ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯನ್’. ಜೈ ಭೀಮ್ ಖ್ಯಾತಿಯ ಟಿ.ಜೆ.ಜ್ಞಾನವೇಲ್ ನಿರ್ದೇಶನದಲ್ಲಿರುವ ತಯಾರಾಗುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 10ಕ್ಕೆ ಬೆಳ್ಳಿಪರದೆಗೆ ವೆಟ್ಟೈಯನ್ ಸಿನಿಮಾ ಲಗ್ಗೆ ಇಡುತ್ತಿದೆ. ವೆಟ್ಟೈಯನ್ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿ 170ನೇ ಚಿತ್ರ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವೆಟ್ಟೈಯನ್’ ಸಿನಿಮಾದಲ್ಲಿ ಬಹುತಾರಾಗಣವಿದೆ. ಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ರಾಣಾ […]
ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ “ಫಾರೆಸ್ಟ್” ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿರುವ ನಿರ್ಮಾಪಕರು ಕ್ವಾಲಿಟಿ ವಿಷಯದಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ, ಬಜೆಟ್ ಬಗ್ಗೆ ಯೋಚಿಸದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ, ಡಬಲ್ ಇಂಜಿನ್ , ಬ್ರಹ್ಮಚಾರಿಯಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ […]
ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಜರ್ಮನಿ ಪ್ರಸ್ತುತ ಪಡಿಸಿರುವ, ರಾಘವ ರೆಡ್ಡಿ ನಿರ್ದೇಶನದ, ವಿಶಾಲ್ ನೈದೃವ್ ಸಂಗೀತ ನಿರ್ದೇಶನದ ಹಾಗೂ ರಕ್ಕಿ ಸುರೇಶ್ ಅಭಿನಯದ “ಹನಿ ಹನಿ” ಮ್ಯೂಸಿಕಲ್ ವಿಡಿಯೋ ಆಲ್ಬಂ ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅನಾವರಣವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಗೌರವ ಕಾರ್ಯದರ್ಶಿ ಭಾ.ಮ.ಗಿರೀಶ್ ಹಾಗೂ ಹಿರಿಯ ನಿರ್ಮಾಪಕರಾದ ಎಸ್ ಎ ಚಿನ್ನೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಹಾಡಿನಲ್ಲಿ ಅಭಿನಯಿಸಿರುವ ರಕ್ಕಿ ಸುರೇಶ್ ನಮ್ಮ ಕುಟುಂಬಕ್ಕೆ ಆಪ್ತರು. […]
ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೀಗ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಟೆಯಿತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ನಿನ್ನೆ ನಿನ್ನೆ ನೆಚ್ಚಿಕೊಂಡೆ ಎಂಬ ಹಾಡನ್ನು ಅನಾವರಣ ಮಾಡಿದರು. […]
“ಟೇಕ್ವಾಂಡೋ ಸಮರ ಕಲೆ ಕುರಿತ ಚಿತ್ರ ಟೇಕ್ವಾಂಡೋ ಗರ್ಲ್ ಚಿತ್ರದ ಟ್ರೈಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು ಬಿಡುಗಡೆ ಗೊಳಿಸಿದರು” ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಕುಲಕ್ಕೆ ಕಂಟಕಪ್ರಾಯವಾದ ಕೃತ್ಯಗಳು ನಡೆಯುತ್ತಲೇ ಬಂದಿದೆ. ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಅತೀ ಮುಖ್ಯವಾದ ವಿಚಾರ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಒಂದು ಸಿನಿಮಾ ತಯಾರಾಗಿದೆ. ಚಿತ್ರದ ಹೆಸರು “ಟೇಕ್ವಾಂಡೋ ಗರ್ಲ್”. ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ […]
ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ . ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಭೈರತಿ ರಣಗಲ್” ಚಿತ್ರದ ಶೀರ್ಷಿಕೆ ಗೀತೆ(ಟೈಟಲ್ ಸಾಂಗ್) ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕಿನ್ನಾಳ್ ರಾಜ್ ಅವರು ಬರೆದಿರುವ “ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು” ಎಂಬ ಭೈರತಿ ರಣಗಲ್ ಸಿನಿಮಾದ ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ […]
ತೆಲುಗು ಚಿತ್ರರಂಗದ ಸೂಪರ್ ಹಿಟ್ ಮಗಧೀರ ಸಿನಿಮಾದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಅಹೋ ವಿಕ್ರಮಾರ್ಕ’ ಸಿನಿಮಾದಲ್ಲಿ ದೇವ್ ಗಿಲ್ ನಾಯಕನಟನಾಗಿ ನಟಿಸುತ್ತಿದ್ದು, ಆಗಸ್ಟ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಕನ್ನಡದಲ್ಲಿಯೂ ರಿಲೀಸ್ ಆಗಲಿರುವ ಅಹೋ ವಿಕ್ರಮಾರ್ಕ ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ನಗರ ಊರ್ವಶಿ ಚಿತ್ರ ಮಂದಿರದಲ್ಲಿ ಖ್ಯಾತ […]
ಬಹು ನಿರೀಕ್ಷಿತ ಹಾಸ್ಯ ಚಿತ್ರ “ಪೌಡರ್” ಇದೀಗ ತನ್ನ ಟ್ರೇಲರ್ ಬಿಡುಗಡೆ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಚಿತ್ರ ತಂಡ ಇಂದು ಒರಾಯನ್ ಮಾಲ್ ನ ಪಿ.ವಿ.ಆರ್ ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಲ್ಲಿ ಬಿಡುಗಡೆ ಮಾಡಿದ ಟ್ರೇಲರ್ ತುಣುಕು ತನ್ನ ಅದ್ಭುತವಾದ ಕಾಮಿಡಿ ಟೈಮಿಂಗ್, ವಿಭಿನ್ನ ಕಥಾವಸ್ತು ಮೂಲಕ ಸಿನಿ ಪ್ರಿಯರ ಗಮನ ಸೆಳೆದಿದೆ. ಇಬ್ಬರು ಯುವಕರು ಒಂದು ನಿಗೂಢವಾದ “ಪೌಡರ್” ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು […]
ಡಿ.ಪಿಕ್ಚರ್ಸ್ ಲಾಂಛನದಲ್ಲಿ ದಯಾಳ್ ಪದ್ಮನಾಭನ್ ನಿರ್ಮಿಸಿರುವ, ರವಿಕಿರಣ್ ಹಾಗೂ ಚೇತನ್ S.P ಅವರ ಜಂಟಿ ನಿರ್ದೇಶನದ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಕಪಟಿ” ಚಿತ್ರದ ಟೀಸರ್ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ನಟ ಡಾರ್ಲಿಂಗ್ ಕೃಷ್ಣ ಟೀಸರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಇದು ನಮ್ಮ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನ್ನೆರಡನೇ ಚಿತ್ರ. ಹನ್ನೆರಡು ಚಿತ್ರಗಳಲ್ಲಿ ಹತ್ತು […]
ವಿಹಾನ್, ಅಂಕಿತಾ ಅಮರ್ ಪ್ರಮುಖ ಭೂಮಿಕೆಯಲ್ಲಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಂದ್ರಜಿತ್ ಬೆಳಿಯಪ್ಪ ನಿರ್ದೇಶನವಿರುವ ಈ ಸಿನಿಮಾದ ‘ಹೇಳು ಗೆಳತಿ’ ಎಂಬ ಮೆಲೋಡಿ ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಹಿಂದೆ ಹರಿಬಿಟ್ಟಿದ್ದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ‘ಹೇಳು ಗೆಳತಿ’ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದು ತಂಡದ ಅನಿಸಿಕೆ. ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ […]