ನಟಿಸಿದ ಬಹಳಷ್ಟು ಸಿನಿಮಾಗಳೇನು ಸ್ಯಾಂಡಲ್ ವುಡ್ ನಲ್ಲಿ ಯಶಸ್ಸನ್ನು ಗಳಿಸುವಲ್ಲಿ ವಿಫಲವಾದ ಪರಿಸ್ಥಿತಿಯಲ್ಲಿದ್ದ ವಿನೋದ್ ಪ್ರಭಾಕರ್ ಬದುಕಿಗೆ ರಗಡ್ ಸಿನಿಮಾ ಎನರ್ಜಿ ಬೂಸ್ಟರ್ ಎಂದರೆ ತಪ್ಪಾಗಲಾರದು. ವಿನೋದ್ ಪ್ರಭಾಕರ್ ರವರ ಸಿನಿಮಾ ಪ್ರೇಮ, ಚಿತ್ರರಂಗದಲ್ಲಿ ಬೆಳೆಯಲೇಬೇಕೆಂಬ ತುಡಿತ, ಪ್ರಬುದ್ಧ ನಟನೆ, ಸಿನಿಮಾಕ್ಕೆ ತಕ್ಕ ಬಾಡಿ ಮೇನ್ ಟೇನ್ಸ್ ಎಲ್ಲವೂ ರಗಡ್ ಸಿನಿಮಾದಲ್ಲಿ ಕಾಣಸಿಗುತ್ತದೆ. ಮೇಲಾಗಿ ವಿನೋದ್ ಪ್ರಭಾಕರ್ ಗೆ ರಗಡ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ತಳವೂರಲೊಂದು ಆಯುಧವೇ ಸರಿ. ಮಾರ್ಚ್ ನಲ್ಲಿ ರಿಲೀಸ್ ಭಾಗ್ಯ ಕಂಡು ಪ್ರೇಕ್ಷಕರ ಮುಖದಲ್ಲಿ ನಗೆ, ನಿರ್ಮಾಪಕರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದ್ದ ರಗಡ್ ಸಿನಿಮಾ, ಸ್ಟಾರ್ ನಟರ ಸಿನಿಮಾಗಳ ಮಧ್ಯೆಯೂ 50 ದಿನಗಳನ್ನು ಪೂರೈಸಿ, ನೂರನೇ ದಿನದತ್ತ ಹೆಜ್ಜೆ ಇಟ್ಟಿರುವುದು ವಿನೋದ್ ಪ್ರಭಾಕರ್ ಗೆ ಶುರುವಾದ ರಮ್ಯಚೈತ್ರಕಾಲವೇ ಸರಿ.
ಕಾಡಂಚಿನಲ್ಲಿ ಬದುಕು ಸಾಗಿಸುವ ಜನರ ಮೇಲೆ ಸರ್ಕಾರದ ನೀತಿಗಳು, ಪೊಲೀಸರ ಕ್ರೌರ್ಯ, ಬದುಕು ಕಳೆದುಕೊಂಡವರನ್ನು ಆವರಿಸಿಕೊಳ್ಳುವ ಶೂನ್ಯತೆ, ನೊಂದವರ ಆಕ್ರೋಶ… ಇದೆಲ್ಲರ ಪರಿಣಾಮದಿಂದ ಏನೆಲ್ಲಾ ಘಟಿಸಬಹುದೆಂಬ ವಿಚಾರವನ್ನೇ ಮುಖ್ಯ ಕಥಾ ವಸ್ತುವನ್ನಾಗಿಟ್ಟಿಕೊಂಡು ರಗಡ್ ಸಿನಿಮಾ ತಯಾರಾಗಿತ್ತು. ಅದರಂತೆ ಪ್ರೇಕ್ಷಕರ ತನುಮನದಲ್ಲಿ ಉಳಿಯುವಲ್ಲಿಯೂ ಯಶಸ್ವಿಯಾಗಿದೆ. ಈ ಸಿನಿಮಾದ ಮೂಲಕ ವಿನೋದ್ ಪ್ರಭಾಕರ್ ಗೆ ಬದಲಾದ ಜೀವನ ಮಟ್ಟ ಮತ್ತಷ್ಟು ಮೆರಗು ನೀಡಲಿ ಎಂಬುದೇ ಸಿನಿಬಜ್ ಹಾರೈಕೆ. ರಗಡ್ ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶನ ಮಾಡಿದ್ದು, ಜೈ ಆನಂದ್ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದರು. ಅಭಿಮನ್ ರಾಯ್ ಸಂಗೀತ ನಿರ್ದೇಶನವೂ ರಗಡ್ ಸಿನಿಮಾಕ್ಕಿದ್ದು, ಅಮ್ಮ ಸಿನಿ ಕ್ರಿಯೇಷನ್ಸ್ ನಲ್ಲಿ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದರು.