ಸುದೀಪ್ ಅವರ ಪಾಲಿಗೆ ಈ ಹುಟ್ಟುಹಬ್ಬದ ನಂತರದಲ್ಲಿ ಹೊಸತನದ ಸುಗ್ಗಿಯೇ ಆರಂಭವಾದಂತಿದೆ. ಕನ್ನಡದಲ್ಲಿಯೂ ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡಿರೋ ಅವರು, ಬೇರೆ ಭಾಷೆಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಮೆಘಾಸ್ಟಾರ್ ಚಿರಂಜೀವಿ ಜೊತೆ ಸೈರಾ ಚಿತ್ರದಲ್ಲಿ ನಟಿಸುತ್ತಿರೋ ಸುದೀಪ್ ತಮಿಳು ನಟ ಧನುಶ್ ನಿರ್ದೇಶನದ ಚಿತ್ರವೊಂದರಲ್ಲಿಯೂ ನಟಿಸಲಿದ್ದಾರಾ?
![]()
ಇದೀಗ ಹರಿದಾಡುತ್ತರೋ ಸುದ್ದಿಗಳು ಹೌದು ಎಂಬಂಥಾ ಉತ್ತರವನ್ನೇ ಧ್ವನಿಸುವಂತಿವೆ. ನಟನಾಗಿ, ಹಾಡುಗಾರನಾಗಿ ಪರಿಚಿತರಾಗಿರೋ ರಜನೀಕಾಂತ್ ಅಳಿಯ ಧನುಶ್ ನಿರ್ದೇಶಕನಾಗಿಯೂ ಸೈ ಅನ್ನಿಸಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರಲಿರೋ ಹೊಸಾ ಚಿತ್ರಕ್ಕೆ ಸದ್ದೇ ಇಲ್ಲದಂತೆ ಸಿದ್ಧತೆಗಳು ಆರಂಭವಾಗಿವೆ. ಆ ಚಿತ್ರದಲ್ಲಿ ಸುದೀಪ್ ಕೂಡಾ ನಟಿಸಲಿದ್ದಾರೆಂಬ ಸುದ್ದಿ ಎಲ್ಲೆಡೆಯಿಂದಲೂ ಕೇಳಿ ಬರಲಾರಂಭಿಸಿದೆ.

ಧನುಶ್ ನಿರ್ದೇಶನದ ಈ ಚಿತ್ರ ಮಲ್ಟಿಸ್ಟಾರರ್ ಚಿತ್ರ. ಇದರಲ್ಲಿ ನಾಗಾರ್ಜುನ, ಸುದೀಪ್ ಸೇರಿದಂತೆ ಬಹು ಭಾಷೆಯ ಇನ್ನೊಂದಷ್ಟು ಸ್ಟಾರ್ ನಟರೂ ಅಭಿನಯಿಸಲಿದ್ದಾರಂತೆ. ಒಂದು ಮೂಲದ ಪ್ರಕಾರ ಸುದೀಪೊ ಅವರ ಜೊತೆಗೆ ಈ ಚಿತ್ರದ ಬಗೆಗಿನ ಮಾತುಕತೆಗಳೂ ಫೈನಲ್ ಆಗಿವೆ. ಈ ಬಗೆಗಿನ ಅಧಿಕೃತ ಮಾಹಿತಿಗಳು ಹೊರ ಬೀಳೋದಷ್ಟೇ ಬಾಕಿ ಉಳಿದಿದೆ.
ತಮ್ಮ ಪಾಡಿಗೆ ತಾವು ಈ ಚಿತ್ರಕ್ಕಾಗಿ ವರ್ಷದಿಂದೀಚೆಗೆ ಧನುಶ್ ಕಾರ್ಯಪ್ರವೃತ್ತರಾಗಿದ್ದರಂತೆ. ಇದೀಗ ಎಲ್ಲ ವಿಭಾಗಳನ್ನೂ ತುಂಬಿಸಿಕೊಂಡು ತಾರಾಗಣದ ಆಯ್ಕೆಯನ್ನೂ ಹೆಚ್ಚೂಕಡಿಮೆ ಪೂರೈಸಿಕೊಂಡಿರೋ ಧನುಶ್ ಚಿತ್ರೀಕರಣಕ್ಕಾಗಿ ಅದ್ಭುತವಾದ ಲೊಕೇಷನ್ನುಗಳ ಹುಡುಕಾಟದಲ್ಲಿದ್ದಾರಂತೆ!
#












































