ಬಿ.ಛಲ ಅವರ ನಿರ್ದೇಶನದಲ್ಲಿ  ಮೂಡಿ ಬಂದಿರುವ ಅಪರೂಪದ ಪ್ರೇಮಕಥಾನಕ ಹೊಂದಿರುವ ಚಿತ್ರ ಅಂದವಾದ  ಬಹಳ ದಿನಗಳ ನಂತರ ಅನುಷ ರಂಗನಾಥ್ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಜೈ  ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.  ಈ ಚಿತ್ರದ ಟ್ರೈಲರ್ ಅನಾವರಣ ಕಾರ್ಯಕ್ರಮ ಎಸ್.ಆರ್.ವಿ. ಥಿಯೇಟರ್‌ನಲ್ಲಿ ನೆರವೇರಿತು.  ನಿರ್ದೇಶಕ ಸಿಂಪಲ್ ಸುನಿ ಅವರು ಈ ಚಿತ್ರದ ಟ್ರೈಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ದಿನ ಸುನೀ ಅವರ ಹುಟ್ಟುಹಬ್ಬ ಕೂಡ ಇದ್ದ ಕಾರಣ ಚಿತ್ರತಂಡ ಕೇಕ್ ಕಟ್ ಮಾಡಿಸುವ ಮೂಲಕ ಸುನೀ ಅವರಿಗೆ ಶುಭ ಕೋರಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಛಲ ನನ್ನ ನಿರ್ದೇಶನದಲ್ಲಿ ಮೂಡಿಬಂದಿರುವ ಮೊದಲ ಚಿತ್ರವಿದು, ಹಸಿದ ಹುಡುಗನಿಗೆ ಒಂದು ಕಪ್ ಕಾಫಿ ಕೊಟ್ಟರೆ ಹೇಗಿರುತ್ತೋ ಹಾಗೆ ಈ ಸಿನಿಮಾ ನನಗೆ.  ನಾಯಕಿ ಅನುಷ ಜೈ ಅವರ ಸಹಕಾರ, ಜೊತೆಗೆ ಛಾಯಾಗ್ರಾಹಕ ಹರೀಶ್ ಸೊಂಡೆಕೊಪ್ಪ ಅವರ ಅದ್ಭುತ ಕ್ಯಾಮರಾ ವರ್ಕ್ ಚಿತ್ರಕ್ಕೆ ಪ್ಲಸ್ ಪಾಯಿಂಟ್.  ಸಂಗೀತ ನಿರ್ದೇಶಕ ವಿಕ್ರಂ ವರ್ಮನ್ ಅವರು ಈ ಸಿನಿಮಾ ಮುಗಿಯೋ ವೇಳೆಗೆ ಕನ್ನಡ ಮಾತನಾಡುವುದನ್ನು ಕಲಿತರು.  ಮಳೆ ಮತ್ತು ಮಂಜಿನ ಹಿನ್ನಲೆಯಲ್ಲಿ ಇಡೀ ಸಿನಿಮಾ ಶೂಟ್ ಮಾಡಿದ್ದೇವೆ.  ಸಕಲೇಶಪುರ, ಕೊಡಚಾದ್ರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  ಮಳೆಯಲ್ಲೇ ಸಾಗುವ ಕ್ಯೂಟ್ ಲವ್‌ಸ್ಟೋರಿ ಇದಾಗಿದೆ.  ಕೊಡಚಾದ್ರಿಯ ಇದ್ದಲಿ ಮನೆಯಲ್ಲಿ ಕೂಡ ಚಿತ್ರೀಕರಿಸಿದ್ದೇವೆ ಎಂದು ಹೇಳಿದರು.
ನಿರ್ಮಾಪಕಿ ಜಿ.ರಾಜ ಮಾತನಾಡಿ ಸಿನಿಮಾದ ಬಗ್ಗೆ ನನಗೇನೂ ಗೊತ್ತಿದ್ದಿಲ್ಲ ಆದರೂ ನಿರ್ದೇಶಕರು ಹೇಳಿದ ಕಥೆ ನಮಗೆ ಇಷ್ಟವಾಯಿತು, ಪರಿಸರ ಪ್ರಜ್ಞೆಯನ್ನು ಮೂಡಿಸುವ ಕಥೆ ಈ ಕಥೆಯಲ್ಲಿದೆ.  ನೇಚರ್‌ನ್ನು ಹರೀಶ್ ಅವರು ಸುಂದರವಾಗಿ ತೋರಿಸಿದ್ದಾರೆ ಎಂದು ಹೇಳಿದರು.
ನಾಯಕಿ ಅನುಷಾ ಮಾತನಾಡಿ ಮುಗ್ಧ ನಾಯಕನನ್ನು ತುಂಬ ಆಟವಾಡಿಸುವ ಹುಡುಗಿ.  ನಾನು ಆಟವಾಡಿಸುತ್ತಿದ್ದೇನೆ ಎಂದು ಗೊತ್ತಿದ್ದರೂ ಆತ ಪ್ರಾಮಾಣಿಕವಾಗಿ ಪ್ರೀತಿಸುತ್ತಾನೆ.  ನಾನು ಯಾಕೆ ಆಟವಾಡಿಸುತ್ತೇನೆ ಎಂದು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಿವಿಲ್ ಆಗುತ್ತದೆ.  ಇತ್ತೀಚೆಗಷ್ಟೆ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿದ್ದೇವೆ.  ಹಾಡುಗಳನ್ನು ಎಲ್ಲರೂ ಮೆಚ್ಚಕೊಂಡಿದ್ದಾರೆ ಎಂದು ಹೇಳಿದರು. ನಾಯಕ ಜೈ ಮಾತನಾಡಿ ನಾನು ಈ ಚಿತ್ರದಲ್ಲಿ ಒಬ್ಬ ಇನೋಸೆಂಟ್ ಹುಡುಗನಾಗಿ ಅಭಿನಯಿಸಿದ್ದೇನೆ.  ತಿಂಗಳ ಕಾಲ ರೀಹರ್ಸಲ್ ಮಾಡಿಕೊಂಡು ಶೂಟ್ ಮಾಡಿದೆವು.  ತನ್ನ ಹುಡುಗಿಯನ್ನು ತುಂಬ ಇಷ್ಟ ಪಡುತ್ತಿದ್ದರೂ ಹೇಳಿಕೊಳ್ಳಲಾಗುವ ಒದ್ದಾಡುವ ಅವಳಿಗೆ ಹೇಳಿದರೆ ಅವಳು ಎಲ್ಲಿ ಬಿಟ್ಟು ಹೋಗುತ್ತಾಳೋ ಎಂದು ಭಯ ಇರುತ್ತದೆ.  ಕ್ಯೂಟ್ ಲವ್‌ಸ್ಟೋರಿಯಲ್ಲಿ ಒಂದು ಒಳ್ಳೆಯ ಮೆಸೇಜ್ ಕೂಡ ಇದೆ ಎಂದು ಹೇಳಿದರು.  ಸಂಗೀತ ನಿರ್ದೇಶಕ ವಿಕ್ರಂ ವರ್ಮನ್, ಛಾಯಾಗ್ರಹಕ ಹರೀಶ್ ಸೊಂಡೆಕೊಪ್ಪ ತಮ್ಮ ತಮ್ಮ ಕೆಲಸಗಳ ಬಗ್ಗೆ ಹೇಳಿಕೊಂಡರು.
CG ARUN

ಒರಿಜಿನಲ್ ‘ಒಡೆಯ’ನ ಡೈರೆಕ್ಟರ್!

Previous article

ಹಿಡ್ಕೊ ಹಿಡ್ಕೊ ಹಿಡ್ಕೊ ವಸಿ ತಡ್ಕೊ!

Next article

You may also like

Comments

Leave a reply

Your email address will not be published. Required fields are marked *