ಕಥೆಗಳೆಂದರೇನೇ ಕನ್ನಡದ ಪ್ರೇಕ್ಷಕರು ರೋಮಾಂಚಿತರಾಗುತ್ತಾರೆ. ಈ ಕಾರಣದಿಂದಲೇ ಕಾಲೇಜು ಕೇಂದ್ರಿತ ಕಥೆಗಳು ಆಗಾಗ ಗೆಲುವು ದಾಖಲಿಸುತ್ತವೆ. ಹಾಗಿರುವಾಗ, ಈವರೆಗೆ ಬಂದಿರುವ ಅಷ್ಟೂ ಸಿನಿಮಾಗಳ ಛಾಯೆಯಿಲ್ಲದ, ಹೊಸತನವನ್ನೇ ಆತ್ಮವಾಗಿಸಿಕೊಂಡಿರುವ ಸಿನಿಮಾವೊಂದು ತೆರೆಗಾಣಲು ಸಜ್ಜಾಗಿದೆಯೆಂದರೆ ಅದರತ್ತ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರೇಕ್ಷಕರನ್ನೆಲ್ಲ ಹಂತ ಹಂತವಾಗಿ ಸೆಳೆಯುತ್ತಾ ಸಾಗಿ ಬಂದಿರುವ ಚಿತ್ರ `ಬ್ಯಾಕ್ ಬೆಂಚರ್ಸ್’. ಇದೀಗ ಬಿಡುಗಡೆಗೆ ತಯಾರಾಗಿ ನಿಂತಿರುವ ಈ ಚಿತ್ರದ ಟೀಸರ್ ಒಂದು ಬಿಡುಗಡೆಗೊಂಡಿದೆ. ಅದರಲ್ಲಿರೋ ದೃಶ್ಯಗಳು, ಕಾಮಿಡಿ ಪಂಚುಗಳಿಗೆ ಪ್ರೇಕ್ಷಕರೆಲ್ಲ ಮನಸೋತಿದ್ದಾರೆ! […]
Browse Tag
#backbencher #newmovie #teaser #sandalwood
1 Article