ತಂದೆ ಸರ್ಕಾರಿ ಉದ್ಯೋಗಿ. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಪಡೆದ ಮಗ ಯಾವುದಾದರೂ ಸರ್ಕಾರಿ ಕೆಲಸವನ್ನಿಡಿದು ಲೈಫ್ ಸೆಟಲ್ ಆಗಲೆಂಬುದು ಪಾಲಕರ ಇಂಗಿತ. ಆದರೆ ಮಗನ ಮೆಂಟಲಿಟಿಯೇ ಬೇರೆ. ಬಾಲ್ಯದಿಂದಲೂ ಸಿನಿಮಾ ಲೋಕವನ್ನೇ ಉಸಿರಾಗಿಸಿಕೊಂಡು ಆದ್ರೆ ಒಬ್ಬ ದೊಡ್ಡ ಡೈರೆಕ್ಟರ್ರೋ, ಹೀರೋನೋ ಆಗ್ಬೇಕು ಅನ್ನೋ ಕನಸಿಟ್ಟುಕೊಂಡವನು. ತಂದೆ ತಾಯಿ ಹೇಳಿದ ಮಾತು ಅಷ್ಟೇನೂ ಕಿವಿಗೆ ಬೀಳುತ್ತಿರಲಿಲ್ಲ. ಬಿದ್ದರೂ ಕೇಳಿ ಕೇಳಿ ರೂಢಿಯಾಗಿತ್ತು. ಆದರೆ ತಂದೆಗೇ ಆಗಲಿ, ತಾಯಿಗೇ ಆಗಲಿ ಮಗ ನಿರ್ದೆಶಕನಾಗುತ್ತಾನೆನ್ನುವ ಅರಿವಿರಲಿಲ್ಲ. ಆದರೆ ಮುಂದೊಂದು ದಿನ ತಾವೇ ನಿರ್ಮಾಣ ಮಾಡುವ ಸಾಹಸಕ್ಕಿಳಿಯುತ್ತಾರೆ ಅಂದ್ರೆ ಮಗನ ಇನ್ ವಾಲ್ವ್ ಮೆಂಟ್ ಎಷ್ಟಿರಬೇಕು ಅಲ್ವೇ. ಈ ವಾರ ರಿಲೀಸ್ ಆಗಲಿರುವ ಸಾರ್ವಜನಿಕರಲ್ಲಿ ವಿನಂತಿ ಸಿನಿಮಾ ನಿರ್ದೆಶಕ ಕೃಪಾಸಾಗರ್ ಲೈಫಿನ ಆರಂಭದ ಪುಟಗಳಿವು.

ಬಣ್ಣದ ಲೋಕವೇನೋ ಬಹಳಿಷ್ಟ. ಆದರೆ ಬ್ರಾಕ್ ಗ್ರೌಂಡ್ ಇಲ್ಲ, ಲಿಂಕ್ ಇಲ್ಲದೇ ಹ್ಯಾಂಗಪ್ಪ ಗಾಂಧಿನಗರಕ್ಕೆ ಎಂಟ್ರಿ ಕೊಡೋದು ಎಂಬ ಕನ್ ಪ್ಯೂಸ್ ನಲ್ಲಿದ್ದ ಕೃಪಾಸಾಗರ್ ಆರಂಭದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟು, ಲೈಟ್ ಅಸಿಸ್ಟೆಂಟು, ಲೈಟ್ ಬಾಯ್, ಕಾಸ್ಟ್ಯೂಮರ್ ಇತ್ಯಾದಿಯಾಗಿ ತಾಂತ್ರಿಕ ವರ್ಗದಲ್ಲಿ ಹತ್ತರಲ್ಲೊಬ್ಬನಂತೆ ಕೆಲಸ ಮಾಡಿದ್ದರು. ಬರುಬರುತ್ತಾ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆನಂತರ ಸಹ ನಿರ್ದೇಶಕನಾಗಿಯೂ ಬಡ್ತಿ ಪಡೆದ ಅವರಿಗೆ ನಿರ್ದೇಶಕನಾಗುವ ದಿನಗಳೂ ದೂರವಿರಲಿಲ್ಲ.

ಸಮಾಜಕ್ಕೆ ಸಂದೇಶಾತ್ಮಕ ಸಿನಿಮಾವೊಂದನ್ನು ನೀಡಬೇಕೆಂಬ ಕನಸೊತ್ತು ಕೃಪಾಸಾಗರ್ ದಿನನಿತ್ಯದ ಜೀವನದಲ್ಲಿಯೇ ನಡೆಯಬಹುದಾದ ಎಳೆಯಿಟ್ಟುಕೊಂಡು ಸ್ಕ್ರಿಪ್ಟ್ ಮಾಡಿ ನಿರ್ಮಾಪಕರಿಗಾಗಿ ಭೇಟಿ ನೀಡದ ಆಫೀಸುಗಳಿಲ್ಲ. ಅಂತಿಮವಾಗಿ ತನ್ನ ಗೆಳೆಯರೊಡಗೂಡಿ 10-15 ಲಕ್ಷದ ಬಂಡವಾಳದಲ್ಲಿ ಸಿನಿಮಾವನ್ನು ತಾವೇ ಪ್ರಾರಂಭಿಸಿಯೇ ಬಿಟ್ಟರು. ಆದರೆ ಆ ಹಣ ಯಾವ ಮೂಲೆಗೆ. ಇದ್ದ ದುಡ್ಡೆಲ್ಲಾ ಖರ್ಚಾಗಿ ಬರಿಗೈಯಾದ ಕೃಪಾಸಾಗರ್ ಮುಂದೆ ಹೇಗಪ್ಪಾ ಎಂದು ಕುಳಿತಿರುವಾಗ ಆಪತ್ಬಾಂದವರಂತೆ ಕೃಪಾಸಾಗರ್ ತಂದೆ ತಾಯಿಯೇ ಬಂದರು. ಕಥೆಗಿದ್ದ ತಾಕತ್ತು ಕಮ್ ಮಗನ ಕೆಪಾಸಿಟಿಯ ಅರಿವಾಗಿದ್ದ ಅವರು ಸಿನಿಮಾ ನಿರ್ಮಾಣ ಮಾಡಲು ಮಗನ ಬೆನ್ನಿಗೆ ನಿಂತರು. ಅವರ ತಂದೆ ತಾಯಿಯ ಕೈಲಿ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೋದ ಮೇಲಂತೂ ಮತ್ತಷ್ಟು ಶೀಘ್ರವಾಗಿ ಮತ್ತು ಸುಲಭವಾಗಿ ಕೃಪಾಸಾಗರ್ ತನ್ನ ಕನಸಿನ ಯೋಜನೆಯನ್ನು ಮುಗಿಸಿಬಿಟ್ಟರು. ತಾನು ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮವಾಗಿ ಸಿನಿಮಾವನ್ನು ತೆರೆಗೆ ತರುವಲ್ಲಿಯೂ ಯಶಸ್ವಿಯಾದರು. ನಟನೆಯಲ್ಲಿಯೂ ಆಸಕ್ತಿ ಇದ್ದ ಕೃಪಾಸಾಗರ್ ಮೊದಲ ನಿರ್ದೇಶನದಲ್ಲಿಯೇ ಎರಡೆರಡು ರೆಸ್ಪಾನ್ಸಿಬಿಲಿಟಿ ಬ್ಯಾಡಪ್ಪ ಅಂದುಕೊಂಡು ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗಿ ಸಾರ್ವಜನಿಕರಲ್ಲಿ ವಿನಂತಿ ಸಿನಿಮಾವನ್ನು ರೆಡಿ ಮಾಡಿದ್ದಾರೆ.

ಚಿತ್ರಕ್ಕೆ ತನಗೆ ಬಹಳಷ್ಟು ದಿನಗಳಿಂದ ಪರಿಚಿತನಾಗಿದ್ದ ಪ್ರತಿಭಾವಂತ ಮದನ್ ರಾಜ್ ಅವರನ್ನು ತಮ್ಮ ಚಿತ್ರಕ್ಕೆ ನಾಯಕನಾಗಿಯೂ ಅಮೃತಾ ಅವರನ್ನು ನಾಯಕಿಯಾಗಿಯೂ ಕಾಸ್ಟಿಂಗ್ ಮಾಡಿದರು. ಸಿನಿಮಾದಲ್ಲಿನ ಪ್ರಮುಖ ಪಾತ್ರವೊಂದಕ್ಕಾಗಿ ಇಲ್ಲಿಯವರೆಗೂ ನೆಗೆಟೀವ್ ಶೇಡಿನಲ್ಲಿ ಮಿಂಚಿದ್ದ ರಮೇಶ‍್ ಪಂಡಿತ್ ಅವರನ್ನು ಸೆಲೆಕ್ಟ್ ಮಾಡಿದ್ದು ಸಹ ಚಿತ್ರದ ಹೈಲೈಟು.

ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಜನರಿಗೆ ಮನರಂಜನಾತ್ಮಕವಾಗಿ ಸಂದೇಶವೊಂದನ್ನು ತಿಳಿಸುವ ಮೂಲಕ, ತುಮಕೂರಿನ ಅಪ್ಪಟ ಕನ್ನಡದ ಹುಡುಗ ಕೃಪಾಸಾಗರ್ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿಪಡೆದಿರೋದು ಹೆಮ್ಮೆಯ ಸಂಗತಿ. ಕೃಪಾಸಾಗರ್ ಕನಸಿನಂತೆ ಆತ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕರ ಸಾಲಿನಲ್ಲಿ ಕೂರುವಂತಾಗಲಿ ಎಂಬುದೇ ನಮ್ಮ ಆಶಯ.

CG ARUN

ಹೊರಬಿತ್ತು ಬ್ರಹ್ಮಚಾರಿ ಟೀಸರ್!

Previous article

ಶಂಕರಪುರದಲ್ಲಿ ನೆರವೇರಿತು `ರೇಮೊ’ ಸ್ಕ್ರಿಪ್ಟ್ ಪೂಜೆ!

Next article

You may also like

Comments

Leave a reply

Your email address will not be published. Required fields are marked *