ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ತೆರೆ ಮೇಲೆ ಅರಳುವ ಕಾಲ ಸನ್ನಿಹಿತವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಉತ್ತರಾಧಿಕಾರಿ ಅಂತಲೇ ಎಲ್ಲರಿಂದ ಕರೆಸಿಕೊಳ್ಳುತ್ತಿರುವ ಯುವ ರಾಜ್ ಕುಮಾರ್ ಅಭಿನಯದ ಯುವ ಸಿನಿಮಾದ ಹಾಡೊಂದು ಲೋಕಾರ್ಪಣೆಗೊಂಡಿದೆ. ಯುವ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ. ಆನಂದ್ ಆಡಿಯೋ ಹಕ್ಕು ಪಡೆದಿದೆ ಅಂದ ಮೇಲೆ ಹಾಡುಗಳು ಹಿಟ್ ಅನ್ನೋದು ಎಲ್ಲರ ಲೆಕ್ಕಾಚಾರ!
‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಣ ಆಗುತ್ತಿರುವ, ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಿರುವ ‘ಯುವ’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಯುವ ರಾಜ್ಕುಮಾರ್ ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಮಾರ್ಚ್ 29ಕ್ಕೆ ‘ಯುವ’ ಸಿನಿಮಾ ಬಿಡುಗಡೆ ಆಗಲಿದೆ. ‘ಯುವ’ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿರುವ ಸುಮಧುರ ಹಾಡುಗಳು ಈ ಸಿನಿಮಾದಲ್ಲಿವೆ. ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ‘ಆನಂದ್ ಆಡಿಯೋ’ ‘ಯುವ’ ಸಿನಿಮಾದ ಹಾಡುಗಳ ಹಕ್ಕನ್ನು 3 ಕೋಟಿಗೂ ಅಧಿಕ ದಾಖಲೆಯ ಮೊತ್ತಕ್ಕೆ ಪಡೆದುಕೊಂಡಿದೆ ಎಂದು ಸುದ್ದಿಯಾಗುತ್ತಿದೆ, ಕನ್ನಡ ಚಿತ್ರರಂಗದಲ್ಲೆ ಇದೇ ಮೊದಲ ಬಾರಿಗೆ ಒಬ್ಬ ಹೊಸ ನಾಯಕನಟನ ಮೊದಲ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಆಡಿಯೋ ರೈಟ್ಸ್ ಹಕ್ಕನ್ನು ಪಡೆದುಕೊಂಡಿರುವುದು .
ಎಲ್ಲೆಡೆ ಸದ್ದು ಮಾಡುತ್ತಿದೆ “ಒಬ್ಬನೇ ಶಿವಾ… ಒಬ್ಬನೇ ಯುವಾ” ಹಾಡು ಈಗ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆಯಾದ “ಯುವ” ಚಿತ್ರದ ಮೊದಲ ಹಾಡು “ಒಬ್ಬನೇ ಶಿವಾ..ಒಬ್ಬನೇ ಯುವ.. ” ಕೇಳುಗರ ಮನ ಗೆದ್ದು ಯೂ ಟೂಬ್ ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಶೀಘ್ರದಲ್ಲೇ ಟೀಸರ್ ಮತ್ತು ಟ್ರೇಲರ್ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗುತ್ತಿದೆ.
No Comment! Be the first one.