ಮುಂಬೈ, ಭಾರತ – ಭಾರತದ ಅತ್ಯಂತ ಮೆಚ್ಚಿನ ಮನರಂಜನೆ ತಾಣವಾಗಿರುವ ಪ್ರೈಮ್ ವೀಡಿಯೋ ಇಂದು ತನ್ನ ಅತ್ಯಂತ ಬಹುನಿರೀಕ್ಷಿತ ಮತ್ತು ವೈವಿಧ್ಯಮಯ ಕಂಟೆಂಟ್ ಅನ್ನು ಅನಾವರಣಗೊಳಿಸುತ್ತಿದ್ದು, ತನ್ನ ಎರಡನೇ ಪ್ರೈಮ್ ವೀಡಿಯೋ ಪ್ರೆಸೆಂಟ್ಸ್ ಇಂಡಿಯಾ ಶೋಕೇಸ್‌ನಲ್ಲಿ ಸುಮಾರು 70 ಸಿರೀಸ್ ಮತ್ತು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದೆ. ಈ ಬಹುತೇಕವು ಮುಂದಿನ 2 ವರ್ಷಗಳಲ್ಲಿ ಪ್ರೀಮಿಯರ್ ಆಗಲಿವೆ. 40 ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು ಮತ್ತು ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ 29 ಸಿನಿಮಾಗಳು ಇದರಲ್ಲಿ ಸೇರಿರಲಿವೆ. ಗ್ರಾಹಕರನ್ನು ರಂಜಿಸಲು ಭಾರತದ ಅತ್ಯುತ್ತಮ ಮನರಂಜನೆಯನ್ನು ಇದು ಒದಗಿಸುವ ಭರವಸೆ ನೀಡುತ್ತದೆ.
ಕುಟುಂಬದ ಎಲ್ಲರಿಗೂ ಏನಾದರೂ ಒಂದನ್ನು ಪ್ರೈಮ್ ವೀಡಿಯೋದ ಮುಂಬರುವ ಒರಿಜಿನಲ್ಸ್ ಕೊಡುತ್ತದೆ. ಇದರಲ್ಲಿ ವಿವಿಧ ಶ್ರೇಣಿಯ ಸಿರೀಸ್ ಮತ್ತು ಸಿನಿಮಾಗಳು ಇರಲಿವೆ. ಅಲ್ಲದೆ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಕಂಟೆಂಟ್ ಕೂಡಾ ಇರಲಿದೆ. ಆಕರ್ಷಕ ಥ್ರಿಲ್ಲರ್‌ಗಳಿಂದ, ಮನಮುಟ್ಟುವ ಡ್ರಾಮಾಗಳು, ನಗೆಯುಕ್ಕಿಸುವ ಕಾಮಿಡಿಗಳು ಮತ್ತು ಎದೆ ನಡುಗಿಸುವ ಹಾರರ್, ಅತ್ಯಂತ ಕುತೂಹಲ ಕೆರಳಿಸುವ ಶೋಗಳು, ಯುವ ಸಮೂಹಕ್ಕೆಂದೇ ರೂಪಿಸಿದ ಸುಂದರ ಕಥೆಗಳು, ಅತ್ಯಂತ ಉತ್ಸಾಹ ಚಿಮ್ಮಿಸುವ ಆಕ್ಷನ್ ಸಿನಿಮಾಗಳು ಮತ್ತು ಸಂಗೀತ ಭರಿತ ಡ್ರಾಮಾಗಳು ಎಲ್ಲವೂ ಇದರಲ್ಲಿವೆ. ಇದರ ಜೊತೆಗೆ ಭಾರತದ ಅತ್ಯಂತ ಪ್ರತಿಷ್ಠಿತ ಫಿಲ್ಮ್ ಸ್ಟೂಡಿಯೋಗಳ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತದೆ. ಇವು ಥಿಯೇಟರ್‌ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಈ ವೇದಿಕೆಗೆ ಲಗ್ಗೆ ಇಡಲಿವೆ.
“ಪ್ರೈಮ್ ವೀಡಿಯೋದಲ್ಲಿ, ವಿವಿಧ ಮನರಂಜನೆ ವಿಧಾನಗಳ ಮೂಲಕ ಭಾರತೀಯ ಗ್ರಾಹಕರ ಮನರಂಜಿಸಲು ನಾವು ಹೆಚ್ಚು ಗಮನ ಹರಿಸಿದ್ದೇವೆ. ಹೊಸ ವಿಧಾನದ ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು, ನೇರವಾಗಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ವಿವಿಧ ಭಾಷೆಗಳಲ್ಲಿ ಥಿಯೇಟರ್‌ನಲ್ಲಿ ಹಿಟ್ ಆದ ಅತಿ ದೊಡ್ಡ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಪ್ರತಿ ಗ್ರಾಹಕರಿಗೂ ನಾವು ಮೊದಲ ಆಯ್ಕೆಯಾಗಿರಬೇಕು ಎಂದು ಬಯಸುತ್ತೇವೆ” ಎಂದು ಪ್ರೈಮ್ ವೀಡಿಯೋ ಇಂಡಿಯಾದ ಕಂಟ್ರಿ ಡೈರೆಕ್ಟರ್ ಸುಶಾಂತ್ ಶ್ರೀರಾಮ್ ಹೇಳಿದ್ದಾರೆ. 2023 ರಲ್ಲಿ ನಮ್ಮ ಕಂಟೆಂಟ್ ಹೊಸ ಗಡಿಯನ್ನು ಮೀರಿದೆ. ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದು ಮತ್ತು ಪ್ರೈಮ್ ಮೆಂಬರ್ ಎಂಗೇಜ್‌ಮೆಂಟ್ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಮುಂಚೂಣಿಯಲ್ಲಿರಲು ಸಹಾಯ ಮಾಡಿದೆ. ನಮ್ಮ ಗ್ರಾಹಕರಿಂದ ನಾವು ಪಡೆದ ಪ್ರೀತಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ಪ್ಲಾಟ್‌ಫಾರಂನಲ್ಲಿರುವ ಪ್ರತಿ ಕಥೆಯೂ ಅವರಿಗೆ ಮೆಚ್ಚುಗೆಯಾಗಬೇಕು ಎಂದು ನಾವು ಆಶಿಸುತ್ತೇವೆ. ಇದಕ್ಕೆ ಅನುಗುಣವಾಗಿ ನಾವು ಈವರೆಗಿನ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯವಾದ ಮನರಂಜನೆಯನ್ನು ಒದಗಿಸಲು ಬಯಸಿದ್ದೇವೆ ಮತ್ತು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿನ ಪ್ರೇಕ್ಷಕರನ್ನು ನಮ್ಮ ಮುಂಬರುವ ಸಿರೀಸ್ ಮತ್ತು ಸಿನಿಮಾಗಳು ಮನರಂಜಿಸಲಿದೆ ಎಂದು ನಾವು ಖಾತರಿ ಹೊಂದಿದ್ದೇವೆ” ಎಂದು ಅವರು ಹೇಳುತ್ತಾರೆ.
“ವೈವಿಧ್ಯಮಯ, ಅಸಲಿ ಮತ್ತು ನೆಲಮೂಲದ ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಪ್ರೈಮ್ ವೀಡಿಯೋ ಬದ್ಧವಾಗಿದೆ. ಇದರಿಂದ ಭಾಷೆ ಮತ್ತು ಭೌಗೋಳಿಕ ಗಡಿಗಳನ್ನೂ ಮೀರಲಿದೆ” ಎಂದು ಪ್ರೈಮ್ ವೀಡಿಯೋದ ಭಾರತ ಮತ್ತು ಆಗ್ನೇಯ ಏಷ್ಯಾದ ಒರಿಜಿನಲ್ಸ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿದ್ದಾರೆ. “2023 ರಲ್ಲಿ, ನಮ್ಮ ಕಂಟೆಂಟ್ ಅನ್ನು 210 ದೇಶಗಳು ಮತ್ತು ಪ್ರದೇಶಗಳಲ್ಲಿ ಪ್ರತಿ ವಾರವೂ ವೀಕ್ಷಿಸಲ್ಪಟ್ಟಿದೆ. ಕಳೆದ 52 ವಾರಗಳ ಪೈಕಿ 43 ರಲ್ಲಿ ವಿಶ್ವಾದ್ಯಂತ ಪ್ರೈಮ್ ವೀಡಿಯೋದಲ್ಲಿ ಅಗ್ರ 10 ರಲ್ಲಿ ಟ್ರೆಂಡ್ ಆಗಿದೆ. ನಮ್ಮ ಶೋಗಳು ಮತ್ತು ಸಿನಿಮಾಗಳ ರಾಷ್ಟ್ರೀಯ ಮತ್ತು ಜಾಗತಿಕ ಪರಿಣಾಮ ನಮಗೆ ಸಂತೃಪ್ತಿ ನೀಡುವ ಸಂಗತಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಕಂಟೆಂಟ್ ಅನ್ನು ನಾವು ಇನ್ನಷ್ಟು ಪ್ರಚುರಪಡಿಸಲು ನಮಗೆ ಖುಷಿಯಾಗುತ್ತದೆ. ಕಥೆಗಾರರು ಮತ್ತು ಪ್ರತಿಭಾವಂತರ ಮನೆಯಾಗಿರುವ ನಾವು ಭಾರತೀಯ ಮನರಂಜನೆ ವಲಯದಲ್ಲಿನ ಪ್ರಮುಖ ವ್ಯಕ್ತಿಗಳ ಜೊತೆಗೆ ಪಾಲುದಾರಿಕೆ ವಹಿಸಲು ನಾವು ಉತ್ಸುಕರಾಗಿದ್ದೇವೆ. ತಾಜಾ, ಶಕ್ತಿಯುತ, ಸ್ಫೂರ್ತಿದಾಯಕ ಮತ್ತು ಮನರಂಜನೆಯ ಕಥೆಗಳನ್ನು ರಚಿಸಲು ಈ ಮೂಲಕ ನಮಗೆ ಶಕ್ತಿ ಒದಗಲಿದೆ. ಭಾರತ ವಿಶ್ವಮಟ್ಟದಲ್ಲಿ ಕಾಣಿಸಿಕೊಳ್ಳಲು ನಮ್ಮ ಮುಂಬರುವ ಸಿನಿಮಾಗಳು ಮತ್ತು ಸರಣಿಗಳು ಹೊಸ ದಾರಿಯನ್ನು ಹಾಕಿಕೊಡಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ” ಎಂದರು.
No Comment! Be the first one.