Connect with us

ಪ್ರೆಸ್ ಮೀಟ್

ಹೊಸಾ ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು!

Published

on

‘ಖುಷಿಯ ವಿಚಾರ ಅಂದ್ರೆ ಸಾಮಾಜಿಕ ಕಾಳಜಿ ಹೊಂದಿರೋ ಕಥೆಗಳೇ ನನಗೆ ಹೆಚ್ಚಾಗಿ ಸಿಗುತ್ತಿದ್ದಾವೆ… ಅನ್ನುತ್ತಲೇ ಮಾತು ಆರಂಭಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಖದಲ್ಲಿ ಖುಷಿಯ ತಾಂಡವ ಕಾಣಿಸುತ್ತಿತ್ತು. ಅವರ ಬಹು ನಿರೀಕ್ಷಿತ ಚಿತ್ರ ದ್ರೋಣ ತಮ್ಮ ಪತ್ನಿ ಗೀತಾ ಅವರ ಹುಟ್ಟುಹಬ್ಬದ ದಿನದಂದೇ ಹನುಮಂತನಗರದ ಶ್ರೀ ರಾಮಾಂಜನೇಯ ಗುಡ್ಡದಲ್ಲಿ ಮುಹೂರ್ತ ಆಚರಿಸಿಕೊಂಡಿದೆ. ಈ ಚಿತ್ರದ ಭಿನ್ನವಾದ ಕಥೆಯ ಬಗೆಗೊಂದು ತೃಪ್ತಿಯಿಂದಲೇ ಶಿವರಾಜ್ ಕುಮಾರ್ ದ್ರೋಣ ಚಿತ್ರದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಹೇಳಿರೋ ವಿಚಾರಗಳನ್ನು ಗಮನಿಸಿದರೆ ಅವರ ಸಿನಿಮಾ ಯಾನದ ವೈವಿಧ್ಯಮಯ ಪಾತ್ರಗಳಲ್ಲಿ ದ್ರೋಣ ಚಿತ್ರವೂ ಮಹತ್ವದ ಮೈಲಿಗಲ್ಲಾಗಿ ದಾಖಲಾಗುವ ಲಕ್ಷಣಗಳು ಸ್ಪಷ್ಟವಾಗಿಯೇ ಕಾಣಿಸಿವೆ. ಇತ್ತೀಚೆಗೆ ತೆರೆ ಕಂಡಿದ್ದ ನರೇಂದ್ರ ಬಾಬು ನಿರ್ದೇಶನದ ಸಂತ ಕಬೀರದಂಥಾ ಚಿತ್ರದಲ್ಲಿ ಕಬೀರ ಪಾತ್ರ ಮಾಡುವ ಮೂಲಕ ಅಚ್ಚರಿ ಹುಟ್ಟಿಸಿದವರು ಶಿವಣ್ಣ. ಸಾಮಾನ್ಯವಾಗಿ ಸ್ಟಾರ್ ನಟರು ಇಮೇಜು ಬಿಟ್ಟು ಆಚೀಚೆ ಕದಲದ ಸನ್ನಿವೇಶದಲ್ಲಿ ಭಿನ್ನವಾದ ಪಾತ್ರಗಳನ್ನು ಮುಟ್ಟುವ ಮೂಲಕ ಸದಾ ಮುಂದಿರುವ ಅವರೀಗ ದ್ರೋಣ ಚಿತ್ರದ ಮೂಲಕವೂ ಅದನ್ನೇ ಮುಂದುವರೆಸಿದ್ದಾರೆ.

ದ್ರೋಣ ಚಿತ್ರದ ಪ್ರಧಾನ ಕಥಾ ಎಳೆ ಈವತ್ತಿನ ಶೈಕ್ಷಣಿಕ ಅವ್ಯವಸ್ಥೆಯದ್ದಂತೆ. ಓರ್ವ ಸಾಮಾಜಿಕ ಕಳಕಳಿಯ ಶಿಕ್ಷಕ ಆ ವಾತಾವರಣದ ಅವ್ಯವಸ್ಥೆಗಳನ್ನು ಹೇಗೆ ಎದುರುಗೊಳ್ಳುತ್ತಾನೆ, ಅದನ್ನೆಲ್ಲ ಕೂಲಾಗಿಯೇ ಯಾವ ರೀತಿ ಸರಿಪಡಿಸುತ್ತಾನೆಂಬುದು ಮುಖ್ಯವಾದ ಅಂಶವಂತೆ. ಈವತ್ತಿನ ಸ್ಥಿತಿಯಲ್ಲಿ ಶಿಕ್ಷಣ ಮೂಲಭೂತ ಅವಶ್ಯಕತೆಯಾಗಿ ಉಳಿದಿಲ್ಲ. ಅದು ಒಂದೆಡೆ ಮಾರುಕಟ್ಟೆಯ ಸರಕಾದರೆ ಮತ್ತೊಂದೆಡೆ ಪ್ರತಿಷ್ಠೆಯ ರೂಪ ಪಡೆದುಕೊಂಡಿದೆ. ಸರ್ಕಾರಿ ಶಾಲೆಯಲ್ಲಿ ಓದುವವರು ನಿರ್ಗತಿಕರೆಂಬಂಥಾ ಅನಿಷ್ಠ ಮನೋಭಾವ ಬಡ ಪೋಷಕರನ್ನೂ ಆವರಿಸಿಕೊಂಡಿದೆ. ಸರ್ಕಾರಿ ಶಾಲೆಗಳಿಗೆ ಬೀಗ ಜಡಿದುಕೊಳ್ಳುತ್ತಿರೋದರ ಹಿಂದಿರೋದು ಇಂಥಾದ್ದೇ ಮನಸ್ಥಿತಿ.

ಹೀಗೆ ಮುಚ್ಚುತ್ತಿರುವ ಸರ್ಕಾರಿ ಶಾಲೆಯಗಳ ಪ್ರಸ್ತುತ ದುರಂತವನ್ನೂ ಒಳಗೊಂಡಂತೆ ಒಟ್ಟಾರೆ ಶಿಕ್ಷಣ ವ್ಯವವಸ್ಥೆಯ ಸುತ್ತಾ ದ್ರೋಣ ಚಿತ್ರದ ಕಥೆ ಹರಡಿಕೊಂಡಿರೋದರ ಸೂಚನೆ ಶಿವಣ್ಣನ ಕಡೆಯಿಂದಲೇ ಹೊರ ಬಿದ್ದಿದೆ. ಈ ಚಿತ್ರದ ಮೂಲಕವೇ ಜನರಲ್ಲಿ ಅರಿವು ಮೂಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವಂತಾಗೋ ಮನ್ವಂತರವೊಂದು ಚಾಲ್ತಿಗೆ ಬರಲೆಂಬ ಆಶಯವೂ ಶಿವಣ್ಣನ ಮಾತುಗಳಲ್ಲಿ ವ್ಯಕ್ತವಾಗಿದೆ. ತಾವೂ ಕೂಡಾ ಸರ್ಕಾರಿ ಶಾಲೆಯಲ್ಲಿ ಒಂದಷ್ಟು ವರ್ಷ ಓದಿದ್ದರ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಂಡ ಶಿವಣ್ಣ ಸರ್ಕಾರಿ ಶಾಲೆಯಲ್ಲಿ ಓದೋದು ಖಂಡಿತಾ ಕೀಳರಿಮೆಯ ವಿಚಾರವಲ್ಲ. ಪ್ರವೈವೇಟ್ ಶಾಲೆಗಳಿಗೇನು ಸ್ಪೆಷಲ್ ಗಾಳಿ ಬೀಸುತ್ತಾ ಎಂಬಂತೆ ಪ್ರಶ್ನಿಸಿದ ಶೈಲಿಯಲ್ಲಿ ದ್ರೋಣ ಚಿತ್ರದಲ್ಲಿನ ಅವರ ಪಾತ್ರದ ತಣ್ಣಗಿನ ಆವೇಗವೂ ಪ್ರತಿಫಲಿಸಿದಂತಿತ್ತು.

ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಪ್ರಮೋದ್ ಚಕ್ರವರ್ತಿ ಅವರಿಗೆ ದ್ರೋಣ ಸಿನಿಮಾದ ಮೂಲಕ ಬಹುದಿನದ ಕನಸು ನನಸಾಗಿದೆ. “ಪ್ರಮೋದ್‌ಅವರನ್ನು ನಾನು ತೀರಾ ಸಣ್ಣ ಹುಡುಗನಿದ್ದಾಗಿಂದಲೇ ನೋಡುತ್ತಾ ಬಂದಿದ್ದೀನಿ. ಚೆನ್ನೈನಲ್ಲೇ ಅವರು ನನಗೆ ಪರಿಚಯ. ನಾವಿಬ್ಬರೂ ಸೇರಿ ಸಿನಿಮಾ ಮಾಡಬೇಕು ಅನ್ನೋದು ಅವರ ಹಲವಾರು ವರ್ಷಗಳಖ ಪ್ರಯತ್ನವಾಗಿತ್ತು. ಕಡೆಗೆ ಅದು ಈಗ ಕೂಡಿಬಂದಿದೆ ಎಂದರು ಶಿವರಾಜ್ ಕುಮಾರ್.

ದ್ರೋಣ ಸಿನಿಮಾದಲ್ಲಿ ಸಾಮಾಜಿಕ ಕಳಕಳಿಯ ಕಥಾವಸ್ತುವನ್ನೇ ಪ್ರಧಾನವಾಗಿದ್ದರೂ ಡಾ. ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಬೇಕಿರುವ ಕಮರ್ಷಿಯಲ್ ಅಂಶಗಳೂ ಇವೆ. ಹಾಸ್ಯ, ಆಕ್ಷನ್ ಮತ್ತು ಸೆಂಟಿಮೆಂಟ್‌ಗಳು ಕಥೆಯಲ್ಲೇ ಬ್ಲೆಂಡ್ ಆಗಿದೆ ಅನ್ನೋದು ನಿರ್ದೇಶಕ ಪ್ರಮೋದ್ ಚಕ್ರವರ್ತಿ ಅವರ ಮಾತು.

ಮಹದೇವ.ಬಿ, ಸಂಗಮೇಶ್.ಬಿ ಮತ್ತು ಶೇಷು ಚಕ್ರವರ್ತಿ ಸೇರಿ ನಿರ್ಮಾಣ ಮಾಡುತ್ತಿರುವ ದ್ರೋಣ ಚಿತ್ರಕ್ಕೆ ಜೆ.ಎಸ್. ವಾಲಿ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನ, ಡಾ. ವಿನಾಗೇಂದ್ರ ಪ್ರಸಾದ್ ಮತ್ತು ಅರಸು ಅಂತಾರೆ ಅವರ ಗೀತಸಾಹಿತ್ಯವಿದೆ.

ಒಟ್ಟಾರೆಯಾಗಿ ಶಿವಣ್ಣ ನಟಿಸಲಿರೋ ದ್ರೋಣ ಈಗನ ಶೈಕ್ಷಣಿಕ ಅವ್ಯವಸ್ಥೆಯ ಎದೆಗೆ ಬಾಣ ಬಿಡಲಿದೆ. ಈ ಮೂಲಕ ಒಂದು ಹೋರಾಟ, ಜಾಗೃತಿಗಳು ಸಂಭವಿಸೋ ಗಾಢ ನಿರೀಕ್ಷೆ ಶಿವರಾಜ್ ಕುಮಾರ್ ಅವರದ್ದು.

ಪ್ರಚಲಿತ ವಿದ್ಯಮಾನ

ಲವರ್ ಬಾಯ್ಸ್ ವಿತ್ ಆರೆಂಜ್!

Published

on

 
ನಿಮ್ಮ ಸಿನಿಮಾ ಲಾಂಛನದಲ್ಲಿ ನವೀನ್ ಅವರು ನಿರ್ಮಿಸಿರುವ, ಗೋಲ್ದನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ‘ಆರೆಂಜ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾಜ್ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಗಣೇಶ್, ಪ್ರಿಯಾ ಆನಂದ್, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದೇ ಪ್ರಶಾಂತ್ ರಾಜ್ ನಿರ್ದೇಶಿಸಿ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಜ಼ೂಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಯಶಸ್ವಿ ಜೋಡಿಯ ‘ಆರೆಂಜ್’ ತೆರೆಗೆ ಬರುತ್ತಿರೋದರಿಂದ ಪ್ರೇಕ್ಷಕ ವಲಯದಲ್ಲೂ ಒಂಥರಾ ಕುತೂಹಲ ಮನೆ ಮಾಡಿದೆ. ‘ಲವ್ ಗುರು’ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಂದು ಗೆಲುವು ಕಂಡವರು ಪ್ರಶಾಂತ್ ರಾಜ್, ಲವರ್ ಬಾಯ್ ಆಗಿದ್ದುಕೊಂಡೇ ಸಿನಿಮಾ ಪ್ರೇಮಿಗಳ ಎದೆಗೆ ಮುಂಗಾರುಮಳೆ ಚುಮುಕಿಸಿದವರು ಗಣೇಶ್. ಈ ಇಬ್ಬರ ಕಾಂಬಿನೇಷನ್ ‘ಆರೆಂಜ್’ ಮೂಲಕ ಮತ್ತೆ ಒಂದಾಗಿರೋ ವಿಚಾರವೇ ಮಜಬೂತಾಗಿದೆ. ಈಗಾಗಲೇ ಹೊರಬಂದಿರುವ ಹಾಡುಗಳು ಕೇಳುಗರ ಕಿವಿಗೆ ನಾಟಿದ್ದು, ಮನಸ್ಸಿನಲ್ಲಿ ಹಿತವಾದ ಭಾವ ಹೊಮ್ಮಿಸಿದೆ. ಈ ವಾರವೇ ತೆರೆಗೆ ಬರುತ್ತಿರುವ ‘ಆರೆಂಜ್’ ನೋಡಿದ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುವ ಲಕ್ಷಣವೇ ಹೆಚ್ಚಾಗಿದೆ…

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕೆಜಿಎಫ್ ಆಡಿಯೋ ಹಕ್ಕಿಗೆ ಮೂರು ಕೋಟಿ ಅರವತ್ತು ಲಕ್ಷ!

Published

on

ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ!

ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ!

ಇದು ನಿಜಕ್ಕೂ ದಾಖಲೆ. ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳ ಕೆಜಿಎಫ್ ಆಡಿಯೋ ಹಕ್ಕನ್ನು ಈ ಪಾಟಿ ದೊಡ್ಡ ಮೊತ್ತಕ್ಕೆ ಖರೀದಿಸೋ ಮೂಲಕ ಲಹರಿ ಸಂಸ್ಥೆ ಕೆಜಿಎಫ್ ಚಿತ್ರಕ್ಕೆ ಮತ್ತಷ್ಟು ಖದರು ತಂದು ಕೊಟ್ಟಿರೋದಂತೂ ಸತ್ಯ.

ಈ ಮೂಲಕ ಲಹರಿ ವೇಲು ಈ ಹಿಂದೆ ತಾವೇ ಸೃಷ್ಟಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದಂತಾಗಿದೆ. 1992ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕುಗಳನ್ನು ಈ ಸಂಸ್ಥೆ ಎಪ್ಪತೈದು ಲಕ್ಷ ಕೊಟ್ಟು ಖರೀದಿಸಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆರಗಾಗಿದ್ದರು. ಇಂಥಾದ್ದೊಂದು ದಾಖಲೆಯ ನಂತರ ಬಾಹುಬಲಿ ಚಿತ್ರದ ಆಡಿಯೋ ಹಕ್ಕುಗಳನ್ನೂ ಕೂಡಾ ಭಾರೀ ಮೊತ್ತಕ್ಕೇ ಖರೀದಿಸಲಾಗಿತ್ತು. ಇದೀಗ ಖುದ್ದು ಲಹರಿ ಸಂಸ್ಥೆ ಕೆಜಿಎಫ್ ಮೂಲಕ ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಂಡಿದೆ.

ಕೆಜಿಎಫ್ ಚಿತ್ರದ ಟೀಸರ್‌ಗೆ ದೇಶಾಧ್ಯಂತ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಕನ್ನಡ ಚಿತ್ರರಂಗದ ಗರಿಮೆಯನ್ನು ಎತ್ತಿ ಹಿಡಿಯುತ್ತಿರೋದರಿಂದ ಖುಷಿಗೊಂಡಿರೋ ವೇಲು ಅವರು ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದ್ದಾರಂತೆ.

Continue Reading

ಪ್ರೆಸ್ ಮೀಟ್

ಬುಡು ಬುಡುಕೆ ಬಡಿಯೋರ ಬದುಕಿನ ಬಗ್ಗೆ ನಿಮಗೆಷ್ಷು ಗೊತ್ತು?

Published

on


ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದ ಚಂದ್ರಶೇಖರ ಬಂಡಿಯಪ್ಪರ ಹೊಸಾ ಚಿತ್ರ ತಾರಕಾಸುರ. ಈಗಾಗಲೇ ಭಿನ್ನವಾದ ಕಥೆಯೊಂದರ ಸುಳಿವಿನಿಂದ, ಎಂಥವರನ್ನೂ ಬೆರಗಾಗಿಸುವಂಥಾ ಪೋಸ್ಟರುಗಳಿಂದ ಈ ಚಿತ್ರ ಜನಮನ ಸೆಳೆದುಕೊಂಡಿದೆ. ಈ ಚಿತ್ರ ಈ ವಾರವೇ ತೆರೆ ಕಾಣಲಿದೆ.

ಈ ಚಿತ್ರದ ನಿರ್ಮಾಪಕರು. ಇವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ವೈಭವ್ ಥರ ಥರದ ಶೇಡುಗಳಿರೋ ಭಿನ್ನವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದ್ಯಾವುದೋ ಲೇಖನವೊಂದನ್ನು ಓದುವಾಗ ನಶಿಸಿ ಹೋಗುತ್ತಿರೋ ವಿಶಷ್ಟ ಜಾನಪದ ಪ್ರಾಕಾರವೊಂದು ಬಂಡಿಯಪ್ಪನವರ ಕಣ್ಣಿಗೆ ಬಿದ್ದಿತ್ತು. ಎಂದಿನ ಕುತೂಹಲದಿಂದ ಅದರ ಬೆಂಬಿದ್ದವರಿಗೆ ಸಿಕ್ಕಿದ್ದು ವಿಸ್ಮಯಕರ ಮಾಹಿತಿ. ಇದರ ಮೂಲಕವೇ ತಾರಕಾಸುರ ಎಂಬ ಅಚ್ಚರಿಯ ಕಥೆಯೊಂದಕ್ಕೆ ಬಂಡಿಯಪ್ಪ ಜೀವ ತುಂಬಿದ್ದರು. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತನ್ನು ತೆರೆದಿಟ್ಟಿದ್ದರಲ್ಲಾ? ಅಂಥದ್ದೇ ರೋಚಕತೆಯೊಂದಿಗೆ ಈ ಚಿತ್ರದಲ್ಲಿ ಬುಡುಬುಡ್ಕೆ ಸಮುದಾಯದ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಒಂದು ಸಮುದಾಯದ ಸುತ್ತಲಿನ ಕಥಾ ಹಂದರ ಹೊಂದಿದ್ದರೂ ತಾರಕಾಸುರ ಪಕ್ಕಾ ಕಮರ್ಶಿಯಲ್ ಚಿತ್ರ. ಹಾಲಿವುಡ್‌ನ ಖ್ಯಾತ ನಟ ಡ್ಯಾನಿ ಸಫಾನಿ ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಅದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದಾಗಿದೆ. ಇದೂ ಸೇರಿದಂತೆ ತಾರಕಾಸುರನ ಬಗ್ಗೆ ಇಂಥಾದ್ದೊಂದು ಕೌತುಕ ಹುಟ್ಟಿಕೊಳ್ಳಲು ನಾನಾ ಕಾರಣಗಳಿವೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz