ಮತ್ತೊಮ್ಮೆ ಲಿಪ್ ಲಾಕ್ ಮಾಡಿದ ರಶ್ಮಿಕಾ

  • ಅನುರಾಗ್

ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಿಪ್ ಲಾಕ್ ಮೂಲಕವೇ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಟಾಲಿವುಡ್ ಚಿತ್ರಗಳಾದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ, ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಿ ಫೇಮಸ್‌ ಆಗಿದ್ದಳು. ಈಗ ಇದೇ ರಶ್ಮಿಕಾ  ಬಾಲಿವುಡ್ ನಟನ ತುಟಿಗೆ ತುಟಿಯಿಟ್ಟು ಲಲ್ಲೆಗರೆದಿದ್ದಾಳೆ.

ತೆಲುಗಿನ ಸ್ಟಾರ್ ಡೈರೆಕ್ಟರ್ ಸಂದೀಪ್ ವಂಗಾ ನಿರ್ದೇಶನದ ಎರಡನೇ ಬಾಲಿವುಡ್ ಚಿತ್ರ,  ‘ಅನಿಮಲ್’ ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಸದ್ಯ ಪ್ರಚಾರದ ಭಾಗವಾಗಿ ಅಕ್ಟೋಬರ್ 11 ರಂದು ನೂತನ ಹಾಡನ್ನು ಬಿಡುಗಡೆಗೊಳಿಸಿದ್ದಾರೆ.  ‘ಹುವಾ ಮೈನ್’ ಎಂದು ಹಿಂದಿಯಲ್ಲಿ, ‘ಅಮ್ಮಾಯಿ’ ಎಂದು ತೆಲುಗಿನಲ್ಲಿ, ‘ನೀ ವಾಡಿ’ ಎಂದು ತಮಿಳಿನಲ್ಲಿ, ‘ಪೆನ್ನಾಲೆ’ ಎಂದು ಮಲಯಾಳಂನಲ್ಲಿ ಮತ್ತು ‘ಓ ಬಾಲೆ” ಎಂದು ಕನ್ನಡದಲ್ಲಿ ಈ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ವಿಮಾನದ ಕಾಕ್ ಪಿಟ್ ನಲ್ಲಿ ಕುಳಿತು ಪರಸ್ಪರ ಚುಂಬಿಸಿಕೊಳ್ಳುವ ದೃಶ್ಯವಿದೆ.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಇದೀಗ ಚಿತ್ರದ  ಹಾಡು ಬಿಡುಗಡೆಯಾಗಿದ್ದು ಅದರಲ್ಲಿನ ಇಪ್‌ ಲಾಕ್‌ ಸೀನ್‌ ಬಿಟ್ಟರೆ ಅಂಥಾ ವಿಶೇಷವೇನೂ ಕಾಣುತ್ತಿಲ್ಲ. ಇದನ್ನು ನೋಡಿದವರು  ‘ಅಯ್ಯಯ್ಯೋ ಪ್ಲೇನ್ ಕ್ರಾಶ್ ಆಗುತ್ತೆ’ಎಂದು ವ್ಯಂಗ್ಯವಾಡುತ್ತಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರು ಸಂದೀಪ್ ವಂಗಾ ನಿರ್ದೇಶನದ ಚಿತ್ರಗಳಲ್ಲಿರುವ ಕ್ರೌರ್ಯ ಮತ್ತು ಬೋಲ್ಡ್ ಅಂಶಗಳು ಈ ಚಿತ್ರದಲ್ಲೂ ಕಾಣಬಹುದೆಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

Comments

Leave a Reply