ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್. ಈಗಾಗಲೇ ಸಿನಿಮಾ ಯಾವಾಗ ಬರುತ್ತೋ ಅನ್ನೋ ಕುತೂಹಲದಲ್ಲಿ ಕಿಚ್ಚನ ಅಭಿಮಾನಿಗಳಿದ್ದರು. ಅಲ್ಲದೇ ವರಮಹಾಲಕ್ಷ್ಮಿ ಹಬ್ಬದ ದಿನವೇ ಪೈಲ್ವಾನ್ ರಿಲೀಸ್ ಮಾಡುತ್ತೇವೆಂದು ಚಿತ್ರತಂಡವೇ ಅನೌನ್ಸ್ ಕೂಡ ಮಾಡಿತ್ತು. ಆದರೆ ಮುನಿರತ್ನ ಕುರುಕ್ಷೇತ್ರ ಸಿನಿಮಾವನ್ನು ಅಂದೇ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಅದಾದಮೇಲೆ ರಿಲೀಸ್ ದಿನಾಂಕದಲ್ಲಿ ಪೈಲ್ವಾನ್ ಗೆ ಕೊಂಚ ಗೊಂದಲವೂ ಶುರುವಾಗಿತ್ತು.
ಸದ್ಯ ಪೈಲ್ವಾನ್ ಎಂಟ್ರಿಗೆ ಅಖಾಡ ರೆಡಿಯಾಗಿದ್ದು, ಸ್ವತಃ ಚಿತ್ರತಂಡವೇ ರಿಲೀಸ್ ದಿನಾಂಕವನ್ನು ಬಹಿರಂಗಪಡಿಸಿದೆ. ಹೌದು.. ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ನಿರ್ದೇಶಕ ಕೃಷ್ಣ ಆಗಸ್ಟ್ 29ಕ್ಕೆ ಪೈಲ್ವಾನ್ ರಿಲೀಸ್ ಆಗಲಿದೆ ಎಂದು ಪ್ರಕಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆ ಸೇರಿದಂತೆ ಬಹುಭಾಷೆಗಳಲ್ಲಿ ಪೈಲ್ವಾನ್ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಇನ್ನು ಪೈಲ್ವಾನ್ ತಾರಾಂಗಣದಲ್ಲಿ ಸುದೀಪ್, ಕಬೀರ್ ಸಿಂಗ್ ದುಹಾನ್, ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್ ಇನ್ನಿತರಿದ್ದಾರೆ.
Comments