ಕಥೆ ಸ್ಟ್ರಾಂಗಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವುದಕ್ಕೆ ಇತ್ತೀಚಿಗೆ ರಿಲೀಸ್ ಆಗಿ 125 ದಿನ ಪೂರೈಸಿರುವ ಬೆಲ್ ಬಾಟಂ ಉತ್ತಮ ನಿದರ್ಶನ. 2019ರ ಈ ವರ್ಷದ ಬಿಗ್ ಹಿಟ್ ಚಿತ್ರಗಳ ಪೈಕಿ ಬೆಲ್ ಬಾಟಂ ಟಾಪ್ 5 ಸ್ಥಾನದಲ್ಲಿ ನಿಂತಿದೆ. ಫೆಬ್ರವರಿ 15ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಚೊಚ್ಚಲಬಾರಿಗೆ ನಾಯಕನಾಗಿದ್ದ ರಿಷಬ್ ಶೆಟ್ಟಿಯನ್ನು ಭರವಸೆಯ ನಾಯಕನಾಗಿ ಚಂದನವನಕ್ಕೆ ಕೊಟ್ಟದ್ದು ಸಿನಿಮಾದ ಹೆಚ್ಚುಗಾರಿಕೆ.
ಕಳೆದ ವಾರ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿದ್ದರೂ, ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾದ ಪ್ರದರ್ಶನವಾಗುತ್ತಲೇ ಇದೆ. ಕಳೆದ ವರ್ಷ ‘ಟಗರು’ ಸಿನಿಮಾ 125 ದಿನ ಓಡಿತ್ತು. ಅದರ ಬಳಿಕ ಈ ವರ್ಷ ‘ಬೆಲ್ ಬಾಟಂ’ ಆ ಸಾಧನೆ ಮಾಡಿದೆ. ಈ ವರ್ಷ 125 ದಿನ ಪೂರೈಸಿದ ಮೊದಲ ಸಿನಿಮಾ ಇದಾಗಿದೆ.
No Comment! Be the first one.