ದಕ್ಷಿಣ ಭಾರತದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸುದ್ದಿಗಳು ಈಗ ಗಾಂಧಿನಗರದಿಂದ ಜ್ಯುಬಿಲಿ ಹಿಲ್ಸ್‌ವರೆಗೆ ಹಲ್‌ಚಲ್ ಎಬ್ಬಿಸಿವೆ. ಮೂಲಗಳ ಪ್ರಕಾರ ಫೆಬ್ರವರಿ 26ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಗುಸುಗುಸು ದಟ್ಟವಾಗಿದೆ. ಈ ಹೈ-ಪ್ರೊಫೈಲ್ ಮದುವೆಯ ಸಂಭ್ರಮದ ನಡುವೆ, ಅಭಿಮಾನಿಗಳ ಕಣ್ಣು ಈಗ ಈ ಸ್ಟಾರ್ ಜೋಡಿಯ ಒಟ್ಟಾರೆ ಆಸ್ತಿ ಮತ್ತು ಸಂಪಾದನೆಯತ್ತ ನೆಟ್ಟಿದೆ.

ಸಂಪತ್ತಿನ ಒಡತಿ ಕೊಡಗಿನ ಬೆಡಗಿ ರಶ್ಮಿಕಾ ಸದ್ಯ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರ ಆಸ್ತಿ ಮೌಲ್ಯ ಅಂದಾಜು 66 ಕೋಟಿ ರೂಪಾಯಿಗಳೆಂದು ಹೇಳಲಾಗುತ್ತಿದೆ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲೂ ಸತತ ಹಿಟ್‌ಗಳನ್ನು ನೀಡುತ್ತಿರುವ ರಶ್ಮಿಕಾ, ಪ್ರತಿ ಸಿನಿಮಾಗೆ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ, ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿಯಾಗಿರುವ ಇವರು ಜಾಹೀರಾತುಗಳ ಮೂಲಕವೂ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ.
ಹೈದರಾಬಾದ್, ಮುಂಬೈ ಸೇರಿದಂತೆ ವಿವಿಧೆಡೆ ಐಷಾರಾಮಿ ಬಂಗಲೆಗಳನ್ನು ಹೊಂದಿರುವ ರಶ್ಮಿಕಾ, ದುಬಾರಿ ಕಾರುಗಳ ಸಂಗ್ರಹವನ್ನೇ ಇಟ್ಟುಕೊಂಡಿದ್ದಾರೆ. ಅವರ ಈ ಸ್ಥಿರ ಬೆಳವಣಿಗೆ ಅವರನ್ನು ಚಿತ್ರರಂಗದ ಶ್ರೀಮಂತ ನಾಯಕಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದೆ.
ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅಬ್ಬರ ಇತ್ತ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಕೂಡ ಆಸ್ತಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಅವರ ನಿವ್ವಳ ಆಸ್ತಿ ಸುಮಾರು 50 ರಿಂದ 70 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ ಎನ್ನಲಾಗುತ್ತಿದೆ. ಸಿನಿಮಾ ಸಂಭಾವನೆಯ ಹೊರತಾಗಿ, ವಿಜಯ್ ಅವರಿಗೆ ‘ರೌಡಿ ಕ್ಲಬ್’ ಎಂಬ ಫ್ಯಾಶನ್ ಬ್ರ್ಯಾಂಡ್ ದೊಡ್ಡ ಮಟ್ಟದ ಲಾಭ ತಂದುಕೊಡುತ್ತಿದೆ. ಹೈದರಾಬಾದ್‌ನ ಅತಿ ದುಬಾರಿ ಬಡಾವಣೆಯಲ್ಲಿ ಐಷಾರಾಮಿ ಮನೆಯನ್ನು ಹೊಂದಿರುವ ವಿಜಯ್, ತಮ್ಮ ವಿಶಿಷ್ಟ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಗ್ಯಾರೇಜ್‌ನಲ್ಲಿರುವ ಪ್ರೀಮಿಯಂ ಕಾರುಗಳು ಅವರ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಸುಮಾರು 120 ರಿಂದ 140 ಕೋಟಿ ರೂಪಾಯಿಗಳ ಬೃಹತ್ ಸಾಮ್ರಾಜ್ಯದ ಒಡೆಯರಾಗಲಿರುವ ಈ ಜೋಡಿ, ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ದಂಪತಿಗಳಲ್ಲಿ ಒಬ್ಬರಾಗಲಿದ್ದಾರೆ. ಅಧಿಕೃತವಾಗಿ ಇಬ್ಬರೂ ಮದುವೆಯ ಬಗ್ಗೆ ತುಟಿ ಬಿಚ್ಚದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಮಾಹಿತಿ ಮತ್ತು ಫೆಬ್ರವರಿ 26ರ ದಿನಾಂಕ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ. ಒಟ್ಟಿನಲ್ಲಿ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಇಬ್ಬರೂ ವೈಯಕ್ತಿಕ ಜೀವನದ ಹೊಸ ಹಂತಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.









































