ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾ 2024ರ ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪ್ರಭಾಸ್ ಅನಾವರಣಗೊಳಿಸಿದ್ದಾರೆ.
ಪ್ರಭಾಸ್ ಹಂಚಿಕೊಂಡಿರುವ ಫಸ್ಟ್ ಲುಕ್ನಲ್ಲಿ ಪೃಥ್ವಿರಾಜ್ ಉದ್ದ ಕೂದಲು ಮತ್ತು ಗಡ್ಡದಲ್ಲಿ ರಗಡ್ ಲುಕ್ನಲ್ಲಿ ಕಂಡಿದ್ದಾರೆ. ಈ ಪಾತ್ರವನ್ನು ನಿರ್ವಹಿಸಲು ನಟ ಪೃಥ್ವಿರಾಜ್ ತೂಕವನ್ನು ಕಳೆದುಕೊಂಡಿದ್ದಾರೆ. ಪ್ರಭಾಸ್ ಪೋಸ್ಟ್ನಲ್ಲಿ “ಪೃಥ್ವಿರಾಜ್ ಸರ್ ಅವರ `ದಿ ಗೋಟ್ ಲೈಫ್’ ಫಸ್ಟ್ ಲುಕ್ ಪೋಸ್ಟರ್. ಅದಮ್ಯ ಮಾನವ ಚೇತನ ಪ್ರಯಾಣ! ಏಪ್ರಿಲ್ 10ರಂದು ಸಿನಿಮಾ ರಿಲೀಸ್ʼʼಎಂದು ಬರೆದುಕೊಂಡಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಪೃಥ್ವಿರಾಜ್, “ಆಡು ಜೀವನದ ಕುರಿತು ಸಿನಿಮಾ ಮಾಡುವುದು ಕಷ್ಟಕರ ಎಂದು ನನಗೆ ತಿಳಿದಿತ್ತು. ಸಿನಿಮಾ ಉದ್ದಕ್ಕೂ ನಾನು ಎದುರಿಸಬೇಕಾದ ಸವಾಲುಗಳ ಬಗ್ಗೆ ನನಗೆ ತಿಳಿದಿತ್ತು. ಚಿತ್ರದಲ್ಲಿಯ ನಜೀಬ್ ಪಾತ್ರಕ್ಕೆ ಐದು ವರ್ಷ ಮೀಸಲಿಟ್ಟಿದ್ದೆʼʼ ಎಂದಿದ್ದಾರೆ.
ಆಡು ಜೀವಿತಂ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.
ಆಡು ಜೀವಿತಂ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.
ಏನಿದೆ ಆಡುಜೀವಿತಂ ಸಿನಿಮಾ ಕಥೆ?
ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್ನಲ್ಲಿ ಇದರ ಟೈಟಲ್ GOAT LIFE ಎಂದಿದೆ.
ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.
ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.
No Comment! Be the first one.