ಅಜೇಯ್ ರಾವ್ ಜೊತೆ ಧೈರ್ಯಂ ಚಿತ್ರದಲ್ಲಿ ನಟಿಸಿದ ನಂತರ ನಾಗಕನ್ನಿಕೆ ಅದಿತಿ ಪ್ರಭುದೇವ ಚಿತ್ರರಂಗದಲ್ಲಿಯೇ ಬೀಡು ಬಿಟ್ಟಿದ್ದಾರೆ. ಸಾಲು ಸಾಲಾಗಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರೋ ಅದಿತಿ ಇದೀಗ ನೀರ್ದೋಸೆ ಟೀಮಿನ ಹೊಸಾ ಚಿತ್ರಕ್ಕೂ ನಾಯಕಿಯಾಗಿ ಬರೋ ಸಾಧ್ಯತೆಗಳೇ ಹೆಚ್ಚಿವೆ.
ನೀರ್ದೋಸೆ ಮೂಲಕ ಗೆವುವೊಂದನ್ನು ಪಡೆದುಕೊಂಡಿದ್ದ ವಿಜಯಪ್ರಸಾದ್ ಮುಂದಿನ ಚಿತ್ರ ಯಾವುದೆಂಬುದರ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಅದೇಕೋ ಅನೌನ್ಸ್ ಆದ ಚಿತ್ರವೂ ಪೋಸ್ಟ್ ಪೋನ್ ಆಗಿತ್ತು. ಆದರೀಗ ವಿಜಯ ಪ್ರಸಾದ್ ಮತ್ತೆ ನವರಸ ನಾಯಕ ಜಗ್ಗೇಶ್ ಅವರ ಜೊತೆಗೊಂದು ಚಿತ್ರ ಮಾಡಲು ಮುಂದಾಗಿದ್ದಾರೆ. ಸದ್ದಿಲ್ಲದೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವೂ ಮುಗಿದಿದೆ. ಈ ಚಿತ್ರದ ಹೆಸರು ತೋತಾಪುರಿ!
ನೀರ್ದೋಸೆಯ ನಂತರ ತೋತಾಪುರಿ ಚಿತ್ರವನ್ನು ಜಗ್ಗೇಶ್ ಕೂಡಾ ಭಾರೀ ನಿರೀಕ್ಷೆ, ಭರವಸೆಯಿಂದಲೇ ಒಪ್ಪಿಕೊಂಡಿದ್ದಾರೆ. ಅದೇ ಉತ್ಸಾಹದಿಂದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ. ಆದರೆ ಒಂದು ಹಂತದ ಚಿತ್ರೀಕರಣ ಸಮಾಪ್ತಿಯಾದಾಗಲೂ ನಾಯಕಿ ಯಾರೆಂಬುದು ಮಾತ್ರ ಫೈನಲ್ ಆಗಿರಲಿಲ್ಲ. ಒಂದಷ್ಟು ನಟಿಯರನ್ನು ಮನಸಲ್ಲಿಟ್ಟುಕೊಂಡಿದ್ದರಾದರೂ ಅವರ್ಯಾರೂ ಈ ಪಾತ್ರಕ್ಕೆ ಸರಿ ಹೊಂದಿರಲಿಲ್ಲ. ಕಡೆಗೂ ವಿಜಯ ಪ್ರಸಾದ್ ಗಮನ ಅದಿತಿ ಪ್ರಭುದೇವ ಅವರತ್ತ ಹೊರಳಿಕೊಂಡಿದೆ.
ಈಗಾಗಲೇ ಈ ವಿಚಾರವಾಗಿ ಅದಿತಿಯನ್ನು ಅಪ್ರೋಚ್ ಮಾಡಲಾಗಿದೆ. ಕಥೆಯನ್ನೂ ಹೇಳಲಾಗಿದೆ. ಅದು ಅವರಿಗೆ ಇಷ್ಟವೂ ಆಗಿದೆಯಂತೆ. ಇನ್ನೇನಿದ್ದರೂ ಅದಿತಿ ತೋತಾಪುರಿ ಚಿತ್ರದ ನಾಯಕಿಯಾಗಿ ಅಧಿಕೃತವಾಗಿ ಎಂಟ್ರಿ ಕೊಡೋದಷ್ಟೇ ಬಾಕಿ ಉಳಿದುಕೊಂಡಿದೆ.
#
No Comment! Be the first one.