ನಟ ರಿಷಿ ಕನ್ನಡ ಚಿತ್ರರಂಗದಲ್ಲಿ ದಿಢೀರನೆ ಉದಯಿಸಿದ ಪ್ರತಿಭಾವಂತ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳ ಮೂಲಕ ಅಚ್ಛರಿ ಮೂಡಿಸಿತ್ತಿರುವ ಮತ್ತು ಕ್ರಮೇಣ ತಮ್ಮದೇ ಆದ ಸ್ಥಾನ ಸೃಷ್ಟಿಸಿಕೊಳ್ಳುತ್ತಿರುವ ಹೀರೋ ಕೂಡಾ ಹೌದು. ಆಪರೇಶನ್ ಅಲಮೇಲಮ್ಮ ಮತ್ತು ಕವಲು ದಾರಿಯ ನಂತರ ನಟ ರಿಷಿ ಅಭಿನಯಿಸಿರುವ ಮತ್ತೊಂದು ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ನಾಯಕ ತನ್ನ ಪ್ರೇಯಸಿಗಾಗಿ ಏನನ್ನಾದರೂ ಮಾಡಲು ಸಿದ್ದನಿರುತ್ತಾನೆ. ಅದಕ್ಕಾಗಿ ಕಂಟಕವೊಂದರಲ್ಲಿ ತಗುಲಿಕೊಂಡ ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ಸಾರ್ವಜನಿಕರಿಗೆ ಸುವರ್ಣಾವಕಾಶದ ಕಥಾಸಾರಾಂಶ. ಈ ಚಿತ್ರದ ಮಜವಾದ ಟ್ರೇಲರ್ ಈಗ ಬಿಡುಗಡೆಯಾಗಿದೆ. ಗಂಭೀರವಾದ ವಿಚಾರವೊಂದನ್ನು ಹಾಸ್ಯದ ಲೇಪನದ ಮೂಲಕ ಹೇಳಿದ್ದಾರೆ ಅನ್ನೋದು ಟ್ರೇಲರ್ ನೋಡಿದಾಗ ಗೊತ್ತಾಗುವಂತಿದೆ.

ಇತ್ತೀಚೆಗಷ್ಟೇ ರಾಜ್ ಕುಮಾರ್ ಹಾಡಿರುವ “ಏನು ಸ್ವಾಮಿ ಮಾಡೋಣ.. ಯಾರಿಗೇಳ್ಲಿ ಕಷ್ಟಾನ. ಒಂಟಿ ಮಾಡ್ತು ಲೋಕ ನನ್ನನ್ನ ಎನ್ನುವ ಮಜಬೂತಾದ ಸಾಂಗು ರಿಲೀಸಾಗಿತ್ತು. ವಿಶೇಷವಾದ ಡಾಬಾ ಮತ್ತು ಫುಡ್ ಸ್ಟ್ರೀಟ್ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿತ್ತು. ಈ ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ನಟಿಸುತ್ತಿದ್ದಾರೆ. ಸಾರ್ವಜನಿಕರಿಗೆ ಸುವರ್ಣಾವಕಾಶಕ್ಕೆ ಅನೂಪ್ ರಾಮಸ್ವಾಮಿ ಕಶ್ಯಪ್ ಚಿತ್ರಕತೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಇನ್ನು ಜನಾರ್ದನ್ ಚಿಕ್ಕಣ್ಣ, ಹರಿಕೃಷ್ಣ ಸಂಭಾಷಣೆ ಬರೆದಿದ್ದು, ವಿಜ್ಞೇಶ್ ರಾಜ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಆರ್ ದೇವರಾಜ್, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ ಬಂಡವಾಳವನ್ನು ಹೂಡಿದ್ದಾರೆ. ಇನ್ನು ಸಿನಿಮಾ ತಾರಾಂಗಣದಲ್ಲಿ ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣ ರಘು, ಶೀನು, ಮಿತ್ರ, ಶಾಲಿನಿ ಇತರರಿದ್ದಾರೆ.

CG ARUN

ಅರ್ಜುನ್ ಗೌಡ ಚಿತ್ರದಲ್ಲಿ ರಾಹುಲ್ ದೇವ್!

Previous article

ಪೊಲೀಸ್ ಕೆಲಸಕ್ಕೆ ಸೇರಿದರು ಸಿಂಪಲ್ ಶ್ವೇತಾ!

Next article

You may also like

Comments

Leave a reply

Your email address will not be published. Required fields are marked *