ಕನ್ನಡ ಚಿತ್ರರಂಗದ ದಿಗ್ಗಜರ ಮಹಾಸಂಗಮಮತ್ತೆ ಜೊತೆಯಾದ ನಿರ್ದೇಶಕ ಎಸ್ .ಮಹೇಂದರ್, ನಾದಬ್ರಹ್ಮ ಹಂಸಲೇಖ

Picture of Cinibuzz

Cinibuzz

Bureau Report

ಶ್ರೀಗುರುರಾಯರು ಸಿನಿಮಾ ಬ್ಯಾನರ್ ನಡಿಯಲ್ಲಿ ಹೊಸ ಮುನ್ನುಡಿ

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ.. ಹೊಸ ತಲೆಮಾರಿನ ಸಿನಿಮಾಗಳು ಬರ್ತಿವೆ.. ಜಾಗತಿಕ ಮಟ್ಟದಲ್ಲಿ ಕನ್ನಡದ ಕಂಪು ಇಂಪನ್ನ ಸೂಸ್ತಿವೆ.. ಈ ಬೆಳವಣಿಗೆಗೆ ಅಡಿಪಾಯ ಹಾಕಿದವರು.. ಆ ಕಾಲಘಟ್ಟದಲ್ಲಿ ಹಲವು ದಾಖಲೆಗಳನ್ನ ಬರೆದವರು… ಹೊಸ ಅಲೆಯ ಸಿನಿಮಾಗಳಿಗೆ ಮುದ್ರೆ ಹಾಕಿದವರು… ಮತ್ತೆ ಬರ್ತಿದ್ದಾರೆ. ಅದೇ ಉತ್ಸಾಹ.. ಅದೇ ಹುಮ್ಮಸ್ಸು.. ಅದೇ ಸಿನಿಮಾ ಶಿಸ್ತಿನಲ್ಲಿ.. ಈ ತಲೆಮಾರಿಗೊಂದು ನವ್ಯ ಸಿನಿಮಾ ಕೊಡಲು ಸಜ್ಜಾಗಿದ್ದಾರೆ..ಅವರೇ.. ನಿರ್ದೇಶಕ ಎಸ್ ಮಹೇಂದರ್ ಮತ್ತು ನಾದಬ್ರಹ್ಮ ಹಂಸಲೇಖ.

ಸುಮಾರು 20 ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿ… ಸತತ ಗೆಲುವುಗಳನ್ನ ಸಂಭ್ರಮಿಸಿದ್ದ ಇವರು, ಮತ್ತೊಂದು ಹೊಸ ದೃಶ್ಯಕಾವ್ಯಕ್ಕೆ ಕೈ ಜೋಡಿಸಿದ್ದಾರೆ.

ಈ ಸೂಪರ್ ಹಿಟ್ ಕಾಂಬಿನೇಷನ್ ಸಿನಿಮಾಗೆ, ಸುಮಾರು ಮೂರು ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿದ್ದಂತಹ, ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ.ಸಿ ವಿಜಯ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತಿದ್ದಾರೆ.

ಶ್ರೀಗುರುರಾಯರು ಸಿನಿಮಾ ಬ್ಯಾನರ್ ನಡಿಯಲ್ಲಿ ಚಿತ್ರ ಸೆಟ್ಟೇರಲಿದ್ದು, ಇದೇ ತಿಂಗಳ 16ನೇ ತಾರೀಖು ಚಿತ್ರದ ಶೀರ್ಷಿಕೆ ಮತ್ತು ಚಿತ್ರತಂಡದ ಅಧಿಕೃತ ಪರಿಚಯ ಮಾಡಿಕೊಡಲಿದ್ದಾರೆ.

ಇನ್ನಷ್ಟು ಓದಿರಿ

Scroll to Top