ಸಾಮಾನ್ಯವಾಗಿ ಕೆಲ ಚಿತ್ರಗಳ ಹಾಡುಗಳು ಯೂಟ್ಯೂಬ್ ನಲ್ಲಿ ಸಿನಿಮಾ ರಿಲೀಸ್ ಆಗುವವರೆಗೂ ಟ್ರೆಂಡಿಂಗ್ ನಲ್ಲಿರುತ್ತದೆ. ಕೆಲವೊಮ್ಮೆ ಸಿನಿಮಾ ರಿಲೀಸ್ ಆಗಿ ಕೆಲ ದಿನಗಳ ವರೆಗೂ ಸಾಂಗು ಗುನುಗುವಂತೆಯೂ ಮಾಡುತ್ತದೆ. ಆದರೆ ಕಳೆದ ಡಿಸೆಂಬರ್ ನಲ್ಲಿ ರಿಲೀಸ್ ಆಗಿದ್ದ ಮಾರಿ 2 ಚಿತ್ರದ ರೌಡಿ ಬೇಬಿ ಸಾಂಗ್ ಈಗಲೂ ಯೂಟ್ಯೂಬ್ ನಲ್ಲಿ 500 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.
ಈ ಮೂಲಕ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡುಗಳ ಪೈಕಿ ಮೊದಲ ಸ್ಥಾನವನ್ನುಳಿಸಿಕೊಂಡಿದೆ. ಈ ಹಾಡಿಗೆ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ ಈ ಹಾಡನ್ನು ಧನುಷ್ ಅವರೇ ಬರೆದು ಹಾಡಿದ್ದಾರೆ.
No Comment! Be the first one.