kannada-film-history_2023_2024_cinibu_arunkumar_g_film_journalist_aLL_HEROS_SANDALWOOD_Part_2
KATERA_UPADHYAKSHA_DARSHAN_CHIKKANNA_FILM_JOURNALIST_ARUNKUMAR_G
Soori_darshan_arunkumar_filmjournalist_cinibuzz_shivanna
Rachitaram_kannada_hero_notreachable_bengaluru_bangalore_cinibuzz_election
ಅನಂತ್ ಕನ್ನಡ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅತ್ಯುತ್ಕೃಷ್ಟ ಕಲಾವಿದ. ಅವರಿಗೆ ಇನ್ನೂ ಪದ್ಮಶ್ರೀ ಬಂದಿಲ್ಲ ಅನ್ನೋದೇ ನಂಬಲಾಗದ ವಿಚಾರ. ಅನಂತ್ ನಾಗ್ ಕನ್ನಡ ಮಾತ್ರವಲ್ಲ ವಿಶ್ವದ ಶ್ರೇಷ್ಠ ನಟರ ಲಿಸ್ಟಗೆ ಸೇರುವ ಮಹಾನ್ ನಟ. ಪಾತ್ರ ಯಾವುದೇ ಆದರೂ ಅದರ ಆಳಕ್ಕಿಳಿದು ನಟಿಸುವ ಕಲಾವಿದ. ಕನ್ನಡದ ಮಟ್ಟಿಗೆ ʻಮೆಥೆಡ್ ಆಕ್ಟಿಂಗ್ʼ ಅನ್ನು ಮೈಗೂಡಿಸಿಕೊಂಡ ಅಪರೂಪ ಆಕ್ಟರ್. ಎಷ್ಟೋ ಪಾತ್ರಗಳನ್ನು ನಿರ್ದೇಶಕರು ಅನಂತ್ ನಾಗ್ ಅರನ್ನೇ ಗಮನದಲ್ಲಿಟ್ಟುಕೊಂಡು ಬರೆದುಕೊಂಡಿರುತ್ತಾರೆ. ಆದರೆ, ಆ ಎಲ್ಲ ಪಾತ್ರಗಳನ್ನೂ ಮಾಡಲು […]
ದರ್ಶನ್ ಸಾಮಾನ್ಯವಾಗಿ ಬೇರೆಯವರ ಚಿತ್ರಗಳ ಬಗ್ಗೆ ಮಾತಾಡೋದಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಈಗ ಅವರು ‘ಬನಾರಸ್’ ಚಿತ್ರವನ್ನು ಪ್ರಶಂಸಿಸದ್ದಾರೆ. ಕಾರಣ, ಚಿತ್ರವನ್ನು ಅವರು ನೋಡಿದ್ದು, ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾನು ಸಿನಿಮಾ ನೋಡಿದ್ದೇನೆ. ಈ ಹಿಂದೆ ಜೈದ್ಗೆ ಚಿತ್ರ ನೋಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಅವನೊಂಥರಾ ಬೆನ್ನಿಗೆ ಬಿದ್ದ ಬೇತಾಳದ ತರಹ. ಅದೊಂದು ದಿನ ರಾತ್ರಿಯೆಲ್ಲಾ ಕ್ರಾಂತಿ ಚಿತ್ರದ ಫೈಟಿಂಗ್ ಚಿತ್ರೀಕರಣ ಮುಗಿಸಿ ಬೆಳಿಗ್ಗೆ ಮನೆಗೆ ಬಂದೆ. ವರ್ಕೌಟ್ ಮಾಡಿ, […]
ವಿಜಯಪ್ರಸಾದ್ ಚಿತ್ರಗಳೇ ಹಾಗೆ. ಅವರ ಚಿತ್ರಗಳಲ್ಲಿ ಅದ್ಧೂರಿತನ ಇರುವುದಿಲ್ಲ. ಐಷಾರಾಮಿ ಜೀವನವಿರುವುದಿಲ್ಲ. ದೊಡ್ಡದೊಡ್ಡ ಮನುಷ್ಯರು, ಮನೆಗಳು, ಆಡಂಬರ, ಫಾರಿನ್ ಶೂಟಿಂಗ್ ಯಾವುದೂ ಇರುವುದಿಲ್ಲ. ಅವರು ತಮ್ಮ ಪ್ರತಿ ಚಿತ್ರಕ್ಕೂ ಆಯ್ಕೆ ಮಾಡಿಕೊಳ್ಳುವುದು ಮೈಸೂರನ್ನು. ಆ ಮೈಸೂರಿನಲ್ಲೇ ಈ ಜಗತ್ತಿನ ಬಡವರ, ನೊಂದವರ, ತಿರಸ್ಕೃತರ, ಅನಾಥರ ನೋವಿನ ಕಥೆಯನ್ನು ಹೇಳುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಅವರಿಗೆ ಒಂದು ವಿಷಯ ಚೆನ್ನಾಗಿ ಸ್ಪಷ್ಟವಿದೆ. ಬರೀ ಗೋಳಿನ ಕಥೆಯನ್ನು ಹೇಳಿದರೆ, ಜನ ಬರುವುದಿಲ್ಲ ಎಂದು. ಅದಕ್ಕಾಗಿ ಅವರು ತಮ್ಮದೇ ಶೈಲಿಯ ಚೇಷ್ಟೆಯನ್ನೂ […]
ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ದೂರು ದಾಖಲು ಮಠ, ಎದ್ದೇಳು ಮಂಜುನಾಥ ಮತ್ತಿತರ ಸಿನಿಮಾಗಳ ನಿರ್ದೇಶಕ, ನಟ ಗುರುಪ್ರಸಾದನ ವಂಚನಾ ಪುರಾಣ ಬಗೆದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತಿದೆ. ತಮ್ಮ ಜೊತೆಯಲ್ಲಿದ್ದ ಸಹಾಯಕ ನಿರ್ದೇಶಕ ಶ್ರೀನಿವಾಸ್ ಎಂಬುವವರಿಗೆ ಗುರು ಮಾಡಿದ ಮಹಾ ಮೋಸದ ವಿಚಾರವನ್ನು ಇತ್ತೀಚೆಗೆ ತಾನೆ ಪ್ರಕಟಿಸಲಾಗಿತ್ತು. ಈಗ ಮತ್ತೊಬ್ಬರು ಗುರು ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟೋಟಲ್ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ಕಂಪ್ಲೇಂಟು ನೀಡಿದ್ದಾರೆ. […]
ಅವನೊಬ್ಬ ರಾಜ. ಸಮೃದ್ಧವಾದ ರಾಜ್ಯ. ಅವನ ಖುಷಿಯೇ ತಮ್ಮ ಖುಷಿ ಅಂತಾ ಭಾವಿಸಿದ ಜನರು. ಎಲ್ಲವೂ ಇದ್ದ ಆ ರಾಜನಿಗೆ ಕೊರತೆ ಅಂತಾ ಇದ್ದಿದ್ದು ಒಂದೇ. ಅದು ನೆಮ್ಮದಿ. ನಾಲ್ಕಾರು ದೇವಸ್ಥಾನ ತಿರುಗಿ, ಹತ್ತಾರು ದೀಪಸ್ನಾನ ಮಾಡಿದ. ದೇವರಿಗೆ ತುಲಾಭಾರ, ಪಿತೃಗಳಿಗೆ ಪಿಂಡ ಇಟ್ಟರೂ ರಾಜನ ಕಣ್ಣಿಗೆ ನೆಮ್ಮದಿಯ ನಿದ್ರೆ, ಮನಸ್ಸಿಗೆ ಶಾಂತಿ ಮಾತ್ರ ಸಿಗೋಗಲೇಇಲ್ಲ. ನೆಮ್ಮದಿಯನ್ನು ಅರಸಿ ಹೋದ ರಾಜನಿಗೆ ಅದೊಂದು ದಿನ ಭೂತಾರಾಧಕರು ಸಿಗುತ್ತಾರೆ. ನನ್ನ ಕೂಗು ಎಲ್ಲಿಯವರೆಗೆ ಕೇಳಿಸುತ್ತದೋ ಅಲ್ಲಿಯವರೆಗೆ ಜಾಗವನ್ನು ಕಾಡಿನ […]
ಭಾರತದಂತಾ ದೇಶದಲ್ಲಿ ಸದ್ಯ ಅತ್ಯಂತ ಕೆಟ್ಟ ವಾತಾವರಣವಿದೆ. ಈ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಬರ್ತಿಂದ ಹಿಡಿದು ಡೆತ್ತಿನ ತನಕ ಜಾತಿಯೇ ಎಲ್ಲವನ್ನೂ ನಿಭಾಯಿಸುತ್ತದೆ. ಕೋಮುದ್ವೇಷದ ಖಾಯಿಲೆ ದೇಶವನ್ನು ಕೊರೋನಾಗಿಂತಾ ಹೆಚ್ಚು ಹೈರಾಣು ಮಾಡಿದೆ. ಸಿನಿಮಾಗಳಲ್ಲಂತೂ ಜಾತಿ, ಧರ್ಮಗಳ ಬಗ್ಗೆ ಮಾತಾಡುವುದೇ ಮಹಾಪರಾಧ ಅಂತಾ ಅಂದುಕೊಂಡವರೂ ಇದ್ದಾರೆ. ಇಂಥವರ ನಡುವೆ ಕೋಮು ವಿಷ ಬೀಜ ಬಿತ್ತುವವರನ್ನು ನೇರಾನೇರ ಅಣಕ ಮಾಡುವುದೆಂದರೆ ಸುಮ್ಮನೇ ಮಾತಲ್ಲ. ನಿರ್ದೇಶಕ ವಿಜಯ ಪ್ರಸಾದ್ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಚೇಷ್ಟೆ, ಹಾಸ್ಯ, ಪೋಲಿತನಗಳನ್ನೆಲ್ಲಾ ಮಾತುಗಳಲ್ಲಿ ಮಿಕ್ಸ್ ಮಾಡಿ […]