ಹೃದಯಕೆ ಹೆದರಿಕೆ ಹೀಗೆ ನೋಡಿದರೆ!
ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರ ಇದುವರೆಗೂ ನಾನಾ ಥರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಇದೀಗ ಚೆಂದದ ಹಾಡುಗಳ ಸರದಿ. ಹಂತ ಹಂತವಾಗಿ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುತ್ತಿರೋ ಚಿತ್ರ ತಂಡ ಇದೀಗ ಹೊಸಾ ಹಾಡಿನ ಲಿರಿಕಲ್ ವೀಡಿಯೋವೊಂದನ್ನು ಅನಾವರಣಗೊಳಿಸಿದೆ.
ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಘಂಟೆ ಕಳೆಯುವಷ್ಟರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಜಿತ್ ಹೆಗಡೆ ಹಾಡಿರೋ `ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂಬ ಹಾಡು ತನ್ನ ಮೆಲೋಡಿಯಿಂದಲೇ ಎಲ್ಲರನ್ನೂ ನವಿರಾಗಿ ತಾಕಿದೆ. ಈ ಮೂಲಕವೇ ಬಹಳಷ್ಟು ವೀಕ್ಷಣೆಯನ್ನೂ ಪಡೆದುಕೊಂಡಿದೆ.
ಇದು ರೊಮ್ಯಾಂಟಿಕ್ ಮೆಲೋಡಿ ಸಾಂಗ್. ಈ ಹಿಂದೆ ತಾಯಿಗೆ ತಕ್ಕ ಮಗ ಚಿತ್ರದ ಟೈಟಲ್ ಸಾಂಗ್ ಹಾಗೂ ಮತ್ತೊಂದು ಹಾಡೂ ಕೂಡಾ ಬಿಡುಗಡೆಯಾಗಿತ್ತು. ಜ್ಯೂಡಾ ಸ್ಯಾಂಡಿಯವರ ಸಂಗೀತ ಮತ್ತು ಪರವಶಗೊಳಿಸೋ ಸಾಹಿತ್ಯ ಜನಮನ ಗೆದ್ದಿತ್ತು. ಇದೀಗ ಈ ಮೆಲೋಡಿ ಹಾಡು ಪ್ರೇಕ್ಷಕರಿಗೆ ಮುದ ನೀಡಲಾರಂಭಿಸಿದೆ.
#












































