ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದ ಸೂಕ್ಷ್ಮ ಕುಸುರಿ!

Picture of Cinibuzz

Cinibuzz

Bureau Report

ಯಾವುದೋ ಬಿಡುಗಡೆ ಬಯಸಿ ಥೇಟರಿಗೆ ಬರುವ ಪ್ರೇಕ್ಷಕರ ಮನಸಿಗಂಟಿಕೊಳ್ಳೋ ಪಾತ್ರಗಳು, ಅವುಗಳನ್ನೊಳಗೊಂಡ ಚಿತ್ರಗಳು ಸೋತ ಉದಾಹರಣೆ ಕಡಿಮೆ. ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಕೂಡಾ ಅಂಥಾದ್ದೊಂದು ಕಾಡುವ ಗುಣದಿಂದಲೇ ಬಿಡುಗಡೆಯಾಗಿ ವಾರ ಕಳೆದರೂ ಯಶಸ್ವೀ ಪ್ರದರ್ಶನವನ್ನು ಕಾಯ್ದುಕೊಂಡಿದೆ!

ಯಾವ ಚಿತ್ರ ಇತರೇ ವರ್ಗಗಳ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಳ್ಳುತ್ತದೋ ಅದು ಗೆದ್ದಿತೆಂದೇ ಅರ್ಥ. ಮೊದಲ ದಿನದಿಂದಲೇ ಇರುವುದೆಲ್ಲವ ಬಿಟ್ಟು ಚಿತ್ರದ ವಿಚಾರದಲ್ಲಿ ಅಂಥಾದ್ದೊಂದು ಸೂಚನೆ ಸಿಕ್ಕಿತ್ತು. ದಿನ ಕಳೆದಂತೆ ಬಾಯಿಂದ ಬಾಯಿಗೆ ಹರಡಿಕೊಂಡ ಒಳ್ಳೆ ಅಭಿಪ್ರಾಯಗಳೇ ಕುಟುಂಬ ಸಮೇತರಾಗಿ ಜನ ಥೇಟರಿನತ್ತ ದೌಡಾಯಿಸುವಂತೆ ಮಾಡಿದೆ. ಈ ಕ್ಷಣಕ್ಕೂ ಫ್ಯಾಮಿಲಿ ಆಡಿಯನ್ಸ್ ಕಾರಣದಿಂದಲೇ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಬಹುಶಃ ಈ ಚಿತ್ರದ ಪಾತ್ರಗಳು ಅಷ್ಟೊಂದು ತೀವ್ರವಾಗಿ ಮೂಡಿ ಬರದೇ ಇದ್ದಿದ್ದರೆ ಇಂಥಾದ್ದೊಂದು ಜಾದೂ ಕಷ್ಟ ಸಾಧ್ಯವಾಗುತ್ತಿತ್ತೇನೋ… ನಮ್ಮದೇ ತಳಮಳ, ತಾಕಲಾಟಗಳು ಪಾತ್ರವಾಗಿದೆಯೇನೋ ಅಂತ ಫೀಲು ಹುಟ್ಟಿಸುತ್ತಲೇ ಎಲ್ಲರನ್ನೂ ಆವರಿಸಿಕೊಳ್ಳುವಂಥಾ ಚಿತ್ರವೊಂದನ್ನು ಕಟ್ಟಿ ಕೊಡುವಲ್ಲಿ ನಿರ್ದೇಶಕ ಕಾಂತ ಕನ್ನಲ್ಲಿ ಗೆದ್ದಿದ್ದಾರೆ. ಇದಕ್ಕೆ ಚಿತ್ರಮಂದಿರದತ್ತ ಕುಟುಂಬ ಸಮೇತರಾಗಿ ಹರಿದು ಬರುತ್ತಿರೋ ಪ್ರೇಕ್ಷಕರೇ ಸಾಕ್ಷಿ.

ಕನ್ನಡ ಚಿತ್ರರಂಗ ಆಗಾಗ ಇಂಥಾ ಅಮೋಘವಾದ ಗೆಲುವುಗಳಿಂದ ರಿಫ್ರೆಶ್ ಆಗುತ್ತಿರುತ್ತದೆ. ಅದೆಷ್ಟೋ ದಿನಗಳಿಂದ ಥೇಟರುಗಳತ್ತ ಮುಖ ಮಾಡದವರಿಗೂ ಹೊಸಾ ರುಚಿ ಹತ್ತಿಸುತ್ತಿರುತ್ತವೆ. ಆ ಕೆಲಸವನ್ನು ಇರುವುದೆಲ್ಲವ ಬಿಟ್ಟು ಚಿತ್ರ ಮಾಡಿದೆ. ಚಿತ್ರತಂಡದ ಮುಖದಲ್ಲಿ ಸಡಗರಗಳೆಲ್ಲ ಒಟ್ಟಾಗಿ ಎದೆತುಂಬಿಕೊಂಡಂಥಾ ಸಂಭ್ರಮ ಲಕಲಕಿಸುತ್ತಿದೆ!

#

ಇನ್ನಷ್ಟು ಓದಿರಿ

Scroll to Top