ಮೊದಲೆಲ್ಲಾ ಸತಿ ಪತಿ ವಿರಹ, ವಿರಸಗಳೆಲ್ಲವೂ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಹಾಗಲ್ಲ. ಗಂಡ ಹೆಂಡತಿಯ ಜಗಳ ಬೀದಿಗೆ ಬಂದಿದೆ. ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳ ಪ್ರವರ್ದಮಾನಕ್ಕೆ ಬಂದ ಮೇಲಂತೂ ತಂಟೆ ತಕರಾರುಗಳ ಟಿವಿ ಮಾಧ್ಯಮದ ಮೆಟ್ಟಿಲುಗಳನ್ನು ಹತ್ತಲು ಶುರು ಮಾಡಿಕೊಂಡಿದೆ. ಇರಲಿ.. ಇನ್ನು ದಂಪತಿಗಳ ನಡುವೆ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸವಿದ್ದರೆ ಮಾತ್ರ ಸಂಬಂಧಗಳು ಸ್ಟ್ರಾಂಗಾಗಿ ಉಳಿಯಲು ಸಾಧ್ಯವಿರುತ್ತದೆ ದಂಪತಿ ನಡುವಿನ ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ ಒಂದು ಕಾರ್ಯಕ್ರಮ ‘ಕಲರ್ಸ್ ಸೂಪರ್’ ಚಾನೆಲ್​ನಲ್ಲಿ ಸೂಪರ್ ದಂಪತಿ ಎಂಬ ಕಾರ್ಯಕ್ರಮ ಆರಂಭವಾಗುತ್ತಿದೆ. ಜುಲೈ 29ರಿಂದ ಸೋಮವಾರದಿಂದ ಶನಿವಾರ ಪ್ರತಿ ಸಂಜೆ 6ರಿಂದ 7ರವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ನಡೆಸಿಕೊಡುತ್ತಿದ್ದಾರೆ. ಹೊಸದಾಗಿ ಮದುವೆಯಾಗಿರುವ ಜೋಡಿಗಳಿಂದ ಆರಂಭವಾಗಿ ಮದುವೆಯ ಬೆಳ್ಳಿ ಹಬ್ಬ ಆಚರಿಸಿಕೊಂಡಿರುವವರು ಕೂಡ ಇದರಲ್ಲಿ ಭಾಗವಹಿಸಬಹುದು. ಅಲ್ಲದೇ ರಿಯಾಲಿಟಿ ಶೋಗಾಗಿ ಸ್ಪರ್ಧಿಗಳು ಯಾವೊಂದು ಸ್ಟುಡಿಯೋಗಳಿಗೆ ಹೋಗುವ ಅವಶ್ಯಕತೆಯೂ ಈ ಕಾರ್ಯಕ್ರಮದಲ್ಲಿ ಇಲ್ಲ. ಕರ್ನಾಟಕದ ನೂರಾರು ಊರುಗಳಿಗೆ ಪ್ರಯಾಣಿಸಲು ಮುರಳಿ ಸೇರಿದಂತೆ ಸೂಪರ್ ದಂಪತಿ ತಂಡವು ರೆಡಿಯಾಗಿದ್ದು, ದಂಪತಿಗಳ ಮನೆ ಬಾಗಿಲಿಗೆ ಬಂದು ಶೋ ಮಾಡುವ ಪ್ಲ್ಯಾನ್ ನಲ್ಲಿ ಕಲರ್ಸ್ ಸೂಪರ್ ಇದೆ.

Super Dampathi

MURALI IS COMING TO YOUR CITYTO FIND THE ONE AND ONLY

Gepostet von Super Dampathi am Montag, 10. Juni 2019

ಪ್ರತಿ ಊರಿಗೂ ಭೇಟಿ ನೀಡಿ ದಂಪತಿಗಳನ್ನು ಆಟವಾಡಿಸಿ ಮಾತಾಡಿಸಿ, ನಕ್ಕು ನಲಿಸಿ ಅವರಿಗೆ ಬಹುಮಾನಗಳನ್ನು ನೀಡುವ ಶೋ ಇದಾಗಿದೆ. ಪ್ರತಿ ಸಂಚಿಕೆಯಲ್ಲೂ ನಾಲ್ಕು ದಂಪತಿಗಳು ಮೂರು ಆಟಗಳನ್ನು ಆಡುತ್ತಾರೆ. ಪ್ರತಿ ಗೇಮ್ ಕೊನೆಗೆ ಒಂದು ಜೋಡಿ ಆಟದಿಂದ ಹೊರ ಹೋಗುತ್ತದೆ. ಕೊನೆಗೆ ಒಂದು ಜೋಡಿ ‘ಸೂಪರ್ ದಂಪತಿ’ಯಾಗಿ ಹೊರಹೊಮ್ಮುತ್ತಾರೆ. ಗೆಲ್ಲುವ ದಂಪತಿ ಬಂಗಾರದ ಮಾಂಗಲ್ಯ ಸರವನ್ನು ಬಹುಮಾನವಾಗಿ ಗೆಲ್ಲುತ್ತಾರೆ. ಈಗಾಗಲೇ ತುಮಕೂರು, ಶಿರಾ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ‘ಸೂಪರ್ ದಂಪತಿ’ ಕಾರ್ಯಕ್ರಮ ನಡೆದಿದೆ. ಮುಂದಿನ ಹಂತವಾಗಿ ಜಗಳೂರು, ಹರಿಹರ, ದಾವಣಗೆರೆ, ರಾಣೇಬೆನ್ನೂರು, ಬ್ಯಾಡಗಿಗಳಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ನಡೆಯುವ ಊರುಗಳಲ್ಲಿ ಒಂದು ವಾರದ ಮೊದಲೇ ಆಡಿಷನ್ ನಡೆಯುತ್ತದೆ. ಅದರಲ್ಲಿ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವೂಟ್​ನ ಮೂಲಕವೂ ದಂಪತಿಗಳು ಅರ್ಜಿ ಸಲ್ಲಿಸಬಹುದು. -https://www.voot.com/pages/super-dampati-registration-online/registration.html?platform=web

CG ARUN

ಅದ್ದೂರಿ 2 ಚಿತ್ರಕ್ಕೆ ಝರಾ ಯೆಸ್ಮೀನ್ ನಾಯಕಿ!  

Previous article

ಮಹಾರಾಷ್ಟ್ರದಲ್ಲಿ ಉರಿ ಸಿನಿಮಾ ಮತ್ತೊಮ್ಮೆ ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *