ಪುನೀತ್ ರಾಜ್ ಕುಮಾರ್ ಹೋಸ್ಟ್ ಮಾಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಮೊದಲ ಎರಡು ಸೀಜನ್ ನ ನಿರೂಪಣೆ ಮಾಡಿದ್ದ ಪುನೀತ್ ರಾಜ್ ಕುಮಾರ್ ಮೂರನೇ ಸೀಜನ್ ನಲ್ಲಿ ನಿರೂಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಅವರ ಬದಲು ರಮೇಶ್ ಅರವಿಂದ್ ಕನ್ನಡದ ಕೋಟ್ಯಧಿಪತಿಯ ನಿರೂಪಣೆಯನ್ನು ಮಾಡಿದ್ದರು.

 

ಇದೀಗ ನಾಲ್ಕನೇ ಸೀಜನ್ನಿಗೆ ಪುನೀತ್ ರಾಜ್ ಕುಮಾರ್ ಕಮ್ ಬ್ಯಾಕ್ ಆಗಿದ್ದು, ಜೂನ್ 22 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕನ್ನಡದ ಕೋಟ್ಯಧಿಪತಿ ಆರಂಭವಾಗಲಿದೆ. ಮೂರು ಸೀಜನ್ ಗಳು ಸ್ಟಾರ್ ಸುವರ್ಣದಲ್ಲಿ ಟೆಲಿಕಾಸ್ಟ್ ಆಗುತ್ತಿತ್ತು. ಇದೀಗ ಚೊಚ್ಚಲ ಬಾರಿಗೆ ಕಲರ್ಸ್ ಕನ್ನಡದಲ್ಲಿ ಪ್ರೋಗ್ರಾಂ ಟೆಲಿಕಾಸ್ಟ್ ಆಗುತ್ತಿರುವುದು ವಿಶೇಷವಾಗಿದೆ.

CG ARUN

ಸಿದ್ಧಾರ್ಥ ಮಲ್ಹೋತ್ರ ಜತೆ ಕಿಯಾರ ಕುಚ್ ಕುಚ್ ರೂಮರ್!

Previous article

ಅಮರ್ ಫ್ಲಾಪ್ ಬೆನ್ನಲ್ಲೇ ನಾಗಶೇಖರ್ ಹೊಸ ಸಿನಿಮಾ!

Next article

You may also like

Comments

Leave a reply

Your email address will not be published. Required fields are marked *