ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕಲಕಲಾವಲ್ಲಭ ಅಂತಾನೇ ಪ್ರಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದೆ. ಸದ್ಯ ಪ್ರೇಕ್ಷಕರ ಹಾಗೂ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚು ಮಾಡೋ ಹೊಸ ಸಾಂಗ್ ರಿಲೀಸ್ ಆಗಿದೆ….
ಹೆಡ್ ಬುಷ್ ಚಿತ್ರದ ಪಾಯಲ್ ರಜಪೂತ್ ಹೆಜ್ಜೆ ಹಾಕಿರೋ ಹಬೀಬಿ ಸಾಂಗ್ ರಿಲೀಸ್ ಆಗಿದೆ ..ಪಂಜಾಬಿ ಬೆಡಗಿ ಪಾಯಲ್ ಮೈಮಾಟಕ್ಕೆ ಹುಡುಗರು ಪಾಗಲ್ ಆಗೋದು ಗ್ಯಾರೆಂಟಿ…ಟಾಲಿವುಡ್ ನಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಪಾಯಲ್ ಈಗ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದು ಜೈರಾಜ್ ಜೊತೆ ಮಸ್ ಆಗಿ ಹೆಜ್ಜೆ ಹಾಕಿದ್ದಾರೆ…

ಇಷ್ಟು ದಿನ ಅಭಿನಯದ ಮೂಲಕವೇ ಪ್ರೇಕ್ಷಕರನ್ನ ರಂಜಿಸಿ ನಟ ರಾಕ್ಷಸ ಎಂದು ಹೆಸರು ಪಡೆದುಕೊಂಡಿದ್ದ ಧನಂಜಯ್ ಈ ಹಾಡಿನ ಮೂಲಕ ಅಭಿಮಾನಿಗಳಿಂದ ಪದ ರಾಕ್ಷಸ ಎಂದುಕರೆಸಿಕೊಳ್ತಿದ್ದಾರೆ…ಯೆಸ್ ಸದ್ಯ ಬಿಡುಗಡೆ ಆಗಿರೋ ಹೆಡ್ ಬುಷ್ ಸಿನಿಮಾದ ಹಬೀಬಿ ಹಾಡನ್ನ ಖುದ್ದು ಡಾಲಿ ಧನಂಜಯ್ ಅವ್ರೇ ಬರೆದಿರೋದು ಸ್ಪೆಷಲ್..
ಈ ಹಿಂದೆ ಬಡವರಾಸ್ಕಲ್, ಆರ್ಕೆಸ್ಟ್ರಾ ಚಿತ್ರಗಳಿಗೆ ಸಾಹಿತ್ಯ ಬರೆದ ಮೇಲೆ, ಹೆಡ್ ಬುಷ್ ಗಾಗಿ ರಮಿಸೋ, ರಂಜಿಸೋ ಸಾಹಿತ್ಯ ಬರೆದಿದ್ದಾರೆ ಡಾಲಿ ಧನಂಜಯ, ಚರಣ್ ರಾಜ್ ಸಂಗೀತ ಅರೆಬಿಕ್ ಶೈಲಿಯ ಕ್ಯಾಬರೇ ಹಾಡಿಗೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ…ಇನ್ನು ಹೆಡ್ ಬುಸ್ ಸಿನಿಮಾ ಇದೇ ತಿಂಗಳ 21ಕ್ಕೆ ತೆರೆಗೆ ಬರ್ತಿದ್ದು ಡಾಲಿ ಧನಂಜಯ್ ಜಯರಾಜ್ ಆಗಿ ಪ್ರೇಕ್ಷಕರ ಮುಂದೆ ರೆಟ್ರೋ ಸ್ಟೈಲ್ ನಲ್ಲಿ ಎಂಟ್ರಿಕೊಡಲಿದ್ದಾರೆ.
ಅಗ್ನಿ ಶ್ರೀಧರ್ ಕತೆ , ಶೂನ್ಯ ಅವ್ರ ನಿರ್ದೇಶನ ಸಿನಿಮಾಗಿದ್ದು ಸೋಮಣ್ಣ ಟಾಕೀಸ್ ಹಾಗೂ ಡಾಲಿ ಪಿಚ್ಚರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ..ಜೀ ಸ್ಟುಡಿಯೋಸ್ ಸಿನಿಮಾವನ್ನ ವಿತರಣೆ ಮಾಡ್ತಿದೆ..ಸಿನಿಮಾದಲ್ಲಿ ಬಹು ದೊಡ್ಡ ತಾರಾಬಳಗವಿದ್ದು ಲೂಸ್ ಮಾದ ಯೋಗಿ , ನಿರಂಜನ್ ,ರೋಷನ್ ಶ್ರುತಿ ಹರಿಹರನ್ , ಇನ್ನೂ ಅನೇಕರು ಅಭಿನಯಿಸಿದ್ದಾರೆ…
No Comment! Be the first one.