ಮಲಯಾಳಂ ‘ ಲೋಕಾ ‘ ಸಿನಿಮಾ ಕರ್ನಾಟಕದಲ್ಲಿ ವಿತರಿಸಿ ಬಹುದೊಡ್ಡ ಯಶಸ್ಸುಗಳಿಸಿದ ಲೈಟರ್ ಬುದ್ದ ಫಿಲಂಸ್

ಈವಾರ ಮತ್ತೊಂದು ‘ಇಕೋ’ (EKO)ಅನ್ನೋ ವರ್ಲ್ಡ್ ಕ್ಲಾಸ್ ಮಲಯಾಳಂ ಸಿನಿಮಾವನ್ನ ರಿಲೀಸ್ ಮಾಡಿದೆ.

ಅತ್ಯತ್ತಮ ವಿಮರ್ಶೆಗಳನ್ನ ಗಳಿಸಿರೋ ಇಕೋ ಲೋಕಾ ತರಹನೇ ದೊಡ್ಡ ಯಶಸ್ಸಿನತ್ತ ದಾಪುಗಾಲಿಡ್ತಿದೆ. ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನ ಕಂಡಿದೆ.
ಈ ಮೂಲಕ ಲೈಟರ್ ಬುದ್ದ ಫಿಲಂಸ್ ಈ ವರ್ಷ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಸುಫ್ರಮ್ ಸೋ ನಿರ್ಮಿಸಿದ ಉದ್ಯಮದಲ್ಲಿ ದಾಖಲೆಯ ಯಶಸ್ಸು ಗಳಿಸಿ, ಲೋಕಾ ವಿತರಿಸಿ ದೊಡ್ಡ ಯಶಸ್ಸು ಕಂಡು, ಈಗ ವರ್ಷಾಂತ್ಯದಲ್ಲಿ ‘ಇಕೋ’ ಚಿತ್ರದೊಂದಿಗೆ 2025ರಲ್ಲಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟ ಶ್ರೇಯಕ್ಕೆ ಪಾತ್ರವಾಗ್ತಿದೆ.











































