ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ನ್ಯಾಯಾಲಯದ ತೀರ್ಪಿನ  ಅನ್ವಯ ತಾವು ಬಹಳ ವರ್ಷಗಳ ಕಾಲ ಬಾಡಿಗೆಗಿದ್ದ ಬನಶಂಕರಿ ಮನೆಯನ್ನು ಎರಡು ತಿಂಗಳ ಬಾಡಿಗೆ 80ಸಾವಿರ ಮೊತ್ತದ ಡಿಡಿ ಪಾವತಿಸುವ ಮೂಲಕ ಹಿಂತಿರುಗಿಸಿದ್ದರು. ಅಷ್ಟಾದರೂ ಯಶ್ ಬಾಡಿಗೆ ಮನೆ ವಿಚಾರದಲ್ಲಿ ಮತ್ತೊಂದು ಹೊಸ ಕಿರಿಕ್ ಶುರುವಾಗಿದೆ.

ಬಾಡಿಗೆ ಮನೆ ಖಾಲಿ ಮಾಡೋ ವೇಳೆಯೂ ಯಶ್ ಕುಟುಂಬದವರು ಶಾಕ್ ನೀಡಿರುವುದಾಗಿ ಓನರ್ ಮುನಿಪ್ರಸಾದ್ ಆರೋಪಿಸಿದ್ದಾರೆ.

ಹೌದು.. ರಾಕಿಂಗ್ ಸ್ಟಾರ್ ಯಶ್ ಸುಮ್ಮನೆ ಮನೆ ಖಾಲಿ ಮಾಡಿಕೊಡೋದನ್ನು ಬಿಟ್ಟು, ಮನೆಯಲ್ಲಿನ ಪೀಠೋಪಕರನ್ನು ಧ್ವಂಸ ಮಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಕಬೋರ್ಡ್ ನ ಬಾಗಿಲುಗಳು, ಟ್ಯೂಬ್ ಲೈಟ್ ಗಳು, ನಾಪತ್ತೆ ಯಾಗಿದ್ದು, ಬಾತ್ ರೂಂ ಕಮೋಡ್, ಸ್ವಿಚ್ ಬೋರ್ಡ್ ಗಳನ್ನು ಪೀಸ್ ಪೀಸ್ ಮಾಡಲಾಗಿದೆಯಂತೆ.

ಅನಗತ್ಯವಾಗಿ ಚಿಕ್ಕ ವಿಚಾರವನ್ನು ದೊಡ್ಡದು ಮಾಡಿ ಮಾನ ಹರಾಜು ಹಾಕಿದನೆಂದು ಹಾಗೂ ಅದೃಷ್ಟದ ಮನೆಯನ್ನು ಖಾಲಿ ಮಾಡಬೇಕೆಂಬ ಹತಾಶೆಗೆ ಒಳಗಾಗಿ  ರಾಕಿಂಗ್ ಸ್ಟಾರ್ ಮನೆಯವರೇ ಮಾಡಿದ್ದಾರೆ ಎನ್ನಲಾಗುತ್ತಿದೆ.

CG ARUN

ದರ್ಶನ್ ಮನೆ ಮುಂದೆ ಬಿದ್ದ ಮರ ತೆರವು ಗೊಳಿಸದ ಬಿಬಿಎಂಪಿ!

Previous article

ಚಾಮುಂಡಿ ಬೆಟ್ಟಕ್ಕೆ ಪವರ್ ಸ್ಟಾರ್ ದಿಢೀರ್ ಭೇಟಿ!

Next article

You may also like

Comments

Leave a reply

Your email address will not be published. Required fields are marked *