ಇದೇ ಶುಕ್ರವಾರ ಜಗನ್ಮಾತೆ ಅಕ್ಕಮಹಾದೇವಿ

Picture of Cinibuzz

Cinibuzz

Bureau Report

ಭರತ್ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಸಿದ್ದವಾಗಿರುವ ’ಶ್ರೀ ಜಗನ್ಮಾತೆ ಅಕ್ಕಮಹಾದೇವಿ’ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತ್ತಪಡಿಸಿದೆ ಕ್ಲೀನ್ ’ಯು’ ಪ್ರಮಾಣಪತ್ರ ನೀಡಿದೆ. ’ಮನಸುಗಳ ಮಾತು ಮಧುರ, ಡಾ.ಅಂಬೇಡ್ಕರ್, ಗಂಗಾಕಾವೇರಿ, ಕಲ್ಯಾಣಕುವರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಿರಿಯ ತಂತ್ರಜ್ಘ ವಿಷ್ಣುಕಾಂತ್.ಬಿ.ಜೆ ನಿರ್ಮಾಣ, ಆಕ್ಷನ್ ಕಟ್ ಹೇಳುವ ಜತೆಗೆ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಶ್ರೀ ಬಸವಣ್ಣ ಮತ್ತು ಅಕ್ಕಮಹಾದೇವಿ ಬರೆದಿರುವ 21 ವಚನಗಳನ್ನು ಬಳಸಿಕೊಂಡು ನಿರ್ದೇಶಕರು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.


ಆರ್.ಪಳನಿಸೇನಾಪತಿ ಸಂಗೀತ ಸಾರಥ್ಯದಲ್ಲಿ ಲೈವ್ ವಾದ್ಯಗಳೊಂದಿಗೆ ಧ್ವನಿಗ್ರಹಣ ನಡೆಸಿರುವುದು ವಿಶೇಷ. ತಾರಾಗಣದಲ್ಲಿ ಸುಲಕ್ಷಾಕೈರಾ, ಭವ್ಯ, ಶ್ವೇತಾ, ಬಿರಾದಾರ್, ಮೈಸೂರು ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ತಬಲಾನಾಣಿ, ಸುಚೇಂದ್ರಪ್ರಸಾದ್, ಎಂ.ಪಾಟೀಲ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ರವಿಸುವರ್ಣ, ನೃತ್ಯ ಮದನ್‌ಹರಿಣಿ, ಸಂಕಲನ ಅಮಿತ್‌ಜವಳಕರ ಅವರದಾಗಿದೆ. ಗುಲ್ಬರ್ಗಾ, ಬೀದರ್, ಶ್ರೀಶೈಲ ಹಾಗೂ ಕಾಡು ಗುಡ್ಡದ ಸರೋವರ ಜಲಪಾತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಸಿನಿಮಾವು ಹೊಸ ವರ್ಷದ 2ನೇ ದಿನದಂದು ಅಂದರೆ ಜನವರಿ ಎರಡರಂದು ರಾಜ್ಯಾದ್ಯಂತ ಹಾಗೂ ಮಹಾರಾಷ್ಟ್ರ, ಸೊಲ್ಲಾಪುರದಲ್ಲಿ ಬೇಡಿಕೆ ಇರುವುದರಿಂದ ಅಲ್ಲಿಯೂ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ವಿಷ್ಣುಕಾಂತ್.ಬಿ.ಜೆ

ಇನ್ನಷ್ಟು ಓದಿರಿ

Scroll to Top