೨೦೨೩ರಲ್ಲಿ ಬಂದ ಬಹುತೇಕ ಸಿನಿಮಾಗಳು ದೊಪ್ಪದೊಪ್ಪನೆ ನೆಲಕ್ಕಪ್ಪಳಿಸಿದ್ದರಿಂದ ಕನ್ನಡ ಚಿತ್ರರಂಗ ಹೆಚ್ಚೂ ಕಡಿಮೆ ಐಸಿಯೂ ಬೆಡ್ಡಿನಲ್ಲಿ ಮಲಗಿತ್ತು. ವರ್ಷದ ಕೊನೆಯಲ್ಲಿ ತೆರೆಕಂಡ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಅಮೋಘ ಗೆಲುವು ಚಿತ್ರರಂಗ ಒಂದಿಷ್ಟು ಮಟ್ಟಕ್ಕಾದರೂ ಕಣ್ಣು ಬಿಡುವಂತಾಗಿತ್ತು. ನಂತರ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಕೂಡ ನಿರೀಕ್ಷಿಸಿದ್ದಕ್ಕಿಂತಾ ದೊಡ್ಡ ಗೆಲುವು ಕಂಡು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿನಿಮಾ ಇಂಡಸ್ಟ್ರಿಯಲ್ಲಿ ಲವಲವಿಕೆಯ ವಾತಾವರಣ ನಿರ್ಮಾಣವಾಗಬೇಕೆಂದರೆ, ದೊಡ್ಡ ಸ್ಟಾರ್ಗಳ ಸಿನಿಮಾಗಳು ಅಲ್ಲೊಂದು ಇಲ್ಲೊಂದಾದರೂ ರಿಲೀಸಾಗುತ್ತಿರಬೇಕು. ಹೊಸಬರ ಸಿನಿಮಾಗಳು ಗೆಲುವು […]
ಪಾರು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಊರೂಫ್ ಶರತ್ ಪದ್ಮನಾಭ್ ನಾಯಕನಾಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶರತ್ ನಾಯಕನಾಗಿ ಬಣ್ಣ ಹಚ್ಚಿರುವ ಚೊಚ್ಚಲ ಸಿನಿಮಾಗೆ ಅನಿಮಾ ಎಂಬ ಶೀರ್ಷಿಕೆ ಇಡಲಾಗಿದೆ. ಅನಿಮಾ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ. ಅನಿಮಾಗೆ ವರ್ಧನ್ ಎಂ ಎಚ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ವರ್ಧನ್ ಈ ಸಿನಿಮಾ ಮೂಲಕ ಡೈರೆಕ್ಟರ್ […]
ಸಹಜ ಅಭಿನಯ, ಸರಳ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ ಈಗ ಮುಧೋಳ್ ಬಳಗ ಸೇರಿಕೊಂಡಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು. ದುನಿಯಾ ವಿಜಯ್ ಸಾರಥ್ಯದ ಸಲಗ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ […]
ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್ಜಿಆರ್ ಅವರ ನಿರ್ದೇಶನದ ೩ನೇ ಚಿತ್ರ ಸಿಂಹಗುಹೆ. ರವಿ ಶಿರೂರು, ನಿವಿಶ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳಿಗೆ ಇತ್ತೀಚೆಗೆ ನಟ ಅನಿರುದ್ದ ಅವರು ಚಾಲನೆ ನೀಡಿದರು. ಎಸಿ ಮಹೇಂದರ್ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ, ಈ ಸಂದರ್ಭದಲ್ಲಿ ನಿರ್ದೇಶಕ ಎಸ್ಜಿಆರ್ ಮಾತನಾಡುತ್ತ ಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಇರುವ ಚಿತ್ರವಾಗಿದ್ದು. ಜಾಗರಹಳ್ಳಿ ಎಂಬ ಊರಲ್ಲಿ […]
ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಇಟ್ಟುಕೊಂಡು ನಿರ್ಮಾಪಕ ರಘುವರ್ಧನ್ ಅವರು “ಮಾರಿಗೋಲ್ಡ್” ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಬಿಡುಗಡೆಗೆ ಸಿದ್ದವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಹಾಗೂ ದಿಗಂತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ಹೀಗೆ ೪ ಪಾತ್ರಗಳ ಮೇಲೆ ಇಡೀಕಥೆ ಸುತ್ತುತ್ತದೆ. ಸಂಪತ್ ಮೈತ್ರೇಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಘುವರ್ಧನ್, […]
ಸಂತೋಷ್ ಆನಂದ್ ರಾಮ್ ಅವರ ಐದನೇ ಕಲಾಕೃತಿ ತೆರೆ ಮೇಲೆ ಅರಳಿಕೊಂಡಿದೆ. ಈ ಹಿಂದೆ ಸಂತೋಷ್ ನಿರ್ದೇಶನ ಮಾಡಿದ್ದೆಲ್ಲಾ ಸ್ಟಾರ್ ನಟರಿಗೆ. ಈ ಬಾರಿ ಹೊಸಾ ನಾಯಕನಟನನ್ನು ಲಾಂಚ್ ಮಾಡುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದರು. ಅದನ್ನು ನೇರ್ಪಾಗಿ ಮಾಡಿದ್ದಾರಾ? ಡಾ.ರಾಜ್ ಕುಟುಂಬದ ಮತ್ತೊಂದು ಕುಡಿಯ ಸಿನಿಮಾವನ್ನು ಯಾವ ಮಟ್ಟದಲ್ಲಿ ಕಟ್ಟಿ ನಿಲ್ಲಿಸಿದ್ದಾರೆ? ಕಳೆದ ಎರಡು ಸಿನಿಮಾಗಳ ಭಯಾನಕ ಸೋಲಿನಿಂದ ಸ್ವತಃ ಸಂತೋಷ್ ಆನಂದರಾಮ್ ಹೊರಬಂದಿದ್ದಾರಾ? ಹೊಂಬಾಳೆ ಜೊತೆಗಿನ ನಾಲ್ಕನೇ ಸಲದ ನಡಿಗೆ ಗೆಲುವಾಗಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರದಂತೆ […]
ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ತಮ್ಮ ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟಿಂಗ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಕಂಟೆಂಟ್ ಮತ್ತು ಮೇಕಿಂಗ್ ಮೂಲಕವೇ ಗಮನ ಸೆಳೆಯುತ್ತವೆ. ಇತ್ತೀಚೆಗೆ ಹೀಗೆ ತನ್ನ ಕಂಟೆಂಟ್ ಮತ್ತು ಮೇಕಿಂಗ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ “ತಾರಿಣಿ’. ಕೆಲ ತಿಂಗಳ ಹಿಂದಷ್ಟೇ ರಾಜ್ಯದ ಅತಿದೊಡ್ಡ ಲಿಂಗಪತ್ತೆ, ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಲಿಂಗಪತ್ತೆ, ಭ್ರೂಣಹತ್ಯೆ ಮಾಫಿಯಾ ರಾಜಕೀಯ ಮತ್ತು […]
ಯಾವುದೇ ಕ್ಷೇತ್ರದಲ್ಲಿರಲಿ ಒಂದೊಂದು ಹೆಜ್ಜೆಯನ್ನೂ ಹುಷಾರಾಗಿಡಬೇಕು. ʻನಂಬಿಕೆʼಅನ್ನೋ ಹೆಸರಲ್ಲಿ ಯಾರು ಯಾರನ್ನು ಯಾವಾಗ ಮಣ್ಣು ಮುಕ್ಕಿಸಿಬಿಡುತ್ತಾರೋ ಗೊತ್ತಾಗೋದಿಲ್ಲ. ಅದರಲ್ಲೂ ಸಿನಿಮಾ ಕ್ಷೇತ್ರವಿದೆಯಲ್ಲಾ? ಚೂರು ಗಮನ ಕೆಡಿಸಿಕೊಂಡರೂ ಗಟಾರಕ್ಕೆ ಬಿದ್ದಂಗೇ… ಸರಿಸುಮಾರು ಎಂಟು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟ ನಿರ್ಮಾಪಕರೊಬ್ಬರು ತುಂಬಾ ಸರಳ, ಸುಂದರ ಚಿತ್ರದಲ್ಲೇ ಅತ್ಯದ್ಭುತ ಗೆಲುವನ್ನು ಕಂಡರು. ಸೂಪರ್ ಹಿಟ್ ಹಾಡೊಂದು ಅವರ ನಸೀಬು ಬದಲಿಸಿತ್ತು. ಮಾಡಿದ ಮೊದಲ ಸಿನಿಮಾನೇ ಈ ಮಟ್ಟಕ್ಕೆ ಹಣ, ಹೆಸರು, ಜನಪ್ರಿಯತೆ ಎಲ್ಲವನ್ನೂ ತಂದುಕೊಟ್ಟಿತ್ತು. ಒಳ್ಳೆ ಟೀಮು ಫಾರ್ಮಾಗಿತ್ತು. ಪ್ರಾಮಾಣಿಕ, […]
ವಾರಕ್ಕೆ ಮುಂಚೆ ಮೆಹಬೂಬ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಸನ್ ಎರಡು ಸಾವಿರದ ಇಪ್ಪತ್ತನೇ ಮಾಹೆಯಲ್ಲಿ ಶುರುವಾಗಿ ವರ್ಷಾಂತರಗಳ ನಂತರ ಬಿಡುಗಡೆಗೊಂಡ ಚಿತ್ರವಿದು. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋನಲ್ಲಿ ಗೆದ್ದ ಸ್ಪರ್ಧಿಗಳು ಆರಂಭದಲ್ಲಿ ಶ್ಯಾನೆ ಟಾಪಲ್ಲಿ ಕುಂತಿರುತ್ತಾರೆ. ಶಶಿ ಎನ್ನುವ ಹುಡುಗ ಕೂಡಾ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು. ನೀರ್ ದೋಸೆ ಖ್ಯಾತಿಯ ಸ್ಕಂದ ಪ್ರಸನ್ನ ನಿರ್ಮಾಣದಲ್ಲಿ ಆರಂಭಗೊಂಡಿದ್ದ ಸಿನಿಮಾ ಮೆಹಬೂಬ. ಈ ಪಿಚ್ಚರ್ ತಯಾರಾಗೋದು ಕೂಡಾ ತೀರಾ ವಿಳಂಬವಾಯಿತು. ಪ್ರಸನ್ನ ಶುರು ಮಾಡಿದ […]
ಅರುಣ್ ಕುಮಾರ್ ಜಿ. ಮೂವರು ಹುಡುಗರು, ಮೂವರು ಹುಡುಗಿಯರು, ಮೂರು ಲವ್ ಸ್ಟೋರಿ… ಮೂರೂ ಕತೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಪ್ರ್ಯೇಕವಾಗಿ ಸಾಗುತ್ತಿರುತ್ತದೆ. ಕಟ್ಟಕಡೆಯದಾಗಿ ಈ ಮೂರು ಕತೆಗಳು ಹೇಗೆ ಒಂದು ಕಡೆ ಕೂಡುತ್ತವೆ ಅನ್ನೋದು ಬಹುಮುಖ್ಯ ಅಂಶ. ʻಚೌಚೌ ಬಾತ್ʼ ಹೈಪರ್ ಲಿಂಕ್ ಸಿನಿಮಾ. ಕೆಂಜ ಚೇತನ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವಿದು. ಪ್ರೇಮಗೀಮ ಜಾನೆದೋ ಮತ್ತು ದೇವರು ಬೇಕಾಗಿದ್ದಾರೆ ಎಂಬೆರಡು ಚಿತ್ರಗಳನ್ನು ನೀಡಿದ್ದ ಚೇತನ್ ಕುಮಾರ್ ಬಲು ಶ್ರದ್ಧೆ ವಹಿಸಿ ರೂಪಿಸಿರುವ ಚಿತ್ರ ಚೌಚೌ ಬಾತ್. […]