ಪ್ರಿಯಾಂಕ ಉಪೇಂದ್ರ ಮತ್ತು ಮಗಳು ಐಶ್ವರ್ಯಾ ಉಪೇಂದ್ರ ನಟನೆಯ ಚೊಚ್ಚಲ ಸಿನಿಮಾ ದೇವಕಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಲೇ ಇದೆ. ಇತ್ತೀಚಿಗೆ ರಿಲೀಸ್ ಆದ ದೇವಕಿಯ ಟ್ರೇಲರ್ ನೋಡುಗರಲ್ಲಿ ಮತ್ತಷ್ಟು ಕೌತುಕತೆಯನ್ನು ಉಂಟುಮಾಡಿದ್ದು, ಮಮ್ಮಿ ನಂತರ ಲೋಹಿತ್ ಮತ್ತೇನನ್ನೋ ಹೇಳಹೊರಟಿದ್ದಾರೆಂಬುದು ಕನ್ ಫರ್ಮ್ ಆಗಿದೆ. ದೇವಕಿ ಕ್ಲೈಮ್ಯಾಕ್ಸಿಗೆ ಉಪೇಂದ್ರ ವಾಯ್ಸ್ ಕೊಟ್ಟದ್ದು ಒಂದು ಸುದ್ದಿಯಾದರೆ, ಕಬಾಲಿ, ವಿಸಾರಣೈ, ವಡಾ ಚೆನೈ, ವಿಶ್ವಾಸಂ, ಸಾಹೋ ಚಿತ್ರದಲ್ಲಿ ಅಟ್ಮಾಸ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ದೇವಕಿಗೂ ಸಾಥ್ ನೀಡಿರುವುದು ಮತ್ತೊಂದು ಸುದ್ದಿ. ಹೌದು ದೇವಕಿ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಇಂಜಿನಿಯರ್ ಉದಯ್ ಕುಮಾರ್ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾರೆ.
ದೇವಕಿಯಲ್ಲಿ ಅಟ್ಮಾಸ್ ಸೌಂಡು ಅದ್ಬುತವಾಗಿ ಮೂಡಿಬಂದಿದ್ದು, ರಿಯಲಿಸ್ಟಿಕ್ ಆಗಿಯೂ ಮೂಡಿಬಂದಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಎಂಜಾಯ್ ಮಾಡುತ್ತಾರೆ. ಅಲ್ಲದೇ ದೇವಕಿ ವಿಭಿನ್ನವಾದ ಫೀಲ್ ಸಹ ನೀಡುತ್ತದೆ ಎನ್ನುತ್ತಾರೆ ನಿರ್ದೇಶಕ ಲೋಹಿತ್. ಕನ್ನಡ ಸೇರಿದಂತೆ ತೆಲುಗು, ತಮಿಳು, ಬಂಗಾಲಿ ಭಾಷೆಯಲ್ಲಿ ದೇವಕಿ ರಿಲೀಸ್ ಆಗಲಿದ್ದು, ಪೊಲೀಸ್ ಪಾತ್ರಧಾರಿಯಾಗಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ದೇವಕಿಯ ಶೇ. 85% ಭಾಗ ಕೋಲ್ಕತ್ತಾದಲ್ಲಿಯೇ ಚಿತ್ರೀಕರಣಗೊಂಡಿದ್ದು, ಈಗಾಗಲೇ ಸಿನಿಮಾದ ಮೇಕಿಂಗ್ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾವುದೇ ಆರ್ಟಿಫಿಷಿಯಲ್ ಲೈಟುಗಳ ಬಳಕೆಯನ್ನು ಮಾಡದೇ ನ್ಯಾಚುರಲ್ ಲೈಟಿನ ಮೊರೆ ಹೋಗಿರುವ ಲೋಹಿತ್ ನಗರದ ಸ್ಟ್ರೀಟ್ ಲೈಟ್ ಗಳ ಸಹಾಯದಿಂದಲೇ ದೇವಕಿಯನ್ನು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಆ ಎಲ್ಲ ಪ್ರಯತ್ನಗಳು ದೇವಕಿಯ ತಾಂತ್ರಿಕ ಅಂಶಗಳನ್ನು ಫೋಕಸ್ ಮಾಡುವಂತಿದೆ. ಜುಲೈ 5ರಂದು ದೇವಕಿ ರಿಲೀಸ್ ಆಗಲಿದೆ.
No Comment! Be the first one.