ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತೆಲುಗಿನ ಪ್ರತಿಭಾನ್ವಿತ ನಾಯಕ ಸತ್ಯದೇವ್ ನಟನೆಯ ಬಹುನಿರೀಕ್ಷಿತ ಮಲ್ಟಿಸ್ಟಾರ್ ಸಿನಿಮಾ ಜೀಬ್ರಾ. ಫಸ್ಟ್ ಲುಕ್ ಮೂಲಕ ಗಮನಸೆಳೆದಿದ್ದ ಜೀಬ್ರಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ನಲ್ಲಿ ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್, ಡಾಲಿ ಧನಂಜಯ್ ಮತ್ತು ಸತ್ಯ ದೇವ್ ಅವರನ್ನು ಪರಿಚಯಿಸಲಾಗಿದೆ. ಮೋಷನ್ ಪೋಸ್ಟರ್ ನಲ್ಲಿ ಚೆಸ್ ಆಟ, ಕಾಯಿನ್ ಫ್ಲಿಪ್ಪಿಂಗ್, ಕರೆನ್ಸಿ ನೋಟುಗಳು ಮತ್ತು ಫ್ಲೈಓವರ್ ನಿಂದ ಕಾರ್ ಇಳಿಯುವ ದೃಶ್ಯಗಳು […]
ಈಗೆಲ್ಲಾ ಒಂದು ಅಥವಾ ಎರಡು ಹಿಟ್ ಚಿತ್ರಗಳನ್ನು ಕೊಡುತ್ತಿದ್ದಂತೇ ತಮಗೆ ತಾವೇ ʻಸ್ಟಾರ್ ಡೈರೆಕ್ಟರ್ʼ ಅಂತಾ ಸ್ವಯಂ ಘೋಷಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ, ಕನ್ನಡ ಚಿತ್ರರಂಗದ ನಿಜವಾದ ಸ್ಟಾರ್ ಡೈರೆಕ್ಟರ್ಗಳು ಕೆಲವೇ ಮಂದಿ. ಅಂಥವರ ನಡುವೆ ಮುಂಚೂಣಿಯಲ್ಲಿದ್ದವರು ಕೆ.ವಿ. ರಾಜು. ಒಂದು ಕಾಲದಲ್ಲಿ ಸೂಪರ್ ಸ್ಟಾರ್ಗಳು ಕೆ.ವಿ. ರಾಜು ಅವರಿಗಾಗಿ ಕಾದು ಕೂರುತ್ತಿದ್ದರು. ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಿರ್ದೇಶಕರಲ್ಲೊಬ್ಬರಾಗಿದ್ದವರು ಕೆ.ವಿ. ರಾಜು. ಇವರ ಬಳಿ ಸಹಾಯಕ ನಿರ್ದೇಶಕರಾಗಿದ್ದುಕೊಂಡು, ಬರವಣಿಗೆ ನಿರ್ದೇಶನ ಕಲಿತವರು ಸಾಕಷ್ಟು […]
ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ‘ಫುಲ್ ಮೀಲ್ಸ್’ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಬರ್ತ್ ಡೇ ಫೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ತ್ರಿಕೋನ ಪ್ರೆಮಕಥೆ ಹೊಂದಿರುವ ಸಿನೆಮಾದಲ್ಲಿ ನಾಯಕ ಲಿಖಿತ್ ಶೆಟ್ಟಿ ನಾಯಕಿಯರಾದ ತೇಜಸ್ವಿನಿ ಶರ್ಮ ಮತ್ತು ಖುಷಿ ರವಿಯೊಟ್ಟಿಗಿರುವ ವಿಭಿನ್ನ ಭಂಗಿಯ, ಭಾವದ ಪೋಸ್ಟರ್ ನೋಡುಗರ ಗಮನ ಸೆಳೆದಿದ್ದು, ಸಿನೆಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ತೇಜಸ್ವಿನಿ ಶರ್ಮ […]
ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾದ ಪಟ್ಟಿಯಲ್ಲಿ ಈಗ ನಿಮ್ದೆ ಕಥೆ ಎನ್ನುವ ಚಿತ್ರವು ಸೇರಿದೆ, Love Moktail ಖ್ಯಾತಿಯ ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಜೊತೆಗೆ ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದಾರೆ. ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ಜಂಟಿಯಾಗಿ ನಿಮ್ದೆ ಕಥೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಸಿ […]
ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವ ಉಮರ್ ಷರೀಫ್ ಅವರೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಆನ್ ಲೈನ್ ಗೇಮ್ ಈಗಿನ ಯುವ ಜನತೆಯನ್ನು ಹೇಗೆ ಹಾಳು ಮಾಡುತ್ತಿದೆ. ಅದರಿಂದ ಏನೆಲ್ಲ ಅನಾಹುತಗಳಾಗುತ್ತಿವೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು “ರಮ್ಮಿ ಆಟ” ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರಮ್ಮಿ ಗೇಮ್ ನಂಥ ಆಟಗಳ ಚಟಕ್ಕೆ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಜೀವನವನ್ನೇ ಸರ್ವನಾಶ ಮಾಡಿಕೊಂಡಿದ್ದಾರೆ. ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆನ್ ಲೈನ್ […]
ಭರತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರವಿಚಂದ್ರ ಹಾಗೂ ಭೀಮರಾಜ್ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ನೂತನ ಚಿತ್ರ ಭಲೆ ಹುಡುಗ. ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಹುಡುಗನೊಬ್ಬನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರದುರ್ಗದ ಎಂ.ನಿಂಗರಾಜು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬುದ್ದಿವಂತ ಮಕ್ಕಳು ಹಾಗೂ ಹಳ್ಳಿಯ ಜನರ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಭಲೆ ಹುಡುಗ ಚಿತ್ರದಲ್ಲಿ ನಿರ್ದೇಶಕ ನಿಂಗರಾಜು ಅವರ ಪುತ್ರ ಶರತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬರುವ ಅಕ್ಟೋಬರ್ […]
ಯೂ ಟರ್ನ್-2, ರಾಮು ಅಂಡ್ ರಾಮು ಹಾಗೂ ಕರಿಮಣಿ ಮಾಲೀಕ ಚಿತ್ರಗಳ ನಂತರ ನಿರ್ದೇಶಕ ಚಂದ್ರು ಓಬಯ್ಯ ಇದೀಗ ನಾಲ್ಕನೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅದುವೇ “ವೈಭೋಗ”. ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ‘ಯೌವ್ವನದಲ್ಲಿ ಹುಟ್ಟೋ ಪ್ರೀತಿಗೋಸ್ಕರ ಹೆತ್ತವರನ್ನು ಮರೀಬೇಡ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರವನ್ನು ಡಾ.ಚೇತನ್ ನಿಂಗೇಗೌಡ ಅವರು ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ, ವೈಭೋಗ, ಒಂದು ಕಮರ್ಷಿಯಲ್ ಸಿನಿಮಾ, ಯೌವ್ವನಲ್ಲಿ ಹುಟ್ಟುವ ಪ್ರೀತಿಗೋಸ್ಕರ ಹೆತ್ತವರ ಮರಿಬೇಡ, ಪ್ರೀತಿಯ […]
ದೂರದರ್ಶನ ಸಿನಿಮಾ ಮೂಲಕ ಗಟ್ಟಿ ಕಥೆ ಹೇಳಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಎರಡನೇ ಪ್ರಯತ್ನಗೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತೊಂದು ಫ್ರೆಶ್ ಕಥಾಹಂದರವನ್ನು ಪ್ರೇಕ್ಷಕರಿಗೆ ಹರವಿಡಲು ಹೊರಟಿದ್ದಾರೆ. ಅದರ ಮೊದಲ ಭಾಗವೆಂಬಂತೆ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರಿಬ್ಬರು ಸುಕೇಶ್ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ. ಸುಕೇಶ್ ಶೆಟ್ಟಿ ‘ಪೀಟರ್’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪೀಟರ್ ಟೈಟಲ್ ನ್ನು ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ […]
ವಿಕ್ಕಿ ವರುಣ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸರಿಸುಮಾರು ಹದಿನೈದು ವರ್ಷಗಳೇ ಕಳೆದಿವೆ. ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಮೂಲಕ ಹೀರೋ ಆಗಿ ಲಾಂಚ್ ಆದವರು. ಇದೇ ಸೆಪ್ಟೆಂಬರ್ ತಿಂಗಳಿಗೆ ಕೆಂಡಸಂಪಿಗೆ ತೆರೆಗೆ ಬಂದು ಒಂಭತ್ತು ವರ್ಷಗಳಾಗಿವೆ. ಈ ನಡುವೆ ಕಾಲೇಜ್ ಕುಮಾರ್ ಸಿನಿಮಾವನ್ನು ಹೊರತುಪಡಿಸಿ ವಿಕ್ಕಿ ನಟನೆಯ ಬೇರೆ ಯಾವ ಚಿತ್ರಗಳೂ ತೆರೆಗೆ ಬಂದಿಲ್ಲ. ಹಾಗೆ ನೋಡಿದರೆ, ವಿಕ್ಕಿ ತುಂಬಾನೇ ಲಕ್ಕಿ. ಮೊದಲ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಸೂರಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಂತರದ […]
ಚೌಕಿದಾರ್ ಸಿನಿಮಾ ತನ್ನ ಕ್ಯಾಚಿ ಟೈಟಲ್ ನಿಂದಲೇ ಗಾಂಧಿನಗರದ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚೌಕಿದಾರ್ ಸಿನಿಮಾವನ್ನು […]