ಸಿನಿಮಾ ತಾರೆಯರನ್ನು ವಿಶೇಷ ಪಾತ್ರದಲ್ಲಿ ಬಳಸಿಕೊಳ್ಳುವ, ಅವರೇ ಸಿನಿಮಾ ಪ್ರಮೋಷನ್ ಮಾಡುವ, ಇಲ್ಲವೇ ಟೀಸರ್ ಗೆ ಧ್ವನಿ ನೀಡುವ ಕಥೆಯ ಆರಂಭ ಮತ್ತು ಅಂತ್ಯವನ್ನು ನರೇಟ್ ಮಾಡುವ ಕೆಲಸಗಳಲ್ಲಿ ಬಳಸಿಕೊಳ್ಳೋದು ಈಗೀಗ ಹೆಚ್ಚು ಟ್ರೆಂಡಿಂಗ್ ಆಗಿಬಿಟ್ಟಿದೆ. ಸದ್ಯ ಅದೇ ದಾರಿಯಲ್ಲಿರುವ ಜಗ್ಗೇಶ್ ಕೂಡ ಇತ್ತೀಚಿಗೆ ಸೆಟ್ಟೇರಿರುವ ಎಂ ಆರ್ ಪಿ ಚಿತ್ರದಲ್ಲಿ ಆರಂಭ ಮತ್ತು ಅಂತ್ಯದ ಸಂದೇಶವನ್ನು ಹೇಳಲಿದ್ದಾರಂತೆ.
ಕನ್ನಡದ ಸಾಕಷ್ಟು ಸಿನಿಮಾಗಳ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಸದ್ಯ ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಆಗಿ ಎಂ ಆರ್ ಪಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ಅವರೇ ನಾಯಕ. ಸಾಫ್ಟ್ ವೇರ್ ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ಆರ್ ಪಿ ಚಿತ್ರವನ್ನು ನನ್ ಮಗಳೇ ಹೀರೋಯಿನ್ ಎಂಬ ಸಿನಿಮಾವನ್ನುನಿರ್ದೇಶನ ಮಾಡಿದ್ದ ಬಾಹುಬಲಿ ನಿರ್ದೇಶನ ಮಾಡಲಿದ್ದು, ಎಂ ಡಿ ಶ್ರೀಧರ್, ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ಬಂಡವಾಳ ಹೂಡುತ್ತಿದ್ದಾರೆ. ಉಳಿದಂತೆ ಹರ್ಷವರ್ಧನ್ ಸಂಗೀತ, ಎಂ ಎಂ ಸೂರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
Comments