ಸ್ಯಾಂಡಲ್ ವುಡ್ ನಲ್ಲಿ ಮೀಟು ಸುಂದರಿ ಎಂದೇ ಫೇಮಸ್ ಆಗಿರುವ ನಟಿ ಶೃತಿ ಹರಿಹರನ್. ಇತ್ತೀಚಗಷ್ಟೇ ಪಂಚಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ತಿರುಗಿಬಿದ್ದು, ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕಿಸಿಕೊಂಡಿದ್ದರು. ಅದಾದ ಮೇಲೆ ಚಿತ್ರರಂಗದಿಂದ ಅವಕಾಶ ವಂಚಿತರಾಗಿ ದೂರ ಉಳಿದಿದ್ದ ಶೃತಿ ಅಮೆರಿಕಾದಲ್ಲಿ ಅದಾವುದೋ ಟ್ರೇನಿಂಗ್ ಪಡೆಯುತ್ತಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿತ್ತು.

ಆರಂಭದಲ್ಲಿ ತಾನಿನ್ನು ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದ ಶೃತಿ ಹರಿಹರನ್ ಅರ್ಜುನ್ ಸರ್ಜಾ ಪ್ರಕರಣದಿಂದ ಶೃತಿ ರಾಮ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದಾರೆಂಬ ಶಾಕಿಂಗ್ ವಿಚಾರವೂ ರಿವೀಲ್ ಆಗಿತ್ತು. ಸದ್ಯ ಶೃತಿ ಹರಿಹರನ್ ಸೋಶಿಯಲ್ ಮೀಡಿಯಾದಲ್ಲಿ ತಾನು ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿದ್ದು, ತನ್ನ ಬೇಬಿ ಬಂಪ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ “ನನ್ನ ಬದುಕು ನಿನಗಾಗಿ ಹವಣಿಸುತ್ತಿದೆ ಎಂದೆನಿಸುತ್ತಿದೆ. ನನಗಿದು ಹೊಸದಾದ ಅನುಭವ. ನಿನ್ನ ಬರುವಿಕೆಗಾಗಿ ಕಾಯುವುದೇ ನನಗೆ ಕೆಲಸವಾಗಿ ಹೋಗಿದೆ. ಪುಟಾಣಿ ಕಡಲೆಕಾಯಿ ಈ ವಿಚಿತ್ರ ಜಗತ್ತಿಗೆ ನಿನ್ನನ್ನು ಸ್ವಾಗತಿಸಲು ಕಾಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

CG ARUN

ಬಣ್ಣದ ಲೋಕಕ್ಕೆ ಆರ್ ಜಿ ವಿ ಸೊಸೆ!

Previous article

ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಶುರು ಮಾಡಿಕೊಂಡ ಸಲಗ!

Next article

You may also like

Comments

Leave a reply

Your email address will not be published. Required fields are marked *