Connect with us

ಫೋಕಸ್

ಕನ್ನಡದ ವಿಲನ್‌ಗೆ ಧ್ವನಿಯಾದರು ದಲೇರ್ ಮೆಹಂದಿ!

Published

on

ಭಯಾನಕ ಅಬ್ಬರದೊಂದಿಗೆ ಸಿನಿಮಾ ಶುರುವಾಡಿ ಆ ಬಳಿಕ ವರ್ಷಾಂತರಗಳ ಕಾಲ ಎಳೆದಾಡಿ ಪ್ರೇಕ್ಷಕರ ತಲೆಗೆ ಗೊಬ್ಬರ ತುಂಬೋದು ನಿರ್ದೇಶಕ ಪ್ರೇಮ್ ಅವರ ಹಳೇ ವರಸೆ. ಬರ ಬರುತ್ತಾ ಸಿನಿಮಾ ಲೇಟಾಗುತ್ತಿದೆ ಎಂಬ ಅಸಹನೆಯನ್ನೂ ಕೂಡಾ ಪ್ರಚಾರಕ್ಕೆ ಬಳಸಿಕೊಳ್ಳುವ ಟ್ಯಾಲೆಂಟು ಕೂಡಾ ಪ್ರೇಮ್‌ಗೆ ಧಾರಾಳವಾಗಿಗೇ ದಕ್ಕಿದೆ. ಇಂಥಾ ಪ್ರೇಮ್ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ ದಿ ವಿಲನ್ ಚಿತ್ರಕ್ಕೊಂದು ಅಮತಿಮ ಸ್ಪಶ ನೀಡಲು ಮನಸು ಮಾಡಿ ಅಖಾಡಕ್ಕಿಳಿದಿದ್ದಾರೆ!

ಈ ಹಿನ್ನೆಲೆಯಲ್ಲಿ ದಿ ವಿಲನ್ ಚಿತ್ರದ ಹಾಡುಗಳನ್ನು ರೂಪಿಸೋ ಕಾರ್ಯವೂ ಅಚಿತಿಮ ಘಟ್ಟ ತಲುಪಿಕೊಂಡಿದೆ. ಅರ್ಜುನ್ ಜನ್ಯಾ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿ ಮುಗಿಸಿಕೊಂಡು ಒಂದೊಂದೇ ಹಾಡುಗಳನ್ನು ಮುಗಿಸಿಕೊಂಡಿದ್ದಾರೆ. ಇದರಲ್ಲಿಯೇ ಒಂದು ಮಜವಾದ ಹಾಡನ್ನು ವಿಶೇಷವಾದ ಹಾಡುಗಾರರ ಬಳಿಯೇ ಹಾಡಿಸಬೇಕೆಂಬ ಚರ್ಚೆ ನಡೆದಾಗ ಸರ್ವಾನುಮತದಿಂದ ಖ್ಯಾತ ಬಾಂಗ್ರಾ ಪಾಪ್ ಸಿಂಗರ್ ದಲೇರ್ ಮೆಹಂದಿಯವರ ಹೆಸರು ಪ್ರಸ್ತಾಪವಾಗಿದೆ.

ಇದನ್ನು ಒಪ್ಪಿಕೊಂಡಿರೋ ಪ್ರೇಮ್ ದಲೇರ್ ಅವರನ್ನು ಒಪ್ಪಿಸಿ ಅವರಿಂದ ಹಾಡನ್ನೂ ಹಾಡಿಸಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಕೂಡಾ ನಡೆದಿದೆ. ಈ ಹಾಡನ್ನು ದಲೇರ್ ಎಂಜಾಯ್ ಮಾಡಿಕೊಂಡು ಮಜವಾಗಿಯೇ ಹಾಡಿದ್ದಾರಂತೆ. ಬಾಲಿವುಡ್‌ನಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿರೋ ದಲೇರ್ ಹಾಡಿದ ವೀಡಿಯೋವನ್ನೂ ಕೂಡಾ ಕೂಡಲೆ ಜಾಹೀರು ಮಾಡದ ಪ್ರೇಮ್ ಮುಂದೆ ಅದನ್ನೂ ಪ್ರಮೋಷನ್ನಿಗೆ ಬಳಸಿಕೊಳ್ಳುವ ಸ್ಕೆಚ್ ಹಾಕಿದ್ದಾರಂತೆ!

ಏಕಾಏಕಿ ಕೆಲಸ ಆರಂಭಿಸಿದ ಬಗ್ಗೆ ಸುದ್ದಿ ಮಾಡುವ ವಿಲನ್ ಚಿತ್ರದ ಸದ್ದಿಲ್ಲದೇ ಹೋದಾಗ ನಿರೀಕ್ಷೆಯಲ್ಲಿರುವವರು ಕಸಿವಿಸಿಗೀಡಾಗುತ್ತಾರೆ. ಆದರೆ ಇಂಥಾ ಸಕಾರಾತ್ಮಕ ಸುದ್ದಿ ಬಂದಾಗ ವಿಲನ್ನು ಉಸಿರಾಡುತ್ತಿರುವ ವಿಚಾರ ತಿಳಿದು ಎಲ್ಲರೂ ನಿರಾಳರಾಗುವಂತಾಗುತ್ತದೆ!

ಫೋಕಸ್

ಇಷ್ಟರಲ್ಲೇ ವೀಕ್ಷಿಸಲಿದ್ದಾರೆ ರವಿ ಚನ್ನಣ್ಣನವರ್!

Published

on

ವಾರಗಳ ಹಿಂದೆ ತೆರೆ ಕಂಡಿದ್ದ ನಡುವೆ ಅಂತರವಿರಲಿ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಆರಂಭದಲ್ಲಿ ಹೇಳಿಕೊಳ್ಳುವಂಥಾ ಪ್ರಚಾರವಿಲ್ಲದಿದ್ದರೂ ಈ ಚಿತ್ರ ಹಾಡುಗಳ ಮೂಲಕವೇ ಸೌಂಡು ಮಾಡಿತ್ತು. ಪ್ರಚಾರದ ಕೊರತೆಯಾಚೆಗೂ ಕೂಡಾ ಬಾಯಿಂದ ಬಾಯಿಗೆ ಹರಡಿಕೊಂಡ ಒಳ್ಳೆ ಮಾತುಗಳೇ ಈ ಚಿತ್ರವನ್ನು ವಾರದಿಂದ ವಾರಕ್ಕೆ ಟೇಕಾಫ್ ಆಗುವಂತೆ ಮಾಡುತ್ತಿದೆ. ಯುವ ಮನಸುಗಳ ಕಥನ ಹೊಂದಿರೋ ಈ ಚಿತ್ರವನ್ನೀಗ ಕುಟುಂಬ ಸಮೇತರಾಗಿ ಬಂದು ನೋಡುವವರ ಸಂಖ್ಯೆ ಹೆಚ್ಚಿದೆ.

ಇದು ಪ್ರಚಾರದ ದುನಿಯಾ. ಹೀನಾಮಾನ ಪ್ರಚಾರ ಮಾಡಿ ಹೈಪು ಸೃಷ್ಟಿಸಿದ ಚಿತ್ರಗಳು ಗೋತಾ ಹೊಡೆಯುತ್ತವೆ. ಚೆಂದದ ಕಂಟೆಂಟು ಒಳಗೊಂಡು ಅದ್ಭುತವಾಗಿರೋ ಚಿತ್ರಗಳೂ ಪ್ರಚಾರವಿಲ್ಲದೆ ನರಳುತ್ತವೆ. ಅಲ್ಲಿಯೇ ಜೀವ ಚೆಲ್ಲುತ್ತವೆ. ಆದರೆ ನಡುವೆ ಅಂತರವಿರಲಿ ಚಿತ್ರದ ವಿಚಾರದಲ್ಲಿ ಆ ದುರಂತ ಸಂಭವಿಸಿಲ್ಲ. ಬದಲಾಗಿ ಮೊದಲ ದಿನ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರಾಡಿದ ಒಳ್ಳೆ ಮಾತುಗಳು ವ್ಯಾಪಕವಾಗಿ ಹರಡಿಕೊಂಡು ಇದೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ಮೌತ್ ಪಬ್ಲಿಸಿಟಿಯಿಂದಲೇ ಸಾಧ್ಯವಾದ ಗೆಲುವಿಗೆ ಒಂದಷ್ಟು ಚಿತ್ರಗಳು ಸಾಕ್ಷಿಯಂತಿವೆ. ಆ ಸಾಲಿಗೆ ಈ ಚಿತ್ರವೂ ಸೇರಿಕೊಂಡಿದೆ. ಶಿವಮೊಗ್ಗದ ಹುಡುಗ ರವೀನ್ ನಿರ್ದೇಶನದ ಈ ಚಿತ್ರವನ್ನು ನೋಡಿದವರೆಲ್ಲ ಆಡಿರೋದು ಸಕಾರಾತ್ಮಕವಾದ ಮಾತುಗಳನ್ನೇ. ಸಾಮಾನ್ಯವಾಗಿ ಒಂದು ಚಿತ್ರ ನೀಓಡಿದಾಗ ಎಳೆದಂತಿದೆ, ಆ ದೃಷ್ಯ ಬೇಡವಾಗಿತ್ತು ಅಂತೆಲ್ಲ ಅಭಿಪ್ರಾಯ ಬರುತ್ತದಲ್ಲಾ? ಆದರೆ ನಡುವೆ ಅಂತರವಿರಲಿ ಚಿತ್ರದ ಬಗ್ಗೆ ಅಂಥಾ ಒಂದೇ ಒಂದು ರೀಮಾರ್ಕ್ ಕೂಡಾ ಬಂದಿಲ್ಲ. ಬದಲಾಗಿ ಕಾಲೇಜು ಮಟ್ಟದ ಯುವ ಸಮುದಾಯದ ಕಥೆ ಎಲ್ಲರನ್ನೂ ಕಾಡಿದೆ. ಇದರ ಕ್ಲೈಮ್ಯಾಕ್ಸಂತೂ ಕಣ್ಣಂಚು ಒದ್ದೆಯಾಗುವಂತೆಯೂ ಮಾಡಿದೆ.

ಈ ಚಿತ್ರ ಪ್ರೇಕ್ಷಕರನ್ನು ಅದ್ಯಾವ ಪರಿ ಕಾಡಿದೆಯೆಂದರೆ, ಅದೆಷ್ಟೋ ಜನ ಪ್ರೇಕ್ಷಕರು ಥೇಟರುಗಳಲ್ಲಿ ನಂಬರ್ ಪಡೆದು ನಿರ್ದೇಶಕರಿಗೆ ಫೋನಾಯಿಸಿ ಮಾತಾಡುತ್ತಿದ್ದಾರೆ. ಇಂಥಾದ್ದೊಂದು ಚೆಂದದ ಚಿತ್ರ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಆರಂಭದಿಂದಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರಕ್ಕೆ ಸಾಥ್ ನೀಡಿದ್ದರು. ಅದಕ್ಕೆ ಕಾರಣ ಈ ಚಿತ್ರ ರೂಪುಗೊಂಡಿದ್ದ ಅಚ್ಚುಕಟ್ಟಾದ ಶೈಲಿಯೇ ಹೊರತು ಬೇರೇನಲ್ಲ. ಇತ್ತೀಚೆಗಷ್ಟೇ ರಚಿತಾ ರಾಮ್ ಚಿತ್ರವನ್ನು ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ಡಾಲಿ ಧನಂಜಯ ಕೂಡಾ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಇನ್ನೇನು ಸಾನ್ವಿ ಶ್ರೀವತ್ಸ ಕೂಡಾ ಈ ಚಿತ್ರವನ್ನು ಕಣ್ತುಂಬಿಕೊಳ್ಳಲಿದ್ದಾರೆ. ವಿಶೇಷವೆಂದರೆ ಖಡಕ್ ಪೊಲೀಸ್ ಅಧಿಕಾರಿ ರವಿಚನ್ನಣ್ಣವರ್ ಕೂಡಾ ಇನ್ನೇನು ಈ ಚಿತ್ರವನ್ನು ವೀಕ್ಷಿಸಲಿದ್ದಾರೆ. ಯುವ ಆವೇಗದ ಕಥೆ ಹೊಂದಿ, ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಈ ಚಿತ್ರ ಇದೀಗ ಯಶಸ್ಸಿನತ್ತ ಮುಂದಡಿ ಇಡುತ್ತಿದೆ. ಒಂದೊಳ್ಳೆ ಚಿತ್ರ ಸೋಲಿನ ದವಡೆಯಿಂದ ಪಾರಾಗಿದೆ. ಈ ಚಮತ್ಕಾರ ಕಂಡು ಚಿತ್ರ ತಂಡವೂ ಖುಷಿಗೊಂಡಿದೆ.

Continue Reading

ಫೋಕಸ್

ಮಾಸ್ ಬಿಲ್ಡಪ್ಪಿಲ್ಲದೆಯೂ ಮನಮಟ್ಟುವ ಪ್ರಶಾಂತ ತವಕ!

Published

on

ಒರಟ ಐ ಲವ್ ಯೂ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದವರು ಪ್ರಶಾಂತ್. ಆ ನಂತರದಲ್ಲಿ ಒರಟ ಪ್ರಶಾಂತ್ ಎಂದೇ ಹೆಸರಾದ ಅವರು ನಟಿಸಿದ್ದೆಲ್ಲ ಮಾಸ್ ಪಾತ್ರಗಳಲ್ಲಿಯೇ. ನಿಜವಾದ ಕಲಾವಿದನಿಗೆ ಒಂದೇ ವೆರೈಟಿಯ ಪಾತ್ರಗಳು ಅದೆಷ್ಟೇ ಆಕರ್ಷಕವಾಗಿ ಕಂಡರೂ ಏಕತಾನತೆ ಹುಟ್ಟಿಸಿ ಬಿಡುತ್ತವೆ. ಪ್ರಶಾಂತ್ ಹೇಳಿಕೇಳಿ ರಂಗಭೂಮಿಯಲ್ಲಿಯೇ ನಟನಾಗಿ ರೂಪುಗೊಂಡವರು. ಸೂಕ್ಷ್ಮತೆಯನ್ನು ತುಸು ಹೆಚ್ಚೇ ಧರಿಸಿಕೊಂಡಿರುವ ಅವರು ಅಂಥಾದ್ದೊಂದು ಏಕತಾನತೆಗೀಡಾಗಿ ಬದಲಾವಣೆ ಬಯಸಿ ಬಹು ಕಾಲವಾಗಿದೆ. ಅದಕ್ಕೆ ಪೂರಕವಾಗಿ ಸಿಕ್ಕಿದ್ದು ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರ!

ಕ್ಲಾಸ್ ಲುಕ್ಕನ್ನು ಏಕಾಏಕಿ ಮಾಸ್ ಆಗಿ ಬದಲಾಯಿಸೋದು, ಮಾಸ್ ಇಮೇಜನ್ನು ಕ್ಲಾಸ್‌ಗೆ ರೂಪಾಂತರಿಸೋದು ನಿಜಕ್ಕೂ ರಿಸ್ಕಿನ ಕೆಲಸ. ಅಂಥಾದ್ದೊಂದು ಸವಾಲನ್ನು ತಾವಾಗಿಯೇ ಸ್ವೀಕರಿಸಿದವರು ಈ ಚಿತ್ರದ ನಿರ್ದೇಶಕ ಕಿರಣ್ ಗೋವಿ. ಪ್ರಶಾಂತ್ ಮತ್ತು ಕಿರಣ್ ಗೋವಿಯವರದ್ದು ಬಹು ವರ್ಷಗಳ ಗೆಳೆತನ. ಅತ್ತ ಕಿರಣ್ ಕೂಡಾ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ಅಷ್ಟೇ ಅವಧಿಯಲ್ಲಿ ಪ್ರಶಾಂತ್ ಕೂಡಾ ಮರೆಯಾದಂತಿದ್ದರು. ಇಬ್ಬರ ಪಾಲಿಗೂ ಅದೊಂದು ನಿರ್ವಾತ ಸ್ಥಿತಿ. ಒಂದು ಬದಲಾವಣೆಗಾಗಿ ಹಂಬಲಿಸುತ್ತಿದ್ದ ಪ್ರಶಾಂತ್ ಮತ್ತು ಮೂರು ವರ್ಷಗಳ ತಪನೆಯೊಂದಕ್ಕೆ ಅಂತಿಮ ರೂಪ ನೀಡಲು ಸಜ್ಜಾಗಿದ್ದ ಕಿರಣ್ ಗೋವಿ. ಇವರಿಬ್ಬರ ಮುಖಾಮುಖಿಯಾದ ಪರಿಣಾಮವಾಗಿಯೇ ಜನ್ಮತಳೆದದ್ದು ಯಾರಿಗೆ ಯಾರುಂಟು ಸಿನಿಮಾ!

ಅಚಾನಕ್ಕಾಗಿ ಸಿಕ್ಕ ಕಿರಣ್ ಗೋವಿ ಪ್ರಶಾಂತ್ ಅವರಿಗೆ ಈ ಚಿತ್ರದ ಕಥೆ ಹೇಳಿದ್ದರಂತೆ. ಬಳಿಕ ಈ ಪಾತ್ರವನ್ನು ನೀವು ಮಾಡಬೇಕು ಅಂದಾಗ ಪ್ರಶಾಂತ್ ಅವರಿಗೇ ಕಸಿವಿಸಿ ಕಾಡಿತ್ತಂತೆ. ಯಾಕೆಂದರೆ ಆ ಪಾತ್ರ ಅವರಿಗೆ ಈವರೆಗಿರೋ ಒರಟ ಎಂಬ ಇಮೇಜಿಗೆ ಪಕ್ಕಾ ತದ್ವಿರುದ್ಧವಾದದ್ದು. ಇದು ಸಾಧ್ಯವಾ ಅಂತ ಪ್ರಶಾಂತ್ ಸಂದೇಹದಿಂದಲೇ ಕೇಳಿದಾಗ ಕಿರಣ್ ಗಾಢವಾದ ವಿಶ್ವಾಸದಿಂದ `ಇದು ನನ್ನ ಕನಸು. ನಾನಿದನ್ನು ಮಾಡ್ತೀನಿ, ಖಂಡಿತಾ ನೀವೂ ಕೂಡಾ ಈ ಪಾತ್ರವನ್ನ ಮಾಡುತ್ತೀರಿ’ ಅಂದಿದ್ದರಂತೆ. ಅಂಥಾದ್ದೇ ಒಂದು ಬದಲಾವಣೆ ಬಯಸಿದ್ದ ಪ್ರಶಾಂತ್ ಗೋವಿಯವರ ವಿಶ್ವಾಸದಿಂದ ಪ್ರೇರಿತರಾಗಿ ತಕ್ಷಣವೇ ನಟಿಸಲು ಒಪ್ಪಿಕೊಂಡಿದ್ದರು.

ಒರಟೊರಟು ಪಾತ್ರಗಳಲ್ಲಿಯೇ ನಟಿಸಿದ್ದ ಪ್ರಶಾಂತ್ ಪಾಲಿಗೆ ಈ ಚಿತ್ರದ ಸಾಫ್ಟ್ ಕ್ಯಾರೆಕ್ಟರ್ ಆರಂಭದಲ್ಲಿ ಸವಾಲಾಗಿತ್ತಂತೆ. ಇದಕ್ಕೆ ಬೇಕಾದ ಹೋಂ ವರ್ಕ್ ಮಾಡಿಕೊಂಡು ಬಣ್ಣ ಹಚ್ಚಿದವರಿಗೀಗ ನಿರ್ದೇಶಕರ ಕಲ್ಪನೆಯಂತೆಯೇ ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತಿಯಿದೆ. ಈ ಪಾತ್ರ ನಗಿಸೋ ಶೇಡನ್ನೂ ಹೊಂದಿರೋದರಿಂದ ಪ್ರತೀ ಸೀನೂ ಪ್ರಶಾಂತ್ ಪಾಲಿಗೆ ಸವಾಲಿನದ್ದಾಗಿತ್ತು. ಆದರೆ ಕಿರಣ್ ಗೋವಿಯವರ ಸಹಕಾರ ಎಲ್ಲವನ್ನೂ ಸಲೀಸಾಗಿಸಿತ್ತಂತೆ.

ಈಗ್ಗೆ ಮೂರು ವರ್ಷಗಳ ಹಿಂದೆ ಪ್ರಶಾಂತ್ ಚಿರಾಯು ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಅವರು ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಥರ ಥರದಲ್ಲಿ ಸುದ್ದಿ ಹರಡಿರಬಹುದು. ಕೆಲ ಮಂದಿ ಅವಕಾಶವಿಲ್ಲದೇ ಅವರು ದೂರವುಳಿದಿದ್ದರು ಅಂದುಕೊಂಡಿರಲೂಬಹುದು. ಆದರೆ ಅಸಲೀ ಸತ್ಯ ಬೇರೆಯದ್ದೇ ಇದೆ. ಅವರು ಮನಸು ಮಾಡಿದ್ದರೆ ಈ ಮೂರು ವರ್ಷಗಳಲ್ಲಿ ಐದಾರು ಚಿತ್ರಗಳಲ್ಲಿಯೂ ನಟಿಸಬಹುದಿತ್ತು. ಆದರೆ ಅದಾಗಲೇ ಬದಲಾವಣೆ ಬಯಸಿ ಅದಕ್ಕೆ ತಕ್ಕುದಾದ ಕಥೆಗಾಗಿ ಅರಸುತ್ತಿದ್ದ ಅವರಿಗೆ ಆ ಥರದ ಕಥೆ ಸಿಕ್ಕಿರಲಿಲ್ಲ. ಸಿಕ್ಕಿದ್ದನ್ನೇ ಇರಲಿ ಅಂತ ಒಪ್ಪಿಕೊಂಡಿರಲೂ ಇಲ್ಲ. ಈ ಅರಸುವಿಕೆ ಅಖಂಡ ಮೂರು ವರ್ಷಗಳನ್ನು ನುಂಗಿದರೂ ಕೂಡಾ ಆ ಅವಧಿಯ ಎಲ್ಲ ಧಾವಂತವನ್ನೂ ಮರೆಸುವಂತೆ ಯಾರಿಗೆ ಯಾರುಂಟು ಚಿತ್ರದ ಅವಕಾಶ ಪ್ರಶಾಂತ್ ಅವರನ್ನು ಅರಸಿ ಬಂದಿದೆ.

ಹೀಗೆ ನಾಯಕನಾಗಿ ಮೊದಲ ಹೆಜ್ಜೆಯಲ್ಲಿಯೇ ಭರ್ಜರಿ ಗೆಲುವು ಕಂಡರೂ ಆ ನಂತರದಲ್ಲಿ ಏಳು ಬೀಳುಗಳನ್ನೂ ಕಂಡಿರುವ ಪ್ರಶಾಂತ್ ಪಾಲಿಗೆ ಅದೆಲ್ಲವೂ ಪಾಠ. ಸಿಕ್ಕ ಸೋಲನ್ನು ಯಾರ ಹೆಗಲಿಗೋ ತಗುಲಿಸಿ ನಿರಾಳವಾಗೋ ಮನಸ್ಥಿತಿ ಅವರದ್ದಲ್ಲ. ಅದರಲ್ಲಿ ತಮ್ಮದೂ ಏನೋ ತಪ್ಪಿರ ಬಹುದು ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ವ್ಯಕ್ತಿತ್ವ ಅವರದ್ದು. ಅಂಥಾ ತಪ್ಪು ಒಪ್ಪುಗಳೆಲ್ಲವೂ ಯಾರಿಗೆ ಯಾರುಂಟು ಚಿತ್ರದ ಯಶಸ್ಸಿನ ಮೂಲಕ ಸಾರ್ಥಕ್ಯ ಪಡೆಯುತ್ತವೆ ಎಂಬ ನಂಬಿಕೆ ಹೊಂದಿರೋ ಪ್ರಶಾಂತ್ ಬದುಕಿನ ಹಾದಿ ಕೂಡಾ ಅಷ್ಟೇ ವಿಶಿಷ್ಟವಾಗಿದೆ.

ಅವರು ಅಪ್ಪಟ ಬೆಂಗಳೂರಿನ ಹುಡುಗ. ಮಾರ್ಕೆಟ್ ಏರಿಯಾದ ಕೋಟೆ ಪ್ರದೇಶದ ವಾತಾವರಣದಲ್ಲಿಯೇ ಹುಟ್ಟಿ ಬೆಳೆದವರು ಪ್ರಶಾಂತ್. ಅವರು ಓದಿದ್ದೂ ಕೂಡಾ ಕೋಟೆ ಕಾಲೇಜಿನಲ್ಲಿಯೇ. ಕಾಲೇಜು ದಿನಗಳಲ್ಲಿ ಅವರು ಲಾಸ್ಟ್ ಬೆಂಚ್ ಪಾರ್ಟಿಯಾದರೂ ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿದ್ದರು. ಹೀಗೆ ಕಾಲೇಜಿನಲ್ಲಿ ನಾಟಕವೊಂದರಲ್ಲಿ ಪ್ರಶಾಂತ್ ಅವರ ಅಭಿನಯ ನೋಡಿದ ರಂಗಕರ್ಮಿ ಎ.ಎಸ್ ಮೂರ್ತಿಯವರು ತಮ್ಮ ಅಭಿನಯ ತಂರಂಗ ಅಭಿನಯ ತರಬೇತಿ ಶಾಲೆಗೆ ಸೇರಿಸಿಕೊಂಡಿದ್ದರು. ಅಲ್ಲಿಂದಾಚೆಗೆ ಪ್ರಶಾಂತ್ ಮುಂದೆ ಹೊಸಾ ಜಗತ್ತೇ ತೆರೆದುಕೊಂಡಿತ್ತು.

ಅಭಿನಯತಂರಂಗದ ವತಿಯಿಂದ ಬೀದಿ ನಾಟಕಗಳನ್ನು ಮಾಡುತ್ತಾ ಆ ಮೂಲಕವೇ ಪ್ರಶಾಂತ್ ನಟನಾಗಿ ರೂಪುಗೊಂಡಿದ್ದರು. ಅದುವೇ ಸಿನಿಮಾ ನಾಯಕನಾಗೋ ಕನಸಿಗೂ ಉತ್ತೇಜನ ನೀಡಿತ್ತು. ಕಡೆಗೂ ಒರಟ ಐ ಲವ್ ಯೂ ಚಿತ್ರದ ಮೂಲಕ ಅದು ಸಾಕಾರಗೊಂಡಿತ್ತು. ಮೊದಲ ಚಿತ್ರದಲ್ಲಿಯೇ ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವೂ ಸಿಕ್ಕಿತ್ತು. ಆ ಗೆಲುವಿನ ಸವಿಯನ್ನು ಯಾರಿಗೆ ಯಾರುಂಟು ಚಿತ್ರ ಮತ್ತೊಮ್ಮೆ ತಮಗೆ ನೀಡುತ್ತದೆ ಎಂಬ ಭರವಸೆ ಅವರಿಗಿದೆ.

ಯಾರಿಗೆ ಯಾರುಂಟು ಚಿತ್ರದಲ್ಲಿ ತಾವು ಒರಟ ಇಮೇಜನ್ನು ಸುಳ್ಳು ಮಾಡುವಂಥಾ ಮುಗ್ಧನಾಗಿ ನಟಿಸಿದ್ದೇನೆಂಬುದು ಪ್ರಶಾಂತ್ ಮಾತು. ಅದು ಹೊಡಿ ಬಡಿ ಸೀನುಗಳಿಂದ ಸಂಪೂರ್ಣವಾಗಿ ಮುಕ್ತವಾದ ಪಾತ್ರ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದೆಂಬುದು ಅದರ ಸೂತ್ರ. ಮೂವರು ನಾಯಕಿಯರು, ಮೂರು ಥರದ ಕಾಲದ ಜೊತೆ ಪಯಣಿಸುವ ವಿಶಿಷ್ಟವಾದ ಪಾತ್ರಕ್ಕೆ ಪ್ರಶಾಂತ್ ಜೀವ ತುಂಬಿದ್ದಾರೆ. ಇದೊಂದು ಅಪ್ಪಟ ಪ್ರೇಮಕಾವ್ಯ. ಈಗ ಹಿಟ್ ಆಗಿರೋ ಹಾಡುಗಳೇ ಆ ಹೊಳಹನ್ನೂ ನೀಡಿವೆ. ಒರಟನ ಹೊಸಾ ಗೆಟಪ್, ವರ್ಷಾಂತರಗಳ ಕಾಲ ಬಯಸಿ ಒಲಿಸಿಕೊಂಡಿರೋ ಬದಲಾವಣೆ ಪ್ರೇಕ್ಷಕರಿಗೆ ಇಷ್ಟವಾಗೋದರಲ್ಲಿ ಸಂದೇಹವೇನಿಲ್ಲ.

Continue Reading

ಪ್ರಚಲಿತ ವಿದ್ಯಮಾನ

ಆವತ್ತೇ ಮೀಟಬಹುದಿತ್ತಲ್ಲಾ ತಾಯಿ!

Published

on

ಈಗ ದೇಶಾದಂತ ಮೀಟೂ ಅಭಿಯಾನವೊಂದು ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಗುರಿಯಿಟ್ಟಿರೋ ಈ ಹೋರಾಟ ಗೌರವಿಸುವಂಥಾದದ್ದೇ. ಆದರೆ ಇದೀಗ ಈ ಅಭಿಯಾನ ಕಹಳತಪ್ಪಿದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಕೆಲ ನಟಿಯರು ಮೀಟೂ ಆರೋಪ ಮಾಡೋ ಮೂಲಕ ಯಾರದ್ದೋ ಮಾನ ಹರಾಜು ಹಾಕಿ ತಾವು ಪ್ರಚಾರ ಗಿಟ್ಟಿಸಿಕೊಳ್ಳುವ ಖಯಾಲಿ ಆರಂಭಿಸಿದ್ದಾರೆ. ಈ ಕಾಯಿಲೆ ಬಾಲಿವುಡ್‌ನಲ್ಲಿಯೂ ಇದೆ. ಈಗ ಸ್ಯಾಂಡಲ್‌ವುಡ್ಡಿಗೂ ಅಮರಿಕೊಂಡಿದೆ!

ಈ ಕಾಯಿಲೆ ಸ್ಯಾಂಡಲ್‌ವುಡ್ಡಿಗೂ ಕಾಲಿಟ್ಟಿದ್ದರ ಸೂಚನೆ ಎಂಬಂತೆ ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾಳೆ. ಚಿತ್ರರಂಗದಲ್ಲಿ ಘನತೆ ಗೌರವ ಹೊಂದಿರೋ ಅರ್ಜುನ್ ಸರ್ಜಾ ಮೇಲೆ ಇಂಥಾದ್ದೊಂದು ಆರೋಪ ಮಾಡಿರೋ ಶ್ರುತಿ ವಿರುದ್ಧ ಸಾಮಾಜಿಕ ಜಾಲತಾಣಗಳ ತುಂಬಾ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಆಕೆಯ ಅಸಲೀಯತ್ತನ್ನೇ ನೇರವಾಗಿ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಪ್ರಚಾರಕ್ಕಾಗಿ ಯಾಕಿಂಥಾ ಕೀಳು ಮಟ್ಟದ ಹಾದಿ ಹಿಡಿದಿದ್ದೀರಿ ಅಂತ ಶ್ರುತಿಯನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ!

ಈ ಹಿಂದೆ ರಾಷ್ಟ್ರೀಯ ವಾಹಿನಿಯೊಂದರ ಸಮಾರಂಭದಲ್ಲಿ ಕನ್ನಡದಲ್ಲಿಯೂ ಕಾಸ್ಟಿಂಗ್ ಕೌಚ್ ಕಾಟ ಇದೆ ಅಂತ ಮಾತಾಡಿದ್ದಳಲ್ಲಾ ಶ್ರುತಿ? ಆವಾಗಲೇ ಈಕೆಯ ಪ್ರಚಾರದ ಹಪಾಹಪಿ ಎಲ್ಲರಿಗೂ ಅರ್ಥವಾಗಿತ್ತು. ಇದೀಗ ಸರ್ಜಾ ವಿಚಾರದಲ್ಲದು ಮತ್ತೊಮ್ಮೆ ಸಾಬೀತಾಗಿದೆ. ವರ್ಷಾಂತರಗಳ ಹಿಂದೆ ಅರ್ಜುನ್ ಸರ್ಜಾಗೆ ವಿಸ್ಮಯ ಅಂತೊಂದು ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿದ್ದಳು. ಆ ಚಿತ್ರದ ಚಿತ್ರೀಕರಣದ ರೊಮ್ಯಾನ್ಸ್ ಸೀನುಗಳ ರಿಹರ್ಸಲ್ ಸಮಯದಲ್ಲಿ ಸರ್ಜಾ ತನ್ನನ್ನು ತಬ್ಬಿಕೊಂಡಿದ್ದರು. ಡಿನ್ನರ್‌ಗೆ ಬರುವಂತೆ ಪದೇ ಪದೆ ಕಾಟ ಕೊಟ್ಟಿದ್ದರು. ಅದರಿಂದಾಗಿ ತಾನು ವಿಪರೀತ ಮಾನಸಿಕ ಹಿಂಸೆ ಅನುಭವಿಸಿದ್ದೆ ಎಂಬುದು ಶ್ರುತಿಯ ರೋಧನೆ.

ಒಂದು ವೇಳೆ ಅಂಥಾ ಅನುಭವ ಆಗಿದ್ದೇ ನಿಜವಾಗಿದ್ದರೆ ಸೀದಾ ಆ ಚಿತ್ರದಿಂದ ಹೊರ ಬಂದು ಆವತ್ತೇ ಮೀಟ ಬಹುದಿತ್ತಲ್ಲಾ? ಈವತ್ತು ಈ ಪಾಟಿ ಆವೇಗದಿಂದ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡೋ ಈಕೆಗೆ ಆವತ್ತು ಯಾವ ತೊಡಕಿತ್ತು? ಅಷ್ಟಕ್ಕೂ ಈವರೆಗೆ ಕನ್ನಡವೂ ಸೇರಿದಂತೆ ಅರ್ಜುನ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಎಂತೆಂಥಾ ನಟಿಯರು ಅವರಿಗೆ ನಾಯಕಿಯರಾಗಿದ್ದಾರೆ. ಆದರೆ ಯಾರೊಬ್ಬರೂ ಸರ್ಜಾ ಮೇಲೆ ಇಂಥಾದದ್ದೊಂದು ಆರೋಪ ಮಾಡಿಲ್ಲ. ಅರ್ಜುನ್ ಸರ್ಜಾ ಘನತೆಗೆ ಕುಂದುಂಟಾಗುವಂತೆ ನಡೆದುಕೊಂಡೂ ಇಲ್ಲ. ಆದರೆ ಈ ಶ್ರುತಿ ಎಂಬಾಕೆ ಯಾಕೆ ಇಂಥಾ ಕೆಲಸ ಮಾಡುತ್ತಿದ್ದಾಳೆಂಬ ಪ್ರಶ್ನೆಗೆ ಪ್ರಚಾರದ ಹಪಾಹಪಿ ಎಂಬುದನ್ನು ಬಿಟ್ಟು ಬೇರ್‍ಯಾವ ಉತ್ತರಗಳೂ ಸಿಕ್ಕೋದಿಲ್ಲ.

ಅಷ್ಟಕ್ಕೂ ಈಕೆಯನ್ನು ನಟಿಯಾಗಿ ನೆಲೆ ನಿಲ್ಲುವಂತೆ ಮಾಡಿದ್ದೇ ಕನ್ನಡ ಚಿತ್ರರಂಗ. ಆ ನಂತರ ಇಲ್ಲಿ ನಟಿಯಾಗಿ ಒಂದಷ್ಟು ಅವಕಾಶವನ್ನು ಪಡೆಯುತ್ತಲೇ ಆಕಾಶದಲ್ಲಿ ತೇಲಾಡಲಾರಂಭಿಸಿದ್ದ ಶ್ರುತಿ ನಖರಾ ಆರಂಭಿಸಿದ್ದಳೆಂಬ ಆರೋಪ ಯಾವತ್ತಿನಿಂದಲೂ ಕೇಳಿ ಬರುತ್ತಿದೆ. ಈಗ ಆಕೆಯ ಬಳಿ ಯಾವ ಅವಕಾಶಗಳೂ ಇಲ್ಲ. ಬೇರೆ ಭಾಷೆಗಳಲ್ಲಿಯೂ ಇದೇ ಕಥೆ. ಹೀಗಿರುವಾಗ ಒಂದಷ್ಟು ಪ್ರಚಾರ ಗಿಟ್ಟಿಸಿ ಅದೇ ಪ್ರಭೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಇರಾದೆಯಿಂದಲೇ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾಳೆಂಬುದು ಸಾರ್ವತ್ರಿಕ ಅಭಿಪ್ರಾಯ.

ಈ ಬಗ್ಗೆ ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಮಾವ ರಾಜೇಶ್ ಅವರೂ ಕೂಡಾ ಶ್ರುತಿ ಮೇಲೆ ಹರಿ ಹಾಯ್ದಿದ್ದಾರೆ. ಅದೆಷ್ಟೋ ವರ್ಷಗಳ ಹಿಂದಾಗಿದೆ ಎನ್ನಲಾದ ಕಿರುಕುಳವನ್ನು ಈಗ ಕೆದಕೋ ಮೀಟೂ ಅನ್ನೋದೊಂದು ಕಾಯಿಲೆ. ಈಗ ಅದು ಶ್ರುತಿ ಎಂಬ ನಟಿಗೂ ಅಂಟಿಕೊಂಡಿದೆ. ಅರ್ಜುನ್ ಸರ್ಜಾ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ. ಅವರ ಮೇಲೆ ಶ್ರುತಿ ಮಾಡುತ್ತಿರೋ ಆರೋಪ ಪ್ರಚಾರದ ಉದ್ದೇಶವನ್ನು ಮಾತ್ರವೇ ಹೊಂದಿದೆ. ಶ್ರುತಿಯಂಥಾ ನಟಿಯರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯವನ್ನು ರಾಜೇಶ್ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಶೃತಿ ತೀರಾ ಮಡಿವಂತ ಹೆಣ್ಣುಮಗಳೇನಲ್ಲ. ಸೆಕ್ಸ್ ಕುರಿತು ರೇಡಿಯೋ ಕಾರ್ಯಕ್ರಮದಲ್ಲಿ ಈಕೆಯ ಮಾತು ಕೇಳಿದವರು ನಿಜಕ್ಕೂ ಬೆಚ್ಚಿಬಿದ್ದಿದ್ದಿದೆ. ಸಿನಿಮಾ ಶೂಟಿಂಗುಗಳಿಗೆ ಹೋದಾಗ ಈಕೆ ಮತ್ತು ಈಕೆಯ ತಾಯಿ ಕಂಠಮಟ್ಟ ಕುಡಿದು ಚಿತ್ತಾಗುತ್ತಾರೆ ಅನ್ನೋ ಅರೋಪ ಕೂಡಾ ಇದೆ. ಇದೆಲ್ಲಾ ಕೆದಕುತ್ತಾ ಹೋದರೆ ನಂಬಲಸಾಧ್ಯ ಮಾಹಿತಿಗಳೇ ಹೊರಬೀಳುತ್ತವೆ. ಇಷ್ಟಕ್ಕೂ ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಟ್ರೂಪಿನಲ್ಲಿ ಯಕಃಶ್ಚಿತ್ ಡ್ಯಾನ್ಸರ್ ಆಗಿದ್ದ ಶೃತಿ ಹರಿಹರನ್ ಸಿನಿಮಾ ನಟಿಯಾಗಿ ಛಾನ್ಸು ಗಿಟ್ಟಿಸಿಕೊಳ್ಳಲು ತನ್ನ ಪ್ರತಿಭೆಯ ಹೊರತಾಗಿ ಮಾಡಿದ ಸರ್ಕಸ್ಸುಗಳ ಕುರಿತು ದಂತಕತೆಗಳಿವೆ. ಅದನ್ನೆಲ್ಲಾ ಬಯಲಿಗೆಳೆಯದ ಶೃತಿ ಯಾಕೆ ಅರ್ಜುನ್ ಸರ್ಜಾ ಬಗ್ಗೆ ಮಾತ್ರ ಮಾತಾಡುತ್ತಿದ್ದಾಳೆ ಅನ್ನೋದೆಲ್ಲಾ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಶ್ರುತಿ ಹರಿಹರನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆಯಲ್ಲಾ ಆಕ್ರೋಶದ ಕಮೆಂಟುಗಳು? ಅದೇ ಎಲ್ಲವನ್ನೂ ಹೇಳುತ್ತಿವೆ.

cinibuzzಅನ್ನು ಇನಸ್ ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿ

https://www.instagram.com/cinibuzzsandalwood

Continue Reading

Trending

Copyright © 2018 Cinibuzz