ರಂಗಿತರಂಗದ ಭಾವಪೂರ್ಣ ಅಭಿನಯದಿಂದಲೇ ಪ್ರೇಕ್ಷಕರ ಪ್ರೀತಿ ಪಾತ್ರಳಾದಾಕೆ ರಾಧಿಕಾ ಚೇತನ್. ಆ ನಂತರದಲ್ಲಿಯೂ ಈಕೆ ಕಾಣಿಸಿಕೊಂಡಿದ್ದು ಭಾವ ತೀವ್ರತೆ ಇರೋ ಪಾತ್ರಗಳಲ್ಲಿಯೇ. ರಿಯಲ್ಲಾಗಿಯೂ ಅಂಥಾದ್ದೇ ಸಾಫ್ಟ್ ನೇಚರ್ ಹೊಂದಿರೋ ರಾಧಿಕಾ ಏಕಾಏಕಿ ಬಡಿಗೆ ಹಿಡಿದು ಫೈಟಿಂಗಿಗೆ ರೆಡಿಯಾಗುತ್ತಿದ್ದಾಳೆಂದರೆ ನಂಬಲು ತುಸು ಕಷ್ಟವಾದೀತು!
ಆದರೆ ರಾಧಿಕಾ ರೆಬೆಲ್ ಆಗಿರೋದು ನಿಜ. ಈಕೆಯನ್ನು ಇಂಥಾ ಅವತಾರಕ್ಕೆ ತಂದು ನಿಲ್ಲಿಸಿರೋದು ಇಷ್ಟರಲ್ಲೇ ಶುರುವಾಗಲಿರೋ ಒಂದು ಚಿತ್ರ. ಆ ಚಿತ್ರದಲ್ಲಿ ಮೊದಲ ಸಲ ರಾಧಿಕಾ ಆಕ್ಷನ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳಂತೆ. ಇದುವರೆಗೂ ಡ್ಯಾನ್ಸ್ನಲ್ಲಿ ಮಾತ್ರವೇ ಪಳಗಿಕೊಂಡು ಅದನ್ನು ರಿಲ್ಯಾಕ್ಷಿನ ಸಾಧನವನ್ನಾಗಿಸಿಕೊಂಡಿದ್ದ ರಾಧಿಕಾ ಏಕಾಏಕಿ ಆಕ್ಷನ್ ಸೀನುಗಳಲ್ಲಿ ಕಾಣಿಸಿಕೊಳ್ಳೋದು ಸಾಧ್ಯವಿಲ್ಲವಲ್ಲಾ? ಅದಕ್ಕಾಗಿಯೇ ಆಕೆ ಅಚ್ಚುಕಟ್ಟಾಗಿ ಸ್ಟಂಟ್ ತರಬೇತಿ ಪಡೆಯುತ್ತಿದ್ದಾಳೆ.
ಒಂದು ವಾರದಿಂದೀಚೆಗೆ ರಾಧಿಕಾ ಇಂಥಾದ್ದೊಂದು ಹೊಸಾ ಅನಿಭವಕ್ಕೆ ಒಡ್ಡಿಕೊಂಡಿದ್ದಾಳಂತೆ. ಆಕೆಯ ಟ್ರೈನರ್ ಸಂಪರ್ಣ ಸಹಕಾರದೊಂದಿಗೆ ಮುಂದಿನ ಪಾತ್ರಕ್ಕೆ ಬೇಕಾಗಿರುವ ಸಕಲ ಪಟ್ಟುಗಳನ್ನೂ ಕರಗತ ಮಾಡಿಕೊಳ್ಳುತ್ತಿದ್ದಾಳಂತೆ. ಈ ಬಗ್ಗೆ ಖುಷಿಯಿಂದಲೇ ಅಭಿಪ್ರಾಯ ಹಂಚಿಕೊಂಡಿರೋ ರಾಧಿಕಾ ‘ನನಗೆ ಡ್ಯಾನ್ಸ್ ಹೊಸತಲ್ಲ. ಅದು ಒಂದು ರೀತಿಯಲ್ಲಿ ನನ್ನ ಲೈಫ್ ಸ್ಟೈಲ್. ಸಿನಿಮಾಗಳಲ್ಲಿಯೂ ನನಗೆ ಆ ಅವಕಾಶ ಸಿಕ್ಕಿದೆ. ಆದರೆ ಆಕ್ಷನ್ ಸೀನುಗಳು ರೀಲಲ್ಲಿ ಮಾತ್ರವಲ್ಲ ರಿಯಲ್ಲಾಗಿಯೂ ನನಗೆ ಅಪರಿಚಿತ. ಅದರ ಕಲಿಕೆ ಖುಷಿ ಕೊಟ್ಟಿದೆ. ತರಬೇತುದಾರರ ಸಹಕಾರದೊಂದಿಗೆ ಈ ಹೊಸಾ ವಿದ್ಯೆ ಕಲಿಯುತ್ತಿದ್ದೇನೆ ಅಂದಿದ್ದಾಳೆ.
ರಾಧಿಕಾ ನಟಿಸಲಿರೋ ಹೊಸಾ ಚಿತ್ರ ಥ್ರಿಲ್ಲರ್ ಕಥಾನಕ ಹೊಂದಿದೆಯಂತೆ. ಅದರಲ್ಲಿ ಆಕೆಯದ್ದು ಇನ್ವೆಸ್ಟಿಗೇಟಿವ್ ಆಫಿಸರ್ ಪಾತ್ರ. ಅದಕ್ಕಾಗಿಯೇ ರಾಧಿಕಾ ಇಷ್ಟೆಲ್ಲ ಕಸರತ್ತು ಮಾಡುತ್ತಿದ್ದಾಳೆ!
#
No Comment! Be the first one.