ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಭಿನಯಿಸಲಿದ್ದಾರೆಂಬ ಸುದ್ದಿ ಹರಡಿಕೊಂಡಿತ್ತು. ಅದರಂತೆ ಅವರು ಅಭಿನಯಿಸುವುದು ಪಕ್ಕಾ ಕೂಡಾ ಆಗಿ ಶೂಟಿಂಗನ್ನು ಮುಗಿಸಿಕೊಂಡಿದ್ದರು. ಪೈಲ್ವಾನ್ ಟೀಮ್ ಕಿಚ್ಚನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು ನಿನ್ನೆ ಸುನೀಲ್ ಶೆಟ್ಟಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಅವರು ಸರ್ಕಾರ್ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಖಡಕ್ ಲುಕ್ ಎಲ್ಲರ ಗಮನಸೆಳೆದಿದೆ.

ಹೆಬ್ಬುಲಿ ಕೃಷ್ಣ ಅಭಿನಯದ ಪೈಲ್ವಾನ್ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗುವ ಸಾಧ್ಯತೆಗಳಿವೆ. ದೇಸಿ ಕ್ರೀಡೆ ಕುಸ್ತಿಯ ಕುರಿತಾದ ಚಿತ್ರ ಇದಾಗಿದ್ದು, ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ. ಸ್ವಪ್ನಾ ಕೃಷ್ಣ ಚೊಚ್ಚಲ ಬಾರಿಗೆ ಪೈಲ್ವಾನ್ ಮೂಲಕ ನಿರ್ಮಾಪಕಿಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪೈಲ್ವಾನ್ ಸಾಂಗ್ ಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಜೂಲಿ ಲಕ್ಷ್ಮೀ ಜೊತೆಯಾದ ಸಮಂತಾ!

Previous article

ಲವರ್ ಗಳಾಗಿದ್ದವರೂ ಎಂಗೇಜ್ ಆಗಲಿದ್ದಾರೆ!

Next article

You may also like

Comments

Leave a reply

Your email address will not be published. Required fields are marked *