– ಇಂಡಸ್ ಹರ್ಬ್ಸ್ ನ ಟಿ ಸಿ ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದ್ದು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೇ ಚಿತ್ರ ತೇರ್ಗಡೆ ಹೊಂದಿದೆ.
ಇದೇ ಅಕ್ಟೋಬರ್ 13 ರ ಶುಕ್ರವಾರ ಜಲಪಾತ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಹೆಸರಾಂತ ನಟ ಪ್ರಮೋದ್ ಶೆಟ್ಟಿ ಅವರು ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು , ವೈಶಂಪಾಯನ ತೀರ ದಿಂದ ಗಮನ ಸೆಳೆದ ಮಲೆನಾಡು ಚಲುವೆ ನಾಗಶ್ರೀ ಈ ಚಿತ್ರದ ನಾಯಕಿ. ಸಾದ್ವಿನಿ ಕೊಪ್ಪ ಸಂಗೀತವಿರುವ 3 ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು ಹೆಸರಾಂತ ಗಾಯಕ ವಿಜಯಪ್ರಕಾಶ್ ಚಿತ್ರದ ಥೀಮ್ ಸಾಂಗ್ ಗೆ ಧ್ವನಿಯಾಗಿದ್ದಾರೆ. ವಿನುಮನಸು ಹಿನ್ನೆಲೆಸಂಗೀತ , ಶಶೀರ ಛಾಯಾಗ್ರಹಣ ಮತ್ತು ಅವಿನಾಶ್ ಸಂಕಲನವನ್ನು ಜಲಪಾತ ಹೊಂದಿದೆ.
ಮಲೆನಾಡು ಭಾಷೆ , ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ವಿಶಿಷ್ಟ ಸಿನಿಮಾ ಜಲಪಾತದಲ್ಲಿ ರವಿಕುಮಾರ್ , ನಟರಾಜ್ , ವಿಶ್ವನಾಥ್ , ರೇಖಾ ಪ್ರೇಮ್ ಕುಮಾರ್ ದತ್ತಾತ್ರಿ , ಚಂದ್ರಶೇಖರ್ , ಎಂ ಆರ್. ಸುರೇಶ್ ಮೊದಲಾದ ಮಲೆನಾಡ ಅಪ್ಪಟ ರಂಗ ಕಲಾವಿದರು ಬಣ್ಣ ಹಚ್ಚಿದ್ದಾರೆ. ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ಫ್ಯಾಮಿಲಿ ಡ್ರಾಮ ದ ಶೈಲಿ ಹೊಂದಿರುವ ಜಲಪಾತ ಮಲೆನಾಡ ಸಿಗ್ನೀಚರ್ ನ್ನು ಹಿರಿತೆರೆಗೆ ತರುವ ಸಾಂಸ್ಕೃತಿಕ ಪ್ರಯತ್ನವಾಗಿದೆ ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದ್ದಾರೆ. ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಈ ಉದ್ದೇಶಿತ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸಿ ಎಂದು ನಿರ್ಮಾಪಕ ರವೀಂದ್ರ ತುಂಬರಮನೆ ವಿನಂತಿಸಿದ್ದಾರೆ.
No Comment! Be the first one.