KATERA_UPADHYAKSHA_DARSHAN_CHIKKANNA_FILM_JOURNALIST_ARUNKUMAR_G

ಚಾಲೆಂಗ್‌ಸ್ಟಾರ್‌ ಮುಂದೆ ಚಿಲ್ಟೂ ಚಿಕ್ಕ ಕಾಲರೆತ್ತುತ್ತಾನಾ?

ಇತ್ತೀಚಿಗಿನ ಹಿಟ್‌ ಸಿನಿಮಾಗಳ ಲಿಸ್ಟಿನಲ್ಲಿರುವ ಮೊದಲೆರಡು ಸಿನಿಮಾಗಳೆಂದರೆ, ಒಂದು ಕಾಟೇರ ಮತ್ತೊಂದು ಉಪಾಧ್ಯಕ್ಷ. 2023ರಲ್ಲಿ ಕೆಟ್ಟ ಸೋಲಿನಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಗುಟುಕು ಜೀವ ಕೊಟ್ಟ ಚಿತ್ರಗಳಿವು.

ವಾಹಿನಿಗಳು ದೊಡ್ಡ ಮಟ್ಟದ ದುಡ್ಡು ಕೊಟ್ಟು ಸಿನಿಮಾಗಳನ್ನು ಖರೀದಿಸಿರುತ್ತವೆ. ಹಾಕಿದ ಬಂಡವಾಳವನ್ನು ವಾಪಾಸು ಪಡೆಯಲು ಅವರು ಪ್ರೈಮ್‌ ಡೇ, ಪ್ರೈಮ್‌ ಟೈಮಿಗಾಗಿ ಕಾದಿರುತ್ತಾರೆ. ಬರಲಿರುವ ಯುಗಾದಿಯ ದಿನ ತಾವು ಪರ್ಚೇಸ್‌ ಮಾಡಿರುವ ಸಿನಿಮಾಗಳನ್ನು ಟೆಲಿಕಾಸ್ಟ್‌ ಮಾಡಿ, ಭರ್ಜರಿ ಜಾಹೀರಾತು ಪಡೆಯುವ ಪ್ಲಾನು ಮನರಂಜನಾ ವಾಹಿನಿಗಳದ್ದು.

ಇಷ್ಟೂ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ವಾಹಿನಿಗಳು ಖರೀದಿ ಮಾಡಿರುವ ಸಿನಿಮಾಗಳ ಸಂಖ್ಯೆ  ತೀರಾ ಕಡಿಮೆ. ಕಳೆದ ಒಂದೆರಡು ವರ್ಷಗಳಲ್ಲಿ ಅಗತ್ಯಕ್ಕಿಂತಾ ಹೆಚ್ಚು ಹಣ ನೀಡಿ ಸಿನಿಮಾಗಳನ್ನು ಪರ್ಚೇಸ್‌ ಮಾಡಿದ್ದ ಟೀವಿಗಳ ಬುಡಕ್ಕೆ ಬಾರೀ ಪೆಟ್ಟು ಬಿದ್ದಿತ್ತು. ಈ ಕಾರಣದಿಂದಲೇ ಒಂದು ವರ್ಷದಲ್ಲಿ ತಯಾರಾದ ಎಷ್ಟೋ ಸ್ಟಾರ್‌ ಗಳ ಸಿನಿಮಾಗಳು ಕೂಡಾ ಇನ್ನೂ ವ್ಯಾಪಾರವಾಗದೇ ಹಾಗೇ ಕುಳಿತಿವೆ. ಒಂದು ವೇಳೆ ಯುಗಾದಿ ಹಬ್ಬದ ದಿನ ಪ್ರಸಾರವಾಗುತ್ತಿರುವ ಈ ಎರಡು ಅಸಲೀ ಹಿಟ್‌ ಸಿನಿಮಾಗಳು ಗಳಿಕೆ ಮಾಡಿಕೊಟ್ಟರೆ ಬಹುಶಃ ಮತ್ತೆ ವಾಹಿನಿಗಳು ಇತರೆ ಚಿತ್ರಗಳನ್ನು ಖರೀದಿಸಲು ವ್ಯಾಪಾರ ಶುರುಮಾಡಬಹುದು.

KATERA_UPADHYAKSHA_DARSHAN_CHIKKANNA_FILM_JOURNALIST_ARUNKUMAR_G

ಸದ್ಯಕ್ಕೆ ಜೀ ಟೀವಿ ಕಾಟೇರನನ್ನು ಯುಗಾದಿಯಂದು ಕಣಕ್ಕಿಳಿಸುತ್ತಿದೆ. ಅದೇ ದಿನ ಉದಯ ಟೀವಿಯಲ್ಲಿ ಉಪಾಧ್ಯಕ್ಷ ಪ್ರಸಾರವಾಗಲಿದೆ. ಚಾಲೆಂಜಿಗ್‌ ಸ್ಟಾರ್‌ ಸಿನಿಮಾ ಮುಂದೆ ಚಿಲ್ಟೂ ಚಿಕ್ಕ ಎಷ್ಟು ಟಿ.ಆರ್.ಪಿ. ಪಡೆಯುತ್ತಾನೋ ಗೊತ್ತಿಲ್ಲ. ಒಟ್ಟಾರೆ ಈ ಎರಡೂ ಸಿನಿಮಾಗಳು ವಾಹಿನಿಗಳಿಗೆ ಮಾಡಿಕೊಡುವ ಸಂಪಾದನೆ ಸ್ಯಾಂಡಲ್‌ವುಡ್ಡಿನ ಸದ್ಯದ ಸ್ಥಿತಿಯನ್ನು ಬದಲಿಸೋದಂತೂ ಖಚಿತ. ಈ ಸಲದ ಯುಗಾದಿ ಅಂಥದ್ದೊಂದು ಪಾಸಿಟೀವ್‌ ಬದಲಾವಣೆಯನ್ನು ತರುವಂತಾಗಲಿ…!

Comments

Leave a Reply