ಸಿನಿಮಾಡೆಸ್ಕ್: ಲಯನ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಲಯನ್ ಆರ್ ರಮೇಶ್ಬಾಬು ಅವರು ನಿರ್ಮಿಸಿರುವ ‘ಜಗತ್ ಕಿಲಾಡಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿನಾಯಕರಾಮ ಕಲಗಾರು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಸಂಗೀತ ನಿರ್ದೇಶನವಿದೆ. ವಿ.ಮನೋಹರ್ ಹಾಗೂ ಉಮೇಶ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ವಿಶ್ವ ಅವರ ಸಂಕಲನ ಜಗತ್ ಕಿಲಾಡಿ‘ ಚಿತ್ರಕ್ಕಿದೆ.
ನಿರಂಜನ್ಕುಮಾರ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಮಿತಾ ಕುಲಾಳ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಮುಂತಾದವರಿದ್ದಾರೆ.
#
No Comment! Be the first one.