ಈಗ ಖ್ಯಾತಿಯ ನಾನಿ ಸದ್ಯ ವಿಕ್ರಮ್ ಕೆ ಕುಮಾರ್ ಅವರೊಂದಿಗೆ ಗ್ಯಾಂಗ್ ಲೀಡರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಚಿತ್ರದ ಕುರಿತು ಮತ್ತಿನ್ನಾವ ವಿಚಾರಗಳನ್ನು ರಿವೀಲ್ ಮಾಡದೇ ಸೀಕ್ರೆಟ್ ಕಾಯ್ದುಕೊಂಡಿದೆ. ಆದರೆ ಚಿತ್ರದಲ್ಲಿ ನಾನಿ ಪಾತ್ರವು ಕಾಮಿಡಿ ಹಾಗೂ ಸೆಂಟಿಮೆಂಟಾಗಿ ಸಾಗಲಿದೆಯಂತೆ.
https://twitter.com/NameisNani/status/1150729664660246528
ಇದೇ ಮೊದಲ ಬಾರಿಗೆ ನಾನಿ ವಿಭಿನ್ನ ಗೆಟಪ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಅರುಲ್ ಮೋಹನ್ ನಾಯಕಿಯಾಗಿ ಅಭಿನಯಿಸಲಿದ್ದು, ಉಳಿದಂತೆ ಶರಣ್ಯ, ಲಕ್ಷ್ಮಿ ಮತ್ತು ಅನೀಶ್ ಕುರುವಿಲ್ಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಕಾಲಿವುಡ್ ನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಗ್ಯಾಂಗ್ ಲೀಡರ್ ಗೆ ಸಂಗೀತ ಸಂಯೋಜನೆ ಮಾಡಲಿದ್ಧಾರೆ.
Comments