ಬಾಲಿವುಡ್ ಸುಂದರಿ ಸಾರಾ ಅಲಿಖಾನ್ ತಮ್ಮ ಅಚ್ಚುಮೆಚ್ಚಿನ ನಾಯಿಯ ಜೊತೆ ತೆಗೆಸಿಕೊಂಡಿರುವ ಫೋಟೊವೊಂದನ್ನ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಆ ಚಿತ್ರದಲ್ಲಿ ಗಾಟ್ ಮೈ ಐಸ್ ಆನ್ ಯು (ನನ್ನ ಕಣ್ಣು ನಿನ್ನ ಮೇಲೆ) ಎಂದು ಬರೆದು ಶೇರ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ನಾಯಿಯ ಜೊತೆ ತಮ್ಮ ಎರಡು ಕೈಗಳನ್ನ ಚಾಚಿ ಒಂದು ಫೋಸ್ ನೀಡಿರುವ ಫೋಟೊವನ್ನ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿರುವುದು ಅವರ ಅಭಿಮಾನಿಗಳ ಮೆಚ್ಚುಗೆಯನ್ನೂ ಪಡೆದಿದೆ.
ಸಾರಾ ಅಲಿಖಾನ್ ಇತ್ತೀಚೆಗೆ ಜಾಲಿ ಟ್ರಿಪ್ ಗಾಗಿ ತಮ್ಮ ಸ್ನೇಹಿತೆಯರೊಂದಿಗೆ ನ್ಯೂಯಾರ್ಕ್ ಗೆ ತೆರಳಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳನ್ನ ಸಂಪರ್ಕಿಸುವ ಪ್ರಯತ್ನ ಅವರದ್ದಾಗಿದೆ. ಅದರಂತೆ ನ್ಯೂಯಾರ್ಕ್ ನಲ್ಲಿ ಸಿಕ್ಕ ನೂತನ ಸ್ನೇಹಿತನೊಂದಿಗೆ ತೆಗೆದ ಫೋಟೊವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಿನಿಮಾ ರಂಗದಲ್ಲಿಯೂ ಸಾರಾ ಆಲಿಖಾನ್ ಗೆ ಸಾಕಷ್ಟು ಅವಕಾಶ ದೊರೆಯುತ್ತಿದೆ. ಮುಂದಿನ ಚಿತ್ರ ಇಮ್ತಿಯಾಜ್ ಅಲಿ ನಿರ್ದೇಶನದ ಆಜ್ ಕಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ನಾಯಕ ನಟನಾಗಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ.
No Comment! Be the first one.