ಕೃಷ್ಣ ಕಷ್ಟದಲ್ಲಿದ್ದಾಗ ಕೈಹಿಡಿದ, ಸಮಗ್ರವಾದ ಯಶಸ್ಸಿಗೆ ಕಾರಣವಾದ ‘ಬ್ಯಾಚುಲರ್’ನ ಬೆನ್ನಿಗೆ ನಿಂತಿದ್ದಾರೆ. ಶತಾಯ ಗತಾಯ ಈ ಚಿತ್ರವನ್ನೂ ಗೆಲುವಿನ ಪಟ್ಟಿಯಲ್ಲಿ ಸೇರಿಸಬೇಕು ಅಂತಾ ತೀರ್ಮಾನಿಸಿದ್ದಾರೆ. ಈ ಚಿತ್ರ ಸ್ವಲ್ಪ ತಡವಾಗಿ ತೆರೆಗೆ ಬರುತ್ತಿದೆ ನಿಜ. ಆದರೆ, ಇನ್ನೂ ಹತ್ತಾರು ವರ್ಷಗಳಿಗೆ ಹಳೆಯದಾಗದ ವಿಚಾರವನ್ನು, ಯೂನಿವರ್ಸಲ್ ಆದ ಕಂಟೆಂಟನ್ನು ಹೊಂದಿದೆ. ಈಗ ರಿಲೀಸಾಗಿರುವ ಟ್ರೇಲರ್ ಮತ್ತು ಹಾಡು ಅದನ್ನು ಗ್ಯಾರೆಂಟಿಗೊಳಿಸಿದೆ.
ಡಾರ್ಲಿಂಗ್ ಕೃಷ್ಣ ಇವತ್ತಿಗೆ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಅವರಿನ್ನೂ ಬ್ಯಾಚುಲರ್ ಲೈಫಲ್ಲಿದ್ದ ಕಾಲದಲ್ಲಿ ಶುರುವಾಗಿದ್ದ ಸಿನಿಮಾ Mr. ಬ್ಯಾಚುಲರ್.
ಕೈ ಹಿಡಿದಿದ್ದ ಧಾರಾವಾಹಿ ಕ್ಷೇತ್ರವನ್ನು ಬಿಟ್ಟು ಸಿನಿಮಾರಂಗಕ್ಕೆ ಕಾಲಿಟ್ಟಿದ್ದವರು ಕೃಷ್ಣ. ಮದರಂಗಿ ಸಿನಿಮಾ ಒಂದು ಮಟ್ಟದ ಗೆಲುವನ್ನಷ್ಟೇ ಕೊಟ್ಟಿತ್ತು. ಒಂದರ ಹಿಂದೊಂದು ಅವಕಾಶಗಳು ಸಿಗುತ್ತಾ ಹೋದವು. ದೊಡ್ಡ ಬ್ಯಾನರ್, ಸ್ಟಾರ್ ಡೈರೆಕ್ಟರ್ ಗಳ ಜೊತೆಗೆ ವರ್ಕ್ ಮಾಡುವ ಅದೃಷ್ಟವೇನೋ ಕೃಷ್ಣನ ಪಾಲಿಗೆ ಒಲಿದಿತ್ತು. ಆದರೆ, ಪರಿಪೂರ್ಣವಾದ ಸಕ್ಸಸ್ ನ ಅಗತ್ಯವಿತ್ತು. ಅಷ್ಟೆಲ್ಲಾ ಸಿನಿಮಾ ಮಾಡಿದರೂ ಯಾವುದೂ ಥೇಟರಲ್ಲಿ ನಿಲ್ಲುತ್ತಿರಲಿಲ್ಲ. ಅದೇ ಹೊತ್ತಿನಲ್ಲಿ ಡಾರ್ಲಿಂಗ್ ಒಪ್ಪಿಕೊಂಡ ಚಿತ್ರ Mr. ಬ್ಯಾಚುಲರ್. ಬಹುಶಃ ಇದೊಂದು ಸಿನಿಮಾದ ಅವಕಾಶ ಸಿಗದೇ ಹೋಗಿದ್ದರೆ ಕೃಷ್ಣ ಗೆಲ್ಲಲು ಸಾಧ್ಯವೇ ಇರುತ್ತಿರಲಿಲ್ಲ. ಇನ್ನೂ ಈಗಷ್ಟೇ ರಿಲೀಸಾಗುತ್ತಿರುವ ಬ್ಯಾಚುಲರ್ ಚಿತ್ರಕ್ಕೂ ಕೃಷ್ಣನ ಗೆಲುವಿಗೂ ಏನು ಕಾರಣ ಅನ್ನೋ ಪ್ರಶ್ನೆ ಹುಟ್ಟಬಹುದು.

Mr. ಬ್ಯಾಚುಲರ್ ಸಿನಿಮಾಗೆ ಸಿಕ್ಕ ಅಮೌಂಟನ್ನೇ ತಂದು ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಎನ್ನುವ ಪಿಚ್ಚರ್ರಿಗೆ ಇನ್ವೆಸ್ಟ್ ಮಾಡಿದ್ದು. ಅದೇ ಚಿತ್ರ ಮುಂದೆ ಗೆದ್ದು ದಾಖಲೆ ನಿರ್ಮಿಸಿದ್ದು. ಕೃಷ್ಣ ಅವರನ್ನು ಹೀರೋ ಆಗಿ ಮಾತ್ರವಲ್ಲ, ಡೈರೆಕ್ಟರಾಗಿಯೂ ಜನ ಬಿಗಿದಪ್ಪಿದ್ದು. ಗೆಲ್ಲುವ ಮುಂಚೆ ಆರಂಭವಾದ ಸಿನಿಮಾಗಳನ್ನು ಹೀರೋಗಳು ಪ್ರಮೋಟ್ ಮಾಡೋದಿಲ್ಲ. ಒಳ್ಳೇ ಮಾರ್ಕೆಟ್ ಕ್ರಿಯೇಟ್ ಆಗಿರೋ ಹೊತ್ತಲ್ಲಿ ಹಳೇ ಸ್ಟಾಕ್ ಯಾಕಾದರೂ ಬಂತೋ ಅಂದುಕೊಳ್ಳೋರೇ ಹೆಚ್ಚು. ಆದರೆ ಕೃಷ್ಣ ಕಷ್ಟದಲ್ಲಿದ್ದಾಗ ಕೈಹಿಡಿದ, ಸಮಗ್ರವಾದ ಯಶಸ್ಸಿಗೆ ಕಾರಣವಾದ ‘ಬ್ಯಾಚುಲರ್’ನ ಬೆನ್ನಿಗೆ ನಿಂತಿದ್ದಾರೆ. ಶತಾಯ ಗತಾಯ ಈ ಚಿತ್ರವನ್ನೂ ಗೆಲುವಿನ ಪಟ್ಟಿಯಲ್ಲಿ ಸೇರಿಸಬೇಕು ಅಂತಾ ತೀರ್ಮಾನಿಸಿದ್ದಾರೆ. ಈ ಚಿತ್ರ ಸ್ವಲ್ಪ ತಡವಾಗಿ ತೆರೆಗೆ ಬರುತ್ತಿದೆ ನಿಜ. ಆದರೆ, ಇನ್ನೂ ಹತ್ತಾರು ವರ್ಷಗಳಿಗೆ ಹಳೆಯದಾಗದ ವಿಚಾರವನ್ನು, ಯೂನಿವರ್ಸಲ್ ಆದ ಕಂಟೆಂಟನ್ನು ಹೊಂದಿದೆ. ಈಗ ರಿಲೀಸಾಗಿರುವ ಟ್ರೇಲರ್ ಮತ್ತು ಹಾಡು ಅದನ್ನು ಗ್ಯಾರೆಂಟಿಗೊಳಿಸಿದೆ.

“Mr ಬ್ಯಾಚುಲರ್” ಚಿತ್ರಕ್ಕಾಗಿ ಮಾರುತಿ ಅವರು ಬರೆದಿರುವ “ಮದುವೆ ಯಾವಾಗ” ಎಂಬ ಸೊಗಸಾದ ಹಾಡು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
ನಾಯ್ಡು ಅವರ ನಿರ್ದೇಶನದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಮನೋರಂಜನೆಯ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಸನ್ನಿವೇಶಗಳೂ ಇವೆ. ನಿಮಿಕಾ ರತ್ನಾಕರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷಪಾತ್ರದಲ್ಲಿ ಮಿಲನ ನಾಗರಾಜ್ ಇದ್ದಾರೆ. ಇದೇ 2023 ಜನವರಿ 6 ರಂದು ಚಿತ್ರ ಬಿಡುಗಡೆಯಾಗುತ್ತಿದೆ.
ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ – ಸಂಕಲನ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ನಿಮಿಕಾ ರತ್ನಾಕರ್, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ಅಯ್ಯಪ್ಪ ಶರ್ಮ, ಚಿಕ್ಜಣ್ಣ, ಪವಿತ್ರ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಯ್ಡು ಬಂಡಾರು ಈ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದಾರೆ.
No Comment! Be the first one.