ಹೆಸರಿಡದ ಚಿತ್ರ ’ಪ್ರೊಡಕ್ಷನ್ ನಂ.1’ ಸಿನಿಮಾದ ಮುಹೂರ್ತ ಸಮಾರಂಭವು ವಿಜಯ ದಶಮಿ ದಿನದಂದು ನಂದಿನಿ ಲೇಔಟ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ’ಪುಟಾಣಿಸಫಾರಿ’ ’ವರ್ಣಮಯ’ ’ಮಠ’ ’ನೈಟ್ಕರ್ಫ್ಯೂ’ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ’ವಾಸಂತಿ ನಲಿದಾಗ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರವೆಂಶಿ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ಮೂಲದ ಆರ್.ಕೃಷ್ಣಮೂರ್ತಿ ಎಂ.ಆರ್.ಕೆ. ಫಿಲಿಂಸ್ ಮುಖಾಂತರ ನಿರ್ಮಾಣ […]
ಕ್ಯೂಟ್ ಹುಡುಗ ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಬಿಡುಗಡೆಗೆ ಕೆಲವೇ ದಿನ ಬಾಕಿ ಉಳಿದಿದೆ. ಝೈದ್ ಖಾನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಬಿಡುಗಡೆಗೆ ಅದ್ದೂರಿ ತಯಾರಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಬನಾರಸ್ ಚಿತ್ರತಂಡ ಖುಷಿಯ ಸಂಗತಿಯೊಂದನ್ನು ಹಂಚಿಕೊಂಡಿದೆ. ಕೇರಳದಲ್ಲಿ ಹೆಸರಾಂತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್, ಬನಾರಸ್ನ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಕೇರಳದಲ್ಲಿ ದೊಡ್ಡ ಹೆಸರು ಮಾಡಿರುವಈ ಸಂಸ್ಥೆ ಹಲವಾರು ಹಿಟ್ ಸಿನಿಮಾಗಳ ಹಕ್ಕನ್ನು ಪಡೆದಿದೆ. ಈ ಕಾರಣದಿಂದ ಈಗ ಕೇರಳದ ತುಂಬಾ ಬನಾರಸ್ ಕುರಿತು […]
ಈ ಹಿಂದೆ ಪಾರು ಐ ಲವ್ ಯೂ ಸೇರಿದಂತೆ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಉದಯೋನ್ಮುಖ ಕಲಾವಿದ ರಂಜನ್ ಹಾಸನ್. ನಟನಾಗಿ ಮಾತ್ರವಲ್ಲದೆ, ನಿರ್ಮಾಣ ಸೇರಿದಂತೆ ಇತರೆ ವಲಯಗಳಲ್ಲೂ ಕಾರ್ಯ ನಿರ್ವಹಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಂಜನ್ ನಟನೆಯ ಸಿನಿಮಾವೊಂದು ಈ ವಾರ ತೆರೆಗೆ ಬರುತ್ತಿದೆ. ಅದು ಚೆಕೆ ಮೇಟ್! ಜಗಜ್ಯೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಂಜನ್ ಹಾಸನ್ ಅವರ ನಿರ್ಮಾಣದ ದಿ ಚೆಕ್ಮೇಟ್ ಚಿತ್ರ ಈ ಶುಕ್ರವಾರ (ಅ.7) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸ್ನೇಹ, ಪ್ರೀತಿ, ಬದುಕು ಈ […]
ಸ್ನೇಹಿತನಿಂದ ಸ್ನೇಹಿತನಿಗಾಗಿ ನಿರ್ಮಾಣವಾಗಿರುವ ಈ ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆ. ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಾಯಕ, ನಾಯಕಿಯಾಗಿ ನಟಿಸಿರುವ “ಚಾಂಪಿಯನ್” ಚಿತ್ರದ ಟ್ರೇಲರ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಂದ ಇತ್ತೀಚಿಗೆ ಬಿಡುಗಡೆಯಾಯಿತು. ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರುತ್ತಿದೆ. ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ. ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. […]
ಇಪ್ಪತ್ತೈದು ವರ್ಷಗಳ ಹಿಂದೆಅಪಾರ ಜನಪ್ರಿಯತೆ ಪಡೆದ ಧಾರಾವಾಹಿ ‘ಮಾಯಾಮೃಗ’.ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” ಎಂಬ ಹೆಸರಿನಿಂದ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿತ್ತು. ಸಿನಿಮಾಗಳಿಗೆ ಸೀಕ್ವೆಲ್ ಬರುವುದು ಸಾಮಾನ್ಯ. ಹಿರಿತೆರೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್ಗಳು ಬರುವುದು ಬಹಳ ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ‘ಮಾಯಾಮೃಗ’ ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ. ಇಷ್ಟೊಂದು ವರ್ಷಗಳ […]