ನಾಯಕಿ ಪ್ರಧಾನ ಸಿನಿಮಾಗಳಲ್ಲೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದ ನಟಿ ಪೂಜಾ ಗಾಂಧಿ ಅಭಿನೇತ್ರಿ, ತಿಪ್ಪಜ್ಜಿ ಸರ್ಕಲ್, ಜಿಲೇಬಿಯಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದಾದ ಮೇಲೆ ದಂಡುಪಾಳ್ಯ ಸರಣಿಯಲ್ಲಿ ತನ್ನ ಬೋಲ್ಡ್ ನಟನೆಯಿಂದ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯೂ ಆದರು. ಸದ್ಯ ಹೊಸ ಸಿನಿಮಾ ಸಂಹಾರಿಣಿ ಅವತಾರದಲ್ಲಿ ಪೂಜಾ ಮಿಂಚಲು ರೆಡಿಯಾಗಿದ್ದಾರೆ.  ಹೌದು ನಾಯಕಿ ಪ್ರಧಾನ ಸಿನಿಮಾವಾಗಿರುವ ಸಂಹಾರಿಣಿ ಸಿನಿಮಾದ ಶೂಟಿಂಗ್ ನ್ನು ಸದ್ದಿಲ್ಲದೇ ಮುಗಿಸಿಕೊಂಡಿದ್ದಾರೆ ಪೂಜಾ ಗಾಂಧಿ.

ಸಾಹಸಮಯ ಸಿನಿಮಾವಾಗಿರುವ ಸಂಹಾರಿಣಿಯನ್ನು ಕೆ. ಜವಾಹರ್ ನಿರ್ದೆಶನ ಮಾಡಿದ್ದಾರೆ. ಕೆ.ವಿ ಶಬರೀಶ್ ಸಂಹಾರಿಣಿಗೆ ಬಂಡವಾಳವನ್ನು ಹೂಡಿದ್ದಾರೆ. ಇನ್ನುಳಿದಂತೆ ಮಾಸ್ ಮಾದ ಸಾಹಸ ಸಂಯೋಜನೆ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಖಿಲ್ ಸಂಕಲನ, ವಿಟು ಸಂಗೀತ ಸಂಯೋಜನೆ, ರಾಜೇಶ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಪೂಜಾಗಾಂಧಿಗೆ ರವಿ ಕಾಳೆ, ರಾಹುಲ್ ದೇವ್, ಹ್ಯಾರಿ ಜೋಷ್ ಎದುರಾಳಿಗಳಾಗಲಿದ್ದು, ಕಿಶೋರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಸಚಿನ್, ಅರುಣ್ ತಾರಾಂಗಣದಲ್ಲಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಶೀಘ್ರದಲ್ಲಿಯೇ ಟೀಸರ್ ಬಿಡುಗಡೆಗೊಳಿಸುವ ಪ್ಲ್ಯಾನ್ ನಲ್ಲಿದೆ.

Arun Kumar

ಪೊಲೀಸ್ ಗೆಟಪ್ ನಲ್ಲಿ ರಾಣಿಮುಖರ್ಜಿ!

Previous article

ದ್ರೋಣನಾದ ಹ್ಯಾಟ್ರಿಕ್ ಹೀರೋ!

Next article

You may also like

Comments

Leave a reply

Your email address will not be published. Required fields are marked *