ಸಾಯಿರಾಂ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್ಯ ಅವರು ನಿರ್ಮಿಸಿರುವ `ಒಂಟಿ` ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ. ಚಿತ್ರ ಜುಲೈನಲ್ಲಿ ತೆರೆಗೆ ಬರಲಿದೆ. ಚಿತ್ರ ಬಿಡುಗಡೆಗೂ ಮುನ್ನ `ಒಂಟಿ` ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಒಂದು ಕಾಲು ಕೋಟಿ ರೂಪಾಯಿಗೆ ಮಾರಾಟಾವಾಗಿರುವುದಾಗಿ ಚಿತ್ರದ ನಿರ್ಮಾಪಕ ಆರ್ಯ ತಿಳಿಸಿದ್ದಾರೆ.

ಶ್ರೀ (ಒರಟ ಐ ಲವ್ ಯು) ನಿರ್ದೇಶನದ ಈ ಚಿತ್ರದ ನಾಯಕರಾಗಿ ಚಿತ್ರದ ನಿರ್ಮಾಪಕರೂ ಆಗಿರುವ ಆರ್ಯ ಅಭಿನಯಿಸಿದ್ದಾರೆ. ಈ ಹಿಂದೆ `ಈ ಸಂಜೆ` ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಆರ್ಯ ಅವರಿಗೆ ಇದು ನಾಯಕರಾಗಿ ದ್ವಿತೀಯ ಚಿತ್ರ. ಈ ಹಿಂದೆ ಕಿಚ್ಚ ಸುದೀಪ ಅಭಿನಯದ `ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ` ಮುಂತಾದ ಚಿತ್ರಗಳಲ್ಲೂ ಆರ್ಯ ನಟಿಸಿದ್ದಾರೆ.

ಕೆ.ಕಲ್ಯಾಣ್ ಹಾಗೂ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಹಾಡುಗಳಿಗೆ ಮನೋಜ್.ಎಸ್(ಶ್ರೀಲಂಕ) ಸಂಗೀತ ನೀಡಿದ್ದಾರೆ. ಕೆ.ಶಶಿಧರ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಆರ್ಯನಿಗೆ ನಾಯಕಿಯಾಗಿ ಮೇಘನಾರಾಜ್ ಅಭಿನಯಿಸಿದ್ದು, ಉಳಿದಂತೆ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್, ಮಜಾಟಾಕೀಸ್ ಪವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

CG ARUN

“ಭಾನು ವೆಡ್ಸ್ ಭೂಮಿ” ಯು/ಎ ಸರ್ಟಿಫಿಕೆಟ್

Previous article

ಈ ವಾರ ತೆರೆಗೆ `ರುಸ್ತುಂ’

Next article

You may also like

Comments

Leave a reply

Your email address will not be published. Required fields are marked *