ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಅಲೆ ಜೋರಾಗಿದೆ. ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿರೋ ಹಾಡುಗಳ ಮೂಲಕವೇ ಯಜಮಾನ ಎಲ್ಲೆಡೆ ವಿಜೃಂಭಿಸುತ್ತಿದ್ದಾನೆ. ದರ್ಶನ್ ಹುಟ್ಟುಹಬ್ಬವಿರೋ ಫೆಬ್ರವರಿ ತಿಂಗಳಲ್ಲಿಯೇ ಯಜಮಾನ ಚಿತ್ರ ಬಿಡುಗಡೆಯಾಗಲಿದೆ. ಅಷ್ಟರಲ್ಲಾಗಲೇ ಈ ಚಿತ್ರತಂಡ ಹೊಸಾ ಚಿತ್ರವೊಂದಕ್ಕೆ ರೆಡಿಯಾಗಿ ಬಿಟ್ಟಿದೆ.
ಯಜಮಾನ ಚಿತ್ರವನ್ನು ನಿರ್ಮಾಣ ಮಾಡಿದ್ದವರು ಬಿ ಸುರೇಶ್ ಮತ್ತು ಶೈಲಜಾ ನಾಗ್. ಅವರ ಮುಂದಿನ ಚಿತ್ರವನ್ನು ಪಿ ಕುಮಾರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿರಲಿದ್ದಾರೆ. ಇದು ಗೆಳೆಯ ವಿನೋದ್ ಗೆ ದರ್ಶನ್ ಕಡೆಯಿಂದ ಸಿಕ್ಕಿರೋ ದೊಡ್ಡ ಮಟ್ಟದ ಉತ್ತೇನವೂ ಹೌದು.
ವಿನೋದ್ ಪ್ರಭಾಕರ್ ಮತ್ತು ದರ್ಶನ್ ಆರಂಭ ಕಾಲದಿಂದಲೂ ಗೆಳೆಯರು. ವಿನೋದ್ ಯಾವುದೇ ಚಿತ್ರ ಮಾಡಿದರೂ ದರ್ಶನ್ ಸಪೋರ್ಟು ಇದ್ದೇ ಇತ್ತು. ಯಜಮಾನ ಚಿತ್ರೀಕರಣದ ಸಂದರ್ಭದಲ್ಲಿಯೂ ವಿನೋದ್ ಸೆಟ್ಟಿಗೆ ಭೇಟಿ ನೀಡಿದ್ದಲ್ಲದೇ ಒಂದು ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದರು. ಒಂದು ಹಂತದಲ್ಲಿ ನಾಯಕನಾಗಿ ನಟಿಸಿದರೂ ನೇಪಥ್ಯಕ್ಕೆ ಸರಿದಿದ್ದ ವಿನೋದ್ ಕಥೆ ಮುಗಿದೇ ಹೋಯ್ತು ಅನ್ನುವಂಥಾ ವಾತಾವರಣವಿತ್ತಲ್ಲಾ? ಅವರು ಮತ್ತೆ ಎದ್ದು ನಿಲ್ಲುವಲ್ಲಿ ದರ್ಶನ್ ಪಾತ್ರ ದೊಡ್ಡದಿತ್ತು.
ಇದೀಗ ತನ್ನ ಗೆಳೆಯನಿಗೆ ದೊಡ್ಡ ಮಟ್ಟದಲ್ಲಿಯೇ ಬ್ರೇಕ್ ನೀಡೋ ಉದ್ದೇಶದಿಂದ ವಿನೋದ್ ಯಜಮಾನ ತಂಡದ ಚಿತ್ರದಲ್ಲಿ ನಾಯಕನಾಗಿ ನಟಿಸೋ ಅವಕಾಶವನ್ನೂ ಖುದ್ದು ದರ್ಶನ್ ಅವರೇ ನೀಡಿದ್ದಾರೆ. ಇದು ಛಾಲೆಂಜಿಂಗ್ ಸ್ಟಾರ್ ಸ್ನೇಹಶೀಲತೆಗೊಂದು ತಾಜಾ ಉದಾಹರಣೆ.
No Comment! Be the first one.