ಬಹುಭಾಷೆಗಳಲ್ಲಿ ಎಲ್ಲಾ ಮಾದರಿಯ ಹಾಡುಗಳಿಂದ ಫೇಮಸ್ ಆಗಿರುವ ಶ್ರೇಯಾ ಘೋಷಾಲ್ ಸುಮಧುರ ಕಂಠ, ಹಾಟ್ ಬ್ಯೂಟಿ ಮುಖಾಂತರ ರಾಷ್ಟ್ರದಾದ್ಯಂತ ಅಭಿಮಾನಿಗಳ ಮನಸೂರೆಗೊಳಿಸಿದ್ದಾರೆ. ಸದ್ಯ ಈ ಗಾಯಕಿ ಸಿಂಗಪೂರ್ ಏರ್ ಲೈನ್ಸ್ ವಿರುದ್ಧ ಗರಂ ಆಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಶ್ರೇಯಾ ಘೋಷಾಲ್ ಟ್ವಿಟ್ಟರ್ ನಲ್ಲಿ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.
ಸಾಮಾನ್ಯವಾಗಿ ಗಾಯಕರು ಅಗತ್ಯ ಸಾಧನಗಳನ್ನು ತಮ್ಮ ಜೊತೆಗೆ ಕೊಂಡೊಯ್ಯುವುದು ರೂಢಿ. ಹೀಗೆ ಶ್ರೇಯಾ ಘೋಷಾಲ್ ಕೂಡ ಕೆಲವೊಂದು ಐಟಂಗಳನ್ನು ತಮ್ಮ ಜತೆಗೆ ತೆಗೆದುಕೊಂಡು ಹೋಗಿದ್ದು, ಈ ವೇಳೆ ವಿಮಾನದಲ್ಲಿ ಇವುಗಳನ್ನು ತೆಗೆದುಕೊಂಡು ಹೋಗಕೂಡದೆಂದು ಅಲ್ಲಿನ ಸಿಬ್ಬಂದಿ ತಡೆದಿದ್ದಾರೆ. ಈ ಆರೋಪದ ಟ್ವೀಟ್ ಗೆ ರೀ ಟ್ವೀಟ್ ಮಾಡಿರುವ ಸಿಂಗಪೂರ್ ಏರ್ ಲೈನ್ಸ್ ಅಧಿಕಾರಿಗಳು, ಈ ಬಗ್ಗೆ ನಾವು ನಿಮ್ಮನ್ನು ವಿಷಾದಿಸುತ್ತೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದೇ ಮತ್ತು ಕೊನೆಯದಾಗಿ ನಮ್ಮ ಸಿಬ್ಬಂದಿ ನಿಮಗೆ ಏನು ಸಲಹೆ ನೀಡಿದರು? ಎಂದು ಟ್ವೀಟ್ ಮಾಡಿದ್ದಾರೆ
No Comment! Be the first one.